ಡಿಸೆಂಬರ್ ಒಳಗೆ ಸಿದ್ದು ರಾಜೀನಾಮೆ: ಸುರೇಶಗೌಡ

KannadaprabhaNewsNetwork |  
Published : Aug 26, 2025, 01:02 AM IST
ಗ್ರಾಮಾಂತರ ಶಾಸಕ ಬಿ. ಸುರೇಶಗೌಡ | Kannada Prabha

ಸಾರಾಂಶ

ಡಿಸೆಂಬರ್ ಒಳಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಂತೂ ಸತ್ಯ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಿಳಿಸಿದ್ದಾರೆ.

ಕನ್ನಡ ಪ್ರಭ ವಾರ್ತೆ ತುಮಕೂರುಡಿಸೆಂಬರ್ ಒಳಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಂತೂ ಸತ್ಯ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಖರ್ಗೆ ಸಿಎಂ ಆಗುತ್ತಾರೋ ಅಥವಾ ಡಿಕೆ ಶಿವಕುಮಾರ್ ಆಗುತ್ತಾರೋ ಅನ್ನುವುದನ್ನು ಕಾದು ನೋಡಬೇಕು ಎಂದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುಮಾರು ವರ್ಷಗಳ ಹಿಂದೆ ಆರ್.ಎಸ್.ಎಸ್ ಕಚೇರಿಗೆ ಹೋಗಿರುವುದು ನಿಜ, ಚಡ್ಡಿ ಹಾಕಿರುವುದು ನಿಜ. ಶಾಖೆಗೆ ಹೋಗಿದ್ದೆ ಎಂಬ ಸಾಕ್ಷಿಗೆ ಸದಾ ವತ್ಸಲೆ ಹಾಡನ್ನು ಹಾಡಿದ್ದಾರೆ ಎಂದು ತಿಳಿಸಿದರು. ಡಿಕೆಶಿಗೆ ಹಿಂದು ಧರ್ಮದ ಮೇಲೆ ನಂಬಿಕೆ ಇದೆ. ಹೀಗಾಗಿ ಅವರು ಪ್ರಯಾಗ್ ರಾಜ್ ಗೂ ಹೋಗುತ್ತಾರೆ, ಕೊಯಂಬತೂರ್ ನಲ್ಲಿ ಸದ್ಗುರು ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ. ಅದಾದ ಮೇಲೆ ಅಸೆಂಬ್ಲಿಯಲ್ಲಿ ಆರ್ ಎಸ್ ಎಸ್ ಗೀತಾ ಹಾಡಿದ್ದಾರೆ ಎಂದರು. ಈಗ ಡಿಕೆಶಿ ಆರ್ ಎಸ್ ಎಸ್ ಗೀತೆ ಹಾಡಿದ ತಕ್ಷಣ ಬಿಜೆಪಿಗೆ ಬರ್ತಾರೆ ಎಂಬುದು ಊಹಾ ಪೂಹಾ. ಅವರು ಕಟ್ಟಾ ಕಾಂಗ್ರೆಸ್ ವ್ಯಕ್ತಿ ಎಂದ ಅವರು, ಡಿಕೆ ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹಾಡಿದ ತಕ್ಷಣ ಕಾಂಗ್ರೆಸ್ ನವರು ಹಿಂದೂಪರ ಅಲ್ಲ ಎಂದರು.

ಹಿಂದೂಗಳ ಭಾವನೆಗಳ ಜೊತೆ ಚಲ್ಲಾಟ

ಬಾನು ಮುಸ್ತಾಕ್‌ ಅವರಿಂದ ದಸರಾ ಉದ್ಘಾಟನೆ ಮಾಡಿಸಲು ಸರ್ಕಾರ ಸಜ್ಜಾಗಿದೆ. ಅವರು ಚಾಮುಂಡಿಯನ್ನು ಒಪ್ಪಿಕೊಂಡು ಮಾಡುವುದಾದರೆ ಮಾಡಲಿ. ಈ ಹಿಂದೆ ಬರಗೂರು ಅವರನ್ನು ಕರೆತಂದು ಮಾಡಿದ್ದರು ಆಗ ಅವರು ದೀಪ ಬೆಳಗಲು ಹಿಂದೇಟು ಹಾಕಿದ್ದರು. ಅಂತಹ ನಾಸ್ತಿಕರಿಂದ ಉದ್ಘಾಟನೆ ಅವಶ್ಯಕತೆ ನಮಗಿಲ್ಲ ಎಂಬುದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ. ನನ್ನ ಹೆಸರಿನಲ್ಲಿ ರಾಮ ಇದ್ದಾನೆ ಎಂದು ಹೇಳುವ ಅವರು ಯಾವತ್ತೂ ಸಹ ರಾಮನಂತೆ ನಡೆದುಕೊಂಡಿಲ್ಲ ಎಂದರು.

ಸಿದ್ದರಾಮಯ್ಯ ಬಂದ ಮೇಲೆ ಹಿಂದೂ ಧರ್ಮದ ಮೇಲೆ ಒಂದಲ್ಲ ಒಂದು ದಾಳಿ ಮಾಡಿದ್ದಾರೆ. ನಾವಿದನ್ನು ಖಂಡಿಸುತ್ತೇವೆ. ವಿಜಯ ನಗರ ಕಾಲದಿಂದ ನಂತರ ಮೈಸೂರು ಮಹಾರಾಜರಿಂದ ಕಾಲದಿಂದಲೂ ದಸರಾ ನಡೆದುಕೊಂಡು ಬಂದಿದೆ. ಚಾಮುಂಡಿಗೆ ಕಾರ್ಯಕ್ರಮದಲ್ಲಿ ಭಕ್ತ ಸರ್ಪಿಣೆ ಮಾಡುವಂತದ್ದು. ಭಕ್ತಿಯ ಮೇಲೆ ದಾಳಿ ಮಾಡುವ ಕೆಲಸವನ್ನು ಪದೇ ಪದೇ ಮಾಡುತ್ತಿದ್ದಾರೆ. ನಾಸ್ತಿಕರ ಇಟ್ಟುಕೊಂಡು ಹಿಂದೂ ಧರ್ಮದ ಮೇಲೆ ದಾಳಿ ಮಾಡುವ ಸಿದ್ಧರಾಮಯ್ಯಗೆ ಆ ಚಾಮುಂಡಿ ದೇವಿನೆ ನೋಡ್ಕೊಳಮ್ಮ ಎಂದು ಪೂಜೆ ಮಾಡುವುದಾಗಿ ತಿಳಿಸಿದರು. ಬಾನು ಮುಸ್ತಾಕ್ ರನ್ನು ಮಸೀದಿಯಲ್ಲಿ ಕರೆದುಕೊಂಡು ಹೋಗಿ ಗುರುತಿಸಿ, ಮಸೀದಿ, ದರ್ಗಾದಲ್ಲಿ ಉದ್ಘಾಟನೆ ಮಾಡಿಸಲಿ. ಮುಸಲ್ಮಾನರು ಮಸೀದಿಗೆ ಹಿಂದೂಗಳನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿಸುತ್ತಾರಾ? ಅದು ಸಾಧ್ಯನಾ ? ಎಂದು ಪ್ರಶ್ನಿಸಿದ ಅವರು ಈ ರೀತಿ ಆದರೇ ಜನರೇ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಾರೆ ಎಂದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ