ಕನ್ನಡಪ್ರಭ ವಾರ್ತೆ ಸಿಂದಗಿಸಿಂದಗಿ ತಾಲೂಕೆಂದರೆ ಕುಸ್ತಿ ಪಟುಗಳ ತವರುಮನೆ. ಸಿಂದಗಿ ನಗರದಲ್ಲಿ ಕಳೆದ 40 ವರ್ಷಗಳ ಹಿಂದೆ ಗರಡಿ ಮನೆ ಸ್ಥಾಪಿಸಿದ ಕೀರ್ತಿ ದಿ.ಆರ.ಬಿ.ಬೂದಿಹಾಳ ಗುರುಗಳಿಗೆ ಸಲ್ಲುತ್ತದೆ. ಅವರ ಇಡೀ ಜೀವನವನ್ನು ಕುಸ್ತಿಗಾಗಿ ಮೀಸಲಿಟ್ಟಿದ್ದರು ಎಂದು ಶಾಸಕ ಅಶೋಕ ಮನಗೂಳಿ ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಸಿಂದಗಿ ತಾಲೂಕೆಂದರೆ ಕುಸ್ತಿ ಪಟುಗಳ ತವರುಮನೆ. ಸಿಂದಗಿ ನಗರದಲ್ಲಿ ಕಳೆದ 40 ವರ್ಷಗಳ ಹಿಂದೆ ಗರಡಿ ಮನೆ ಸ್ಥಾಪಿಸಿದ ಕೀರ್ತಿ ದಿ.ಆರ.ಬಿ.ಬೂದಿಹಾಳ ಗುರುಗಳಿಗೆ ಸಲ್ಲುತ್ತದೆ. ಅವರ ಇಡೀ ಜೀವನವನ್ನು ಕುಸ್ತಿಗಾಗಿ ಮೀಸಲಿಟ್ಟಿದ್ದರು ಎಂದು ಶಾಸಕ ಅಶೋಕ ಮನಗೂಳಿ ಸ್ಮರಿಸಿದರು.ಪಟ್ಟಣದ ಎಚ್.ಜಿ.ಕಾಲೇಜಿನ ಆವರಣದಲ್ಲಿ ಬೆಂಗಳೂರು ನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಜಿಲ್ಲಾ ಉಪನಿರ್ದೇಶಕರ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ, ಎಚ್.ಜಿ.ಪಪೂ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕುಸ್ತಿಗೆ ವಿಶೇಷ ಸ್ಥಾನಮಾನವಿದ್ದು, ಶತಮಾನಗಳ ಇತಿಹಾಸವಿದೆ. ಮುಂದಿನ ಯುವ ಪೀಳಿಗೆಗೆ ಇಂತಹ ಕ್ರೀಡೆಗಳ ಬಗ್ಗೆ ತಿಳಿಯಬೇಕಾದರೆ ಮೇಲಿಂದ ಮೇಲೆ ದೇಸಿ ಕ್ರೀಡೆಗಳು ಜರುಗಬೇಕು. ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಕರೆ ನೀಡಿದರು.ರಾಜ್ಯ ಮಟ್ಟದಲ್ಲಿ ವಿಜೇತರಾದ ನಂತರ ರಾಷ್ಟ್ರ ಮಟ್ಟದಲ್ಲಿಯೂ ಛಾಪನ್ನು ಮೂಡಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಗಣ್ಯ ವ್ಯಕ್ತಿಗಳು, ವಿವಿಧ ಕಾಲೇಜಿನ ಪ್ರಾಚಾರ್ಯರು, ದೈಹಿಕ ಉಪನ್ಯಾಸಕರು, ವಿವಿಧ ಸಂಘ-ಸಂಸ್ಥೆಗಳು, ಕ್ರೀಡಾಭಿಮಾನಿಗಳು, ಪದವಿ ಪೂರ್ವ ಇಲಾಖೆ, ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ. ಈ ಭಾಗದ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಪ್ರೋತ್ಸಾಹ ನೀಡಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಾಜ್ಯದ 32 ಜಿಲ್ಲೆಗಳ ಸುಮಾರು 800ಕ್ಕೂ ಅಧಿಕ ಕುಸ್ತಿ ಪಟುಗಳು ಆಗಮಿಸಿದ್ದರು. ಪುರುಷ ಮತ್ತು ಮಹಿಳೆಯರ ಫ್ರೀ ಸ್ಟೈಲ್, ಪುರುಷ ಗ್ರೀಸೋ, ರೋಮನ್ ಸ್ಟೈಲ್ ಎಂಬ ಮೂರು ಪ್ರಕಾರಗಳಲ್ಲಿ ಪಂದ್ಯಾವಳಿ ನಡೆದವು.ಸಾನಿಧ್ಯವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸಿದ್ದರು. ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ, ಶಾಂತೇಶ ದುರ್ಗಿ, ಪ್ರಕಾಶ ಗೊಂಗಡಿ, ಸಂಸ್ಥೆಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ವಿ.ಬಿ.ಕುರುಡೆ, ಬಿ.ಜಿ.ನೆಲ್ಲಗಿ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಕೆ.ಎಚ್.ಸೋಮಾಪೂರ, ಡಾ.ರವಿ ಗೋಲಾ, ಸತೀಶ ಬಸರಕೋಡ, ಗವಿಸಿದ್ದಪ್ಪ ಆನೆಗುಂದಿ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿವಿಧ ಕಾಲೇಜಿನ ಪ್ರಾಚಾರ್ಯರು, ದೈಹಿಕ ಉಪನ್ಯಾಸಕರು, ಕುಸ್ತಿಪಟುಗಳು ಹಾಗೂ ಕ್ರೀಡಾಭಿಮಾನಿಗಳು ಇದ್ದರು.
ಆಯೋಜಕರ ಅವ್ಯವಸ್ಥೆ:
ಮಳೆ ಬರುವ ಮುನ್ಸೂಚನೆ ಇದ್ದರು ಸಹ ಇಲಾಖೆ ಮತ್ತು ಪಂದ್ಯಾವಳಿ ಆಯೋಜಕರು ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೇ ಇರುವುದರಿಂದ ಮಳೆ ಬಂದ ಸಂದರ್ಭದಲ್ಲಿ ಕೆಲಕಾಲ ಪಂದ್ಯ ಸ್ಥಗಿತಗೊಂಡು ಅಸ್ತವ್ಯಸ್ತವಾಯಿತು. ಇದರಿಂದ ಕ್ರೀಡಾಭಿಮಾನಿಗಳು, ಕುಸ್ತಿಪಟುಗಳು, ದೈಹಿಕ ಉಪನ್ಯಾಸಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
24ಎಸ್‌ಎನ್‌ಡಿ01:ಸಿಂದಗಿ ಪಟ್ಟಣದ ಎಚ್.ಜಿ.ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾವಳಿಯನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹಾಗೂ ಶಾಸಕ ಅಶೋಕ ಮನಗೂಳಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.