ಸೇವಾ ಸಹಯೋಗ ತಿಳಿವಳಿಕೆ ಪತ್ರ ಒಡಂಬಡಿಕೆಗೆ ಸಹಿ

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ಯೆನೆಪೊಯಾ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲೀನಾ ಕೆ.ಸಿ ಹಾಗೂ ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಎಸ್. ಭಟ್ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಶಕ್ತಿನಗರದಲ್ಲಿರುವ ಅರಿವು ಅರ್ಲಿ ಇಂಟರ್ ವೆನ್ಶನ್ ಸೆಂಟರ್ -ವಿಶೇಷ ಮಕ್ಕಳ ತರಬೇತಿ ಕೇಂದ್ರ ಹಾಗೂ ಯೆನೆಪೊಯಾ ನರ್ಸಿಂಗ್ ಕಾಲೇಜ್ ಪರಸ್ಪರ ಸೇವಾ ಸಹಯೋಗದ ತಿಳಿವಳಿಕೆ ಪತ್ರದ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮ ಅರಿವು ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.

ಯೆನೆಪೊಯಾ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲೀನಾ ಕೆ.ಸಿ ಹಾಗೂ ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಎಸ್. ಭಟ್ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಅರಿವು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಸಂಸ್ಥೆಯ ಬೆಳವಣಿಗೆ ಕುರಿತು ವಿವರಿಸಿದರು. ಯೆನೆಪೊಯಾ ಮೆಡಿಕಲ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್ ಎಂ. ವಿಶೇಷ ಅಗತ್ಯವುಳ್ಳ ಮಕ್ಕಳ ಆಹಾರ ಪದ್ಧತಿ ಹಾಗೂ ಬೆಳವಣಿಗೆಗೆ ಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಯೆನೆಪೊಯಾ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಬಿನಿಷ ಪಾಪಚ್ಚನ್, ಅಸೋಸಿಯೇಟ್ ಪ್ರೊಫೆಸರ್‌ಗಳಾದ ವಿಜಿ ಪ್ರಸಾದ್ ಸಿ, ಸುಬಿನ್ ರಾಜ್ ಆರ್, ಉಪನ್ಯಾಸಕಿ ವಿನೀಷಾ, ಅರಿವು ಟ್ರಸ್ಟ್ ಕಾರ್ಯದರ್ಶಿ ಡಾ. ರಾಧಾಕೃಷ್ಣ ಬಿ. ಭಟ್, ಟ್ರಸ್ಟ್ ನ ಲೆಕ್ಕಪರಿಶೋಧಕ ಸಿಎ ಬಿ.ಅರವಿಂದ ಕೃಷ್ಣ, ಅರಿವು ಟ್ರಸ್ಟ್ ನ ವಿವಿಧ ಸಮಿತಿಗಳ ಸದಸ್ಯರಾದ ಡಾ. ಶೀತಲ್ ಉಳ್ಳಾಲ್, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಅಧ್ಯಕ್ಷೆ ಆಶಾಲತಾ, ಉಪನ್ಯಾಸಕಿ ತೇಜಸ್ವಿನಿ ರೈ, ಪತ್ರಕರ್ತ ಹರೀಶ ಮಾಂಬಾಡಿ, ಅರಿವು ಶಿಕ್ಷಕಿಯರಾದ ಸಹನಾ ಕಿರಣ್, ಯಶ್ವಿನಿ, ರಶ್ಮಿತಾ, ತಿಲೋತ್ತಮಾ, ರಮ್ಯಾ ಸಂದೀಪ್, ಜಯಶ್ರೀ ಉಪಸ್ಥಿತರಿದ್ದರು. ಯೆನಪೊಯಾ ನರ್ಸಿಂಗ್ ಸಂಸ್ಥೆಯ ರಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

Share this article