ಕನ್ನಡಪ್ರಭ ವಾರ್ತೆ ಸಿಂಧನೂರು
ಸಿಂಧನೂರಿನ ಪವಿತ್ರ ಕುಟುಂಬ ದೇವಾಲಯದ ಮುಖ್ಯಗುರು ಜ್ಞಾನಪ್ರಕಾಶಂ ಮಾತನಾಡಿ, ಅಲ್ಪಸಂಖ್ಯಾತ ಕ್ರೈಸ್ತರು, ಶಾಂತಿಪ್ರಿಯರು ಸಹೋದರತೆಯಿಂದ ಸಹಬಾಳ್ವೆಯನ್ನು ನಡೆಸುತ್ತಾ ಬಂದಿದ್ದೇವೆ. ಆದರೆ ಕೆಲ ಕಿಡಿಗೇಡಿಗಳು ಉದ್ಧೇಶಪೂರ್ವಕವಾಗಿ ನಮ್ಮ ಸಮುದಾಯದವರ ಮೇಲೆ ಮತ್ತು ಚರ್ಚ್‌ಗಳ ಮೇಲೆ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ. ಅದರಲ್ಲೂ ಛತ್ತೀಸ್‌ಗಡದಲ್ಲಿ ಕಾನೂನುಬಾಹಿರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯವಾಗಿದೆ ಎಂದರು.
ಇದಕ್ಕೂ ಮುನ್ನ ಗಂಗಾವತಿ ರಸ್ತೆಯಲ್ಲಿರುವ ಪವಿತ್ರ ಕುಟುಂಬ ದೇವಾಲಯದಿಂದ ಮೌನ ಪಾದಯಾತ್ರೆಯ ಮೂಲಕ ಮಹಾತ್ಮಗಾಂಧಿ ವೃತ್ತಕ್ಕೆ ಕ್ರಿಶ್ಚಿಯನ್ ಸಮುದಾಯದ ಹಾಗೂ ದಲಿತಪರ ಸಂಘಟನೆಕಾರರು ಆಗಮಿಸಿದರು. ನಂತರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.ಈ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಎಚ್.ಎನ್.ಬಡಿಗೇರ್, ಆರ್.ಸಿ.ಎಫ್.ರಾಜ್ಯ ಸಮಿತಿ ಮುಖಂಡರಾದ ಎಂ.ಗಂಗಾಧರ, ಅಂಬ್ರೂಸ್, ಚಿನ್ನಪ್ಪ ಹೆಡಗಿಬಾಳ, ಕರ್ನಾಟಕ ರಕ್ಷಣಾ ವೇದಿಕೆಯ ದಾವಲಸಾಬ ದೊಡ್ಡಮನಿ, ಡಿಶ್ ಗಂಗಣ್ಣ, ರಾಜು ಬಾಬು, ಬಾಲಸ್ವಾಮಿ ವಕೀಲ ಸೇರಿದಂತೆ ಸಿಂಧನೂರು ವಲಯ ಪಾಲನಾ ಸಲಹಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.