ಸಂದೇಶ್ ನಾಗರಾಜು ಅವರಿಂದ ಗಣನೀಯ ಸಾಧನೆ: ಡಿ.ಶ್ರೀನಿವಾಸ್

KannadaprabhaNewsNetwork |  
Published : Aug 31, 2025, 01:08 AM IST
30ಕೆಎಂಎನ್ ಡಿ13 | Kannada Prabha

ಸಾರಾಂಶ

ಟಿಎಪಿಸಿಎಂಎಸ್ ನಿರ್ದೇಶಕರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಜನಸೇವೆ ಮಾಡಿದ್ದಾರೆ. ಸಂಸ್ಥೆಗೆ ವೈಯಕ್ತಿಕವಾಗಿ 10 ಲಕ್ಷ ಹಣನೀಡಿದ ಕೊಡುಗೈದಾನಿಗಳಾಗಿದ್ದಾರೆ. 80 ವಸಂತಗಳನ್ನು ಪೂರೈಸಿರುವ ಅವರು ಮುಂದಿನ ದಿನಗಳಲ್ಲಿ ಇವರು ಮತ್ತಷ್ಟು ಉತ್ತುಂಗ ಸ್ಥಿತಿಗೆ ಏರಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜು ಅವರು ಉದ್ಯಮ, ರಾಜಕೀಯ, ಸಹಕಾರ ಹಾಗೂ ಚಿತ್ರರಂಗ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಚೇರಿಯಲ್ಲಿ ಸಂಸ್ಥೆ ನಿರ್ದೇಶಕರೂ ಆದ ಮಾಜಿ ಎಂಎಲ್‌ಸಿ ಸಂದೇಶ್ ನಾಗರಾಜು ಅವರನ್ನು ಅಭಿನಂದಿಸಿ ಮಾತನಾಡಿ, ಸಂದೇಶ್ ನಾಗರಾಜು ಅವರು 60 ವರ್ಷಗಳಿಂದ ಸಿನಿಮಾ, ರಾಜಕೀಯ, ಸಹಕಾರ ಕ್ಷೇತ್ರ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಟಿಎಪಿಸಿಎಂಎಸ್ ನಿರ್ದೇಶಕರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಜನಸೇವೆ ಮಾಡಿದ್ದಾರೆ. ಸಂಸ್ಥೆಗೆ ವೈಯಕ್ತಿಕವಾಗಿ 10 ಲಕ್ಷ ಹಣನೀಡಿದ ಕೊಡುಗೈದಾನಿಗಳಾಗಿದ್ದಾರೆ. 80 ವಸಂತಗಳನ್ನು ಪೂರೈಸಿರುವ ಅವರು ಮುಂದಿನ ದಿನಗಳಲ್ಲಿ ಇವರು ಮತ್ತಷ್ಟು ಉತ್ತುಂಗ ಸ್ಥಿತಿಗೆ ಏರಲಿ ಎಂದು ಹಾರೈಸಿದರು.

ಅಭಿನಂದನೆ ಸ್ವೀಕರಿಸಿದ ಸಂದೇಶ್ ನಾಗರಾಜ್ ಮಾತನಾಡಿ, ನಾನು ಸಾಕಷ್ಟು ಸನ್ಮಾನ, ಅಭಿನಂದನೆಗಳನ್ನು ಸ್ವೀಕರಿಸಿದ್ದೇನೆ. ಆದರೆ, ನನ್ನ ಹುಟ್ಟೂರು, ಸ್ವಂತ ತಾಲೂಕಿನಲ್ಲಿ ಸ್ವೀಕರಿಸಿದ ಸನ್ಮಾನ ನನಗೆ ಸಾಕಷ್ಟು ತೃಪ್ತಿ ಹಾಗೂ ಖುಷಿತಂದುಕೊಟ್ಟಿದೆ ಎಂದರು.

ಸಂದೇಶ್ ನಾಗರಾಜು ಅವರ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನು ತೋರಿಸುವುದಕ್ಕಾಗಿ ನನ್ನ 80ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೇನೆ. ಸಮಾರಂಭಕ್ಕೆ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳು, ಶಾಸಕರು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಟಿಎಪಿಸಿಎಂಎಸ್ ಸಂಸ್ಥೆಯ ಉಪಾಧ್ಯಕ್ಷೆ ತಿಬ್ಬಮ್ಮ(ಪದ್ಮಮ್ಮ), ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ನಿರ್ದೇಶಕರಾದ ರಾಮಕೃಷ್ಣೇಗೌಡ, ಕೆ.ಎಸ್.ದಯಾನಂದ್, ಶ್ರೀಕಾಂತ್, ಬೆಟ್ಟಸ್ವಾಮೀಗೌಡ, ಕಣಿವೆಯೋಗೇಶ್, ಪುಷ್ಪಾವತಿ, ಚಿಟ್ಟಿಬಾಬು, ಜಯಶೀಲ, ಮಾಲತಿ, ಕಾರ್ಯದರ್ಶಿ ನವೀನ್ ಕುಮಾರ್, ಅರಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸೀತಾಪುರ ವಿಶ್ವನಾಥ್, ನೌಕರರ ವರ್ಗ, ಸಿಬ್ಬಂದಿಗಳು ಹಾಜರಿದ್ದರು.

ಬಿ.ಸಿ.ದೇವರಾಜು ಅವರ ಕಾರ್ಯದಕ್ಷತೆ ಶ್ಲಾಘನೀಯ: ದೊಡ್ಡಯ್ಯ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಪ್ರಯಾಣಿಕವಾಗಿ ಸೇವೆ ಸಲ್ಲಿಸಿರುವ ಗಣಿತ ಪ್ರಾಧ್ಯಾಪಕ ಬಿ.ಸಿ.ದೇವರಾಜು ಅವರ ಕಾರ್ಯದಕ್ಷತೆ ಶ್ಲಾಘನೀಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪುರ್ವ ಕಾಲೇಜಿನಲ್ಲಿ ಶನಿವಾರ ನಿವೃತ್ತಿಗೊಂಡ ಗಣಿತ ಪ್ರಾಧ್ಯಾಪಕ ಬಿ.ಸಿ.ದೇವರಾಜು ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿ.ಸಿ.ದೇವರಾಜು ಪ್ರಾಧ್ಯಾಪಕರ ಹುದ್ದೆ ಜೊತೆಗೆ ಕಚೇರಿಯಲ್ಲಿ ಖಾಲಿ ಇದ್ದ ಹುದ್ದೆ ಜವಾಬ್ದಾರಿಯನ್ನು ಯಶಸ್ವಿಗೆ ನಿರ್ವಹಿಸಿ ಇತರಿಗೆ ಮಾದರಿಯಾಗಿದ್ದರು. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪಿ.ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯಶ್ರೇಣಿ ಉಪನ್ಯಾಸಕ ಎಚ್.ವಿ.ನಿಂಗರಾಜು, ಉಪನ್ಯಾಸಕರಾದ ಮಲ್ಲಿಕಾರ್ಜುನಸ್ವಾಮಿ,ಸೌಭಾಗ್ಯ, ನಾಗರತ್ನ, ಆರ್.ದೇವಿಕಾ, ಶಿವಣ್ಣ, ಮಧು, ಎಸ್.ಹರೀಶ್, ದ್ವಿತೀಯ ದರ್ಜೆ ಸಹಾಯಕ ಶಿವಣ್ಣ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶಿವಲಿಂಗು, ಮಂಜುಳಾ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ