ಇಲ್ಲಿನ ಆರಾಧ್ಯ ದೈವ ಶ್ರೀವೀರಭದ್ರೇಶ್ವರ ಹಾಗೂ ಶ್ರೀಶರಣಬಸವೇಶ್ವರರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕ ಸಹಸ್ರ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ತೇರಿಗೆ ವಿಶೇಷ ಪೂಜೆ ಮತ್ತು ನೂತನ ಬೆಳ್ಳಿ ಕಳಸ ಅರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕನ್ನಡಪ್ರಭ ವಾತೆ ಕಾರಟಗಿ
ಇಲ್ಲಿನ ಆರಾಧ್ಯ ದೈವ ಶ್ರೀವೀರಭದ್ರೇಶ್ವರ ಹಾಗೂ ಶ್ರೀಶರಣಬಸವೇಶ್ವರರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕ ಸಹಸ್ರ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ತೇರಿಗೆ ವಿಶೇಷ ಪೂಜೆ ಮತ್ತು ನೂತನ ಬೆಳ್ಳಿ ಕಳಸ ಅರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಪುರಸಭೆಯ ಬಳಿ ಹಾದು ಹೋಗಿರುವ ೩೧ನೇ ಕಾಲುವೆ ಬಳಿ ದೇವಸ್ಥಾನ ಸಮಿತಿಯವರು, ಮುತ್ತೈದೆಯರು ಬೆಳ್ಳಿ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಾಜಾ ಭಜಂತ್ರಿಯೊಂದಿಗೆ ಕುಂಭ-ಕಳಸ ಸಮೇತ ರಾಜ್ಯ ಹೆದ್ದಾರಿಯುದ್ದಕ್ಕೂ ತೇರಿನ ನೂತನ ಬೆಳ್ಳಿ ಕಳಸದ ಭವ್ಯ ಮೆರವಣಿಗೆಯಲ್ಲಿ ಕಳಸವನ್ನು ದೇವಸ್ಥಾನಕ್ಕೆ ತಂದರು.
ಅಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಪೂರೈಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂತನ ಬೆಳ್ಳಿ ಕಳಸ ಅರ್ಪಿಸಲಾಯಿತು.
ಈ ವೇಳೆ ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಹಾಗೂ ದೇವಸ್ಥಾನ ಸಮಿತಿಯ ಮುಖ್ಯಸ್ಥ ಗುಂಡಪ್ಪ ಕುಳಗಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.