ದೇಶ ಕಾಯುವ ಯೋಧರು, ಆಡಳಿತಗಾರರಿಗೆ ರಕ್ಷಣೆ ನೀಡಲು ಆಂಜನೇಯನಿಗೆ ಸಿಂಧೂರ ಪೂಜೆ

KannadaprabhaNewsNetwork |  
Published : May 11, 2025, 11:55 PM IST
ದೇಶ ಕಾಯೋ ಯೋಧರಿಗೆ ಮತ್ತು ಆಡಳಿತಗಾರರಿಗೆ ರಕ್ಷಣೆ ನೀಡೆಂದು ಆಂಜನೇಯನಿಗೆ ಸಿಂಧೂರ ಪೂಜೆ  | Kannada Prabha

ಸಾರಾಂಶ

ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಕರುಣಿಸೆಂದು ಪ್ರಾರ್ಥಿಸಿ ಉಪ್ಪಿನಂಗಡಿಯ ವನಭೋಜನದಲ್ಲಿ ನೆಲೆ ನಿಂತ ಆಂಜನೇಯ ಸ್ವಾಮಿ ದೇವರಿಗೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಿಂಧೂರ ಪೂಜೆ ಶನಿವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಆಪರೇಶನ್ ಸಿಂಧೂರದ ಮೂಲಕ ಪಾಕಿಸ್ಥಾನದ ವಿರುದ್ದ ಪ್ರತಿಕಾರಕ್ಕೆ ಮುಂದಾಗಿರುವ ಭಾರತೀಯ ಯೋಧರಿಗೆ ಮತ್ತು ಆಡಳಿತಗಾರರಿಗೆ ರಕ್ಷಾ ಕವಚವಾಗಿ ಹಾಗೂ ಪ್ರತಿ ಯತ್ನದಲ್ಲೂ ಯಶಸ್ಸನ್ನು ದಯಪಾಲಿಸಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಕರುಣಿಸೆಂದು ಪ್ರಾರ್ಥಿಸಿ ಉಪ್ಪಿನಂಗಡಿಯ ವನಭೋಜನದಲ್ಲಿ ನೆಲೆ ನಿಂತ ಆಂಜನೇಯ ಸ್ವಾಮಿ ದೇವರಿಗೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಿಂಧೂರ ಪೂಜೆ ಶನಿವಾರ ನೆರವೇರಿತು. ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷ ದಯಾನಂದ ಸರೋಳಿ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಮುಕುಂದ ಬಜತ್ತೂರು, ಸಂಧ್ಯಾ , ಗೀತಾ, ಸದಾನಂದ ಶೆಟ್ಟಿ, ರಾಘವ ನಾಯ್ಕ, ಶ್ರೀರಾಮ ಭಟ್ ಪಾತಾಳ, ವಸಂತ ಗೌಡ ಪಿಜಕ್ಕಳ, ಗಂಗಾಧರ ಗೌಡ ಪಿ ಎನ್, ಸದಾನಂದ ಶೆಟ್ಟಿ, ಚಂದ್ರಶೇಖರ್ ತಾಳ್ತಜೆ, ಹರಿರಾಮಚಂದ್ರ, ಎನ್ ಉಮೇಶ್ ಶೆಣೈ, ಮಹೇಶ್ ಬಜತ್ತೂರು, ರಾಮಚಂದ್ರ ಮಣಿಯಾಣಿ, ರಾಜಗೋಪಾಲ ಭಟ್ ಕೈಲಾರ್, ಧರ್ಣಪ್ಪ ನಾಯ್ಕ, ಪ್ರಸಾದ್ ಭಂಡಾರಿ, ವಿದ್ಯಾಧರ ಜೈನ್, ಕೃಷ್ಣ ಶೆಣೈ , ಕೆ ವಿ ಪ್ರಸಾದ್, ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ ಶೋಭಾ, ಪುಷ್ಪರಾಜ ಶೆಟ್ಟಿ , ಪ್ರವೀಣ ಆಳ್ವ, ರವೀಶ್ ಎಚ್ ಟಿ, ದೇವರಾಜ್, ಶಶಿಧರ್ ಹೆಗ್ಡೆ,. ಚಂದ್ರಹಾಸ ಹೆಗ್ಡೆ, ಮೊದಲಾದವರು ಇದ್ದರು.

ದೇವಾಲಯದ ಅರ್ಚಕ ಸಂದೀಪ್ ಭಟ್ ಸಿಂಧೂರ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧ
ಜಿಲ್ಲೆಗೆ ಒಲಿದುಬಂದ 17ಕ್ಕೂ ಅಧಿಕ ಕೊಡುಗೆಗಳು