ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಆಶ್ವಾಸನೆ, ಜಾತಿ ರಾಜಕಾರಣದ ಮಧ್ಯೆಯೂ ಸಜ್ಜನ ವ್ಯಕ್ತಿಯಾಗಿರುವ ಗದ್ದಿಗೌಡರ ೬೮,೭೭೧ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರನ್ನು ಮಣಿಸಿರುವುದು ದಾಖಲೆ ಎಂದರು.
ಗೆಲುವಿಗೆ ತೇರದಾಳ ಕಾರಣ : ಕಳೆದ ೪ ಲೋಕಸಭೆ ಚುನಾವಣೆಯಲ್ಲಿಯೂ ಪಿ.ಸಿ. ಗದ್ದಿಗೌಡರ ಗೆಲುವಿಗೆ ತೇರದಾಳ ವಿಧಾನಸಭೆ ಕ್ಷೇತ್ರ ಪ್ರಮುಖ ಕಾರಣವಾಗಿದೆ. ಈ ಬಾರಿಯೂ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸುಮಾರು ೧೦ ಸಾವಿರ ಮತಗಳು ಲಭಿಸಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಮತಗಳ ಲೀಡ್ ನೀದಿದ್ದರಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಗಲಕೋಟೆ ಪ್ರಥಮ, ಮುಧೋಳ ಕ್ಷೇತ್ರ ಎರಡನೇ ಸ್ಥಾನದಲ್ಲಿವೆ ಎಂದು ಸವದಿ ತಿಳಿಸಿದರು.ಬೋಗಸ್ ಗ್ಯಾರಂಟಿಗಳ ಮಧ್ಯೆ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಓಲೈಕೆ ಮಧ್ಯೆಯೂ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವ ಮೂಲಕ ದೇಶದ ಭದ್ರತೆಗಾಗಿ ಬಿಜೆಪಿ ಬೆಂಬಲಿಸಿರುವುದಕ್ಕೆ ಮತದಾರರನ್ನು ಅಭಿನಂದಿಸುತ್ತೇನೆಂದು ಸವದಿ ತಿಳಿಸಿದರು.
ಯಾವದೇ ರೀತಿಯ ಆಮಿಷಗಳು ನಡೆಯದು ಎಂದು ತೋರಿಸಿಕೊಟ್ಟು ಬಾಗಲಕೋಟೆ ಬಿಜೆಪಿಯ ಭದ್ರಕೋಟೆಯೆಂದು ಸಾಬೀತುಪಡಿಸುವ ಮೂಲಕ ಮೂರನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಕನಸು ನನಸು ಮಾಡಿದ್ದಕ್ಕೆ ಧನ್ಯವಾದ ತಿಳಿಸಿದರು.