ನೆಲವಾಗಿಲು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ

KannadaprabhaNewsNetwork | Published : Dec 31, 2024 1:01 AM

ಸಾರಾಂಶ

ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಬಿಜೆಪಿ ಬೆಂಬಲಿತ 12 ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ 7 ಒಟ್ಟು 31 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದರು. ಮತ ಎಣಿಕೆಯಾದಾಗ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಹೊಸಕೋಟೆ: ನಂದಗುಡಿ ಹೋಬಳಿಯ ನೆಲವಾಗಿಲು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12ಕ್ಕೆ 12 ಸದಸ್ಯರು ಗೆಲುವು ಸಾಧಿಸಿದ್ದಾರೆ.

ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಬಿಜೆಪಿ ಬೆಂಬಲಿತ 12 ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ 7 ಒಟ್ಟು 31 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದರು. ಮತ ಎಣಿಕೆಯಾದಾಗ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ನಾರಾಯಣಗೌಡ ಎಚ್.ಎಂ, ನಾರಾಯಣಗೌಡ ಎಚ್.ಕೆ, ಬೈರೇಗೌಡ ಎಚ್.ಎನ್, ಮುನೇಗೌಡ ಎಸ್.ಪಿ, ರಮೇಶ್ ಎನ್.ಡಿ, ಹಿಂದುಳಿದ ವರ್ಗದ ನಾಗೇಶ್ ಎಂ, ಧರ್ಮೇಶ್ ಎಚ್.ಎನ್, ಪರಿಶಿಷ್ಟ ಜಾತಿ ಮೀಸಲು ದಿನೇಶ್ ಸಿ.ಎನ್, ಪರಿಶಿಷ್ಟ ಪಂಗಡ ಚಂದ್ರಪ್ಪ, ಮಹಿಳಾ ಮೀಸಲಾತಿ ಪದ್ಮ ವಿ, ವನಿತ ಬಿ.ಎಂ, ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ನಾರಾಯಣಸ್ವಾಮಿ ಸಿ.ಎಂ. ಒಟ್ಟು 12 ಸದಸ್ಯರು ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೆ.ವಿ. ಮಾಧವರೆಡ್ಡಿ ಘೋಷಿಸಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ ಮಾತನಾಡಿ, ರೈತಾಪಿ ವರ್ಗಕ್ಕೆ ಸವಲತ್ತು ನೀಡುವುದರ ಮೂಲಕ ಶ್ರಮಿಸಿದ್ದರ ಫಲವಾಗಿ ಎಲ್ಲ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ ಎಂದರು. ಟಿಎಪಿಸಿಎಂಸಿ ಉಪಾಧ್ಯಕ್ಷ ರವೀಂದ್ರ, ತಾಪಂನ ಮಾಜಿ ಅಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯ ಬೀರಪ್ಪ, ಎಸ್‌ಎಫ್‌ಸಿಎಸ್ ಮಾಜಿ ಅಧ್ಯಕ್ಷ ಎಸ್‌ಬಿಟಿ ಬೈರೇಗೌಡ, ಎಸ್.ಮಂಜುನಾಥ್, ಎನ್. ಶ್ರೀನಿವಾಸ್, ರಾಜಣ್ಣ, ಗ್ರಾಪಂನ ಅಧ್ಯಕ್ಷರಾದ ವಸಂತ ಲೋಕೇಶ್, ಮುನಿವೆಂಕಟಮ್ಮ ಬಚ್ಚಪ್ಪ, ಮುಖಂಡರಾದ ಕೆ. ಮಂಜುನಾಥ್, ವಿ. ನಾರಾಯಣಸ್ವಾಮಿ, ಎ.ಆರ್. ಕೃಷ್ಣಪ್ಪ, ಜಿ. ಮೂರ್ತಿ, ಎನ್.ಗಂಗಾಧರ್ ಹಾಜರಿದ್ದರು

Share this article