ಮದುವೆಯಾಗಿ 10ನೇ ದಿನಕ್ಕೆ ಕರ್ತವ್ಯಕ್ಕೆ ತೆರಳಿದ ಯೋಧ

KannadaprabhaNewsNetwork | Updated : May 12 2025, 12:37 PM IST
Follow Us

ಸಾರಾಂಶ

ಆನಂದ ಷಣ್ಮುಖಪ್ಪ ಬಿಳಚಿ ಅವರು ಕಳೆದ ಎರಡು ವರ್ಷದಿಂದ ಭಾರತೀಯ ಸೇನೆಯಲ್ಲಿ ಯೋಧರಾಗಿ ಉತ್ತರ ಪ್ರದೇಶದ ಲಖನೌದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಟ್ಟೀಹಳ್ಳಿ: ಸೇನೆಯಿಂದ ಕರೆ ಬಂದ ಹಿನ್ನೆಲೆ ಮದುವೆಗಾಗಿ ಬಂದಿದ್ದ ಯೋಧರೊಬ್ಬರು ರಜೆ ಮೊಟಕುಗೊಳಿಸಿ ವಿವಾಹವಾಗಿ 10ನೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗಲು ಲಖನೌಗೆ ಶನಿವಾರ ಪ್ರಯಾಣ ಬೆಳೆಸಿದರು.

ಆನಂದ ಷಣ್ಮುಖಪ್ಪ ಬಿಳಚಿ ಅವರು ಕಳೆದ ಎರಡು ವರ್ಷದಿಂದ ಭಾರತೀಯ ಸೇನೆಯಲ್ಲಿ ಯೋಧರಾಗಿ ಉತ್ತರ ಪ್ರದೇಶದ ಲಖನೌದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆನಂದ ಅವರು ಮದುವೆ ಮಾಡಿಕೊಳ್ಳಲು 40 ದಿನ ರಜೆ ಪಡೆದು ಕಳೆದ ಏ. 23ರಂದು ಪಟ್ಟಣಕ್ಕೆ ಆಗಮಿಸಿದ್ದರು. ಅವರ ಮದುವೆ ಏ. 30ರಂದು ನಡೆದಿದೆ. ಇತ್ತೀಚೆಗೆ ಆಪರೇಷನ್‌ ಸಿಂದೂರ ಕಾರ್ಯಾಚರಣೆ ನಡೆದ ಹಿನ್ನೆಲೆ ಯೋಧ ಆನಂದ ಬಿಳಚಿ ಅವರಿಗೆ ಕೂಡಲೇ ಕರ್ತವ್ಯಕ್ಕೆ ಮರಳುವಂತೆ ಸೇನೆಯಿಂದ ಬುಲಾವ್‌ ಬಂದಿತ್ತು.

ಹೀಗಾಗಿ ಆನಂದ ಬಿಳಚಿ ಅವರು ಮದುವೆಯಾಗಿ 10 ದಿನದಲ್ಲೇ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲು ಶನಿವಾರ ರಾತ್ರಿ ಲಖನೌಗೆ ಪ್ರಯಾಣ ಬೆಳೆಸಿದರು. ಆನಂದ ಬಿಳಚಿ ಅವರನ್ನು ಶನಿವಾರ ಸಂಬಂಧಿಕರು, ಗೆಳೆಯರು ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು.

ಈ ವೇಳೆ ಗ್ರಾಮಸ್ಥರಾದ ರಾಜು ವೇರ್ಣೇಕರ್, ಕುಮಾರಸ್ವಾಮಿ ಗೌಡರ, ಮುತ್ತು ಬೆಣ್ಣಿ, ಶಿವರಾಜ ಗೂಳಪ್ಪನವರ, ಮಾಲತೇಶ ಬೆಣ್ಣಿ, ರಾಘು ನಾಯಕ, ಚನ್ನಬಸು, ರವಿ ಕಂಡೇಬಾಗೂರ, ಪ್ರವೀಣ ಅಡ್ಮನಿ ಮುಂತಾದವರು ಇದ್ದರು.

ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಶಿಗ್ಗಾಂವಿ: ವಿಶ್ವನಾಥ ಚಕ್ರವರ್ತಿ ಆನಂದವನ ಅಗಡಿ ಶ್ರೀಗಳ ನೇತೃತ್ವದಲ್ಲಿ ತಾಲೂಕು ಬ್ರಾಹ್ಮಣ ಸಮಾಜ ವತಿಯಿಂದ ಸಾರ್ವಜನಿಕ ಅಂಬಾಭವಾನಿ ಗೊಂದಲ ಕಾರ್ಯಕ್ರಮ ಪಟ್ಟಣದ ಇಡಗುಂಜಿ ಗಣಪತಿ ದೇವಸ್ಥಾನದಲ್ಲಿ ಚಂಡಿಹೋಮ ಮತ್ತು ವಿಠೋಬಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮತ್ತು ಲಲಿತ ಸಹಸ್ರನಾಮ, ಹೋಮ ಹವನಗಳು, ಮಹಾ ಮಂಗಳಾರತಿ ಅನ್ನಪ್ರಸಾದ ಜರುಗಿತು.ಸಮಾಜದ ಹಿರಿಯ ಮುಖಂಡ ಭೋದಣ್ಣಾ ಬೆಳಗಲಿ, ಮಹಾನಂದಿಗ್ರೀನ್ ಹಾಲು ಒಕ್ಕೂಟದ ನಿರ್ದೇಶಕ ರಾಘವೇಂದ್ರ ದೇಶಪಾಂಡೆ ಮಾತನಾಡಿದರು.

ತಮ್ಮಣ್ಣ ಜೋಶಿ, ಮೋಹನ ದೇಶಪಾಂಡೆ, ಅರವಿಂದ ಮುಳಗುಂದ, ಪ್ರಕಾಶ ಕುಲಕರ್ಣಿ, ದಿವಾಕರ ದೀಕ್ಷಿತ, ಶ್ರೀಕಾಂತ ಪೋತದಾರ, ಪವನ ಚಿಮ್ಮಲಗಿ, ಪ್ರಕಾಶ ಪೂಜಾರ, ಶ್ರೀಪಾದ ಸಂಕಣ್ಣವರ, ಗೋವಿಂದ ಕುಲಕರ್ಣಿ, ಕೃಷ್ಣಾ ಕುಲಕರ್ಣಿ, ರಾಜಾರಾಮ ಸಂಕಣ್ಣವರ, ಭೀಮಣ್ಣಾ ಕುಲಕರ್ಣಿ, ಸೀನಪ್ಪ ದೇಶಪಾಂಡೆ, ವೆಂಕಟಾಚಲ ಗುಡಿ, ನಯನಕುಮಾರ ಕುಲಕರ್ಣಿ, ಪ್ರಭಾ ಕುಲಕರ್ಣಿ, ಶ್ರೀದೇವಿ ಜೋಶಿ, ಮಾಲತಿ ಜೋಶಿ, ಸಂದ್ಯಾ ಬೆಳಗಲಿ, ಶ್ರಾವಣಿ ಚಿಮ್ಮಲಗಿ, ಸಹನಾ ಕೋಳಿವಾಡ, ದೀಪಾ ಕುಲಕರ್ಣಿ, ಸುನೀತಾ ದೇಶಪಾಂಡೆ, ರಮಾ ದೇಶಪಾಂಡೆ, ಶಾರದಾಬಾಯಿ ಕುಲಕರ್ಣಿ, ಅಶ್ವಿನಿ ಮುಳಗುಂದ, ಸಹನಾ ಸಂಕಣ್ಣವರ, ಸುಷ್ಮಾ ಕುಲಕರ್ಣಿ ಸೇರಿದಂತೆ ಸಮಾಜದ ಸದ್ಬಕ್ತರು ಉಪಸ್ಥಿತರಿದ್ದರು.