ಸೃಜನಶೀಲ ಶಿಷ್ಯಬಳಗ ಕಟ್ಟಿದ ಸಿದ್ನೆಕೊಪ್ಪ

KannadaprabhaNewsNetwork |  
Published : Jul 15, 2024, 01:48 AM IST
ಕಾರ್ಯಕ್ರಮದಲ್ಲಿ ಡಾ. ಎಸ್.ಎಫ್.ಸಿದ್ನೆಕೊಪ್ಪ ಅವರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃಪಟಲದಲ್ಲಿ ಸದಾ ಕಾಲ ನಿಲ್ಲುತ್ತಾರೆ. ಇಂದು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದಲೆ ಸಾಧ್ಯವಾಗಿದೆ

ಗದಗ: ದೇಶ ಕಟ್ಟುವ ಸೃಜನಶೀಲ ಸಮಾಜ ನಿರ್ಮಿಸುವ ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ಅರ್ಪಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸಿರುವದರ ಮೂಲಕ ಸೇವಾ ನಿವೃತ್ತರಾಗುತ್ತಿರುವ ಡಾ.ಎಸ್.ಎಫ್. ಸಿದ್ನೆಕೊಪ್ಪ ಕಾರ್ಯ ಪ್ರಶಂಸನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಅವರು ಬೆಟಗೇರಿ ಹೊರವಲಯದ ನಾಗಸಮುದ್ರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಿದ ಡಾ.ಎಸ್.ಎಫ್. ಸಿದ್ನೆಕೊಪ್ಪ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಗೈದು ಮಾತನಾಡಿದರು.

ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃಪಟಲದಲ್ಲಿ ಸದಾ ಕಾಲ ನಿಲ್ಲುತ್ತಾರೆ. ಇಂದು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದಲೆ ಸಾಧ್ಯವಾಗಿದೆ ಆ ಹಿನ್ನೆಲೆಯಲ್ಲಿ ಶ್ರಮಿಸಿರುವ ಸಿದ್ನೆಕೊಪ್ಪ ಅವರ ದೀರ್ಘ ಸೇವೆ ಜನಮಾನಸದಲ್ಲಿ ನೆಲೆ ನಿಲ್ಲುವಂತಹದು ಎಂದರು.

ವಿಪ ಸದಸ್ಯ ಎಸ್.ಬಿ. ಸಂಕನೂರ ಮಾತನಾಡಿ, ಶಿಕ್ಷಣದ ನಿಜವಾದ ಗುರಿ ಚಾರಿತ್ರ್ಯನಿರ್ಮಾಣ ಶಿಕ್ಷಣವೆಂದರೆ ಪಠ್ಯ ಕಲಿಕೆಯಲ್ಲ ಜೀವನದ ಮೌಲ್ಯಗಳ ಶಿಸ್ತು ಸಂಸ್ಕಾರ ತುಂಬುವ ಕೆಲಸ ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವೆನಿಸುವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಸದಾ ತಮ್ಮ ವೃತ್ತಿ ಜೀವನದ ಉದ್ದಕ್ಕು ಜ್ಞಾನದಾಸೋಹ ಮಾಡಿರುವ ಡಾ.ಸಿದ್ನೆಕೊಪ್ಪ ಅವರ ಹೃದಯಸ್ಪರ್ಶಿ ಕಾರ್ಯ ಎಂದು ಮರೆಯಲಾರದಂತಹದು ಎಂದರು.

ಸನ್ಮಾನ ಸ್ವೀಕರಿಸಿದ ಡಾ.ಎಸ್.ಎಫ್. ಸಿದ್ನೆಕೊಪ್ಪ ಮಾತನಾಡಿ, ದೇಶದ ನಿಜವಾದ ಭವಿಷ್ಯ ಅಡಗಿರುವುದು ವಿದ್ಯಾರ್ಥಿಗಳ ಕೈಯಲ್ಲಿ ಅಂತಹ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಕಾರ್ಯ ಮಹತ್ವಪೂರ್ಣವಾದದ್ದು, ಆ ಹಿನ್ನೆಲೆ ಅವರ ಭವಿಷ್ಯಕ್ಕಾಗಿ ಶಿಕ್ಷಕ ವೃಂದ ಮತ್ತು ಪಾಲಕರು ಶ್ರಮಿಸಲು ಮುಂದಾಗಿ ಎಂದು ತಿಳಿಸಿದರು.

ಈ ವೇಳೆ ಡಾ.ಆರ್.ಎಂ. ಕುಬೇರಪ್ಪ, ಡಾ. ಐ.ಎ. ಪಿಂಜಾರ ಹಾಗೂ ಅತಿಥಿ ಉಪನ್ಯಾಸಕರ ರಾಜ್ಯಾಧ್ಯಕ್ಷ ಡಾ. ಹನಮಂತಗೌಡ. ಆರ್.ಕಲ್ಮನಿ ಮಾತನಾಡಿದರು. ಡಾ. ಎಸ್.ಎಫ್. ಸಿದ್ನೆಕೊಪ್ಪ ಅವರಿಗೆ ವಿವಿಧ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು, ನಗರದ ವಿವಿಧ ಗಣ್ಯರಿಂದ ಸನ್ಮಾನ ಜರುಗಿತು ಹಾಗೂ ನೂತನ ಕಾಲೇಜು ಸಮಿತಿಯವರಿಗೂ ಸನ್ಮಾನಿಸಲಾಯಿತು.

ಪ್ರಾದೇಶಿಕ ಜಂಟಿ ನಿದೆರ್ಶಕ ಪ್ರಕಾಶ ಹೊಸಮನಿ, ಪ್ರಾ. ಕಲೀಲ ಅಹ್ಮದ ಚಿಕ್ಕೇರೂರ, ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಅಧ್ಯಕ್ಷ ಅಕಬರಸಾಬ್‌ ಬಾಬರ್ಜಿ, ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ, ಅಸೂಟಿ, ಎಸ್.ಎನ್. ಬಳ್ಳಾರಿ, ಪ್ರಾ. ಶಿವಪ್ಪ ಕುರಿ, ಎಂ.ಯು. ಹಿರೇಮಠ, ಡಾ.ಅಪ್ಪಣ್ಣ ಹಂಜೆ, ಡಾ. ರಮೇಶ ಕಲ್ಲನಗೌಡರ, ಕಾಲೇಜು ಸಮಿತಿ ಸದಸ್ಯ ಆರ್.ಎಚ್. ಏಕಬೋಟೆ, ಶಂಕರ ರಜಪೂತ, ಮಲ್ಲಿಕಾರ್ಜುನ ಐಲಿ, ಹೊನ್ನಪ್ಪ ಸಾಕಿ, ಡಾ.ದಿವಾಕರ ಪರಕಾಳೆ, ಶಿವಕುಮಾರ ಬೆಟಗೇರಿ, ಅಂಬರೀಷ ಚಾಗಿ, ವಿಜಯ ಕಬಾಡಿ, ಮಹಮ್ಮದ ಶಾಲಗಾರ, ಬಸವರಾಜ ಕಡೇಮನಿ, ಅಶೋಕ ಮಂದಾಲಿ, ಕುಸುಮಾ ಬೆಳಗಟ್ಟಿ ಹಾಗೂ ಸಿಬ್ಬಂದ್ದಿವರ್ಗ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ