ಮುಂಗಾರು ತಂಬಾಕು ನಾಟಿಗೆ ರೈತರ ಸಿದ್ಧತೆ

KannadaprabhaNewsNetwork |  
Published : May 11, 2025, 11:54 PM IST
11ಎಚ್ಎಸ್ಎನ್12 : ತಂಬಾಕು ಸಸಿ ಮಡಿ ಮಾಡಿರುವುದು.  | Kannada Prabha

ಸಾರಾಂಶ

ಇಲ್ಲಿಯ ತಂಬಾಕು ಹರಾಜು ಮಾರುಕಟ್ಟೆ ಫ್ಲಾಟ್ ಫಾರಂ 7 ಹಾಗೂ 63 ರಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಸಸಿ ಮಡಿ ಬೆಳೆಸಲು ರೈತರು ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಲ್ಲಿಯ ತಂಬಾಕು ಹರಾಜು ಮಾರುಕಟ್ಟೆ ಫ್ಲಾಟ್ ಫಾರಂ 7 ಹಾಗೂ 63 ರಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಸಸಿ ಮಡಿ ಬೆಳೆಸಲು ರೈತರು ಆರಂಭಿಸಿದ್ದಾರೆ.

ವೈಜ್ಞಾನಿಕವಾಗಿ ಬೆಳೆ ಬೆಳೆದು ಉತ್ತಮ ಇಳುವರಿ ಜೊತೆಗೆ ಗುಣಮಟ್ಟದ ಉತ್ಪಾದನೆಗೆ ಕೈಗೊಳ್ಳುವ ನಿಟ್ಟಿನಲ್ಲಿ ರೈತರು ಟ್ರೇ ಸಸಿ ಮಾಡಿ ಬಿತ್ತನೆಗೆ ಮುಂದಾಗಿದ್ದಾರೆ. ಅರಕಲಗೂಡು ತಾಲೂಕಿನ ರಾಮನಾಥಪುರ ದೊಡ್ಡಮಗ್ಗೆ ಹಳ್ಳಿ ಮೈಸೂರ್ ಮುಂತಾದ ಹೋಬಳಿಗಳಲ್ಲಿ 20 ಸಾವಿರ ತಂಬಾಕು ರೈತರು ಹೊಗೆಸೊಪ್ಪು ಬೆಳೆಯನ್ನೇ ನೆಚ್ಚಿಕೊಂಡಿದ್ದು, ಬಹುತೇಕ ಭಾಗದಲ್ಲಿ ರೈತರ ಸಸಿ ಮಾಡಿ ಬೆಳೆಸಲು ಸಿದ್ಧತೆ ಕೈಗೊಂಡಿದ್ದಾರೆ. ತಂಬಾಕು ಬೆಳೆ ಈ ಭಾಗಕ್ಕೆ ಕಾಲಿಟ್ಟ ಆರಂಭದಲ್ಲಿ ಹೆಚ್ಚಿನ ರೈತರು ನೀರಾವರಿ ಸೌಲಭ್ಯ ಇರುವ ಕಡೆ ಜಮೀನಿಗೆ ಬೀಜ ಭಿತ್ತಿ ಮಡಿ ಮಾಡಿ ನೀರು ಸಿಂಪರಣೆ ಮಾಡಿ ಸಸಿ ಮಡಿ ಬೆಳೆಸುವ ಪದ್ಧತಿ ಅನುಸರಿಸಿದ್ದರು. ಹಳೆಯ ಪದ್ಧತಿಯಂತೆ ಸಸಿ ಮಡಿಗೆ ಹೆಚ್ಚಿನ ಶ್ರಮ ಹಾಕಬೇಕಿತ್ತು.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ರೈತರು ಸಸಿ ಮಡಿ ಟ್ರೈನಲ್ಲಿ ಬೆಳೆಸಲು ಆಸಕ್ತಿ ವಹಿಸಿದ್ದಾರೆ. ಬಿಸಿಲಿನ ತಾಪಮಾನದಿಂದ ಸಸಿ ಮಡಿಗಳನ್ನು ರಕ್ಷಿಸಿಕೊಳ್ಳಲು ರೈತರು ಟ್ರೇ ಸಸಿ ಬಿತ್ತನೆ ಮೊರೆ ಹೋಗಿದ್ದಾರೆ. ಸಸಿ ಮಡಿಗಳನ್ನು ಟ್ರೈನಲ್ಲಿ ಬೆಳೆಸಿ ಮಳೆ ಬಿದ್ದ ತಕ್ಷಣ ನಾಟಿ ಮಾಡಿದರೆ ಗಿಡಗಳು ತೇವಾಂಶದ ಕೊರತೆ ನೀಗಿ ಬೇಗ ಬೆಳವಣಿಗೆಗೆ ಕಾಣಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೆಚ್ಚಿನ ರೈತರು ಸಸಿ ಮಡಿಗಳನ್ನು ಟ್ರೈನಲ್ಲಿ ಬೆಳೆಸುತ್ತಿದ್ದಾರೆ. ತಂಬಾಕು ಗಿಡಗಳಲ್ಲಿ ಕಾಣಿಕೊಳ್ಳುವ ಸೊರಗು ರೋಗವನ್ನು ಪರಿಸರ ಸ್ನೇಹಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಿಸಲು ಟ್ರೈಕೋಡರ್ಮಾ ಬಳಕೆ ಅತ್ಯವಶ್ಯಕ ಮಾಡುವಾಗ ಕೋ ಕೋಪಿಕ್ ಜೊತೆ ಬೆಳೆಸಿದ ಟ್ರೇ ಮಾಡುವಾಗ ಕೋಕೋಪಿತ್ ಜತೆ ಬೆಳೆಸಿದ ಟ್ರೇಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಬೆಳೆಸಿ ಸೊರಗು ರೋಗವನ್ನು ಟ್ರೇ ಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಬೆಳಸಿದರೆ ಸೊರಗು ರೋಗವನ್ನು ಟ್ರೈಮತ್ತು ಜಮೀನಿನಲ್ಲಿ ಹತೋಟಿಗೆ ತರಬಹುದು.

ಈ ರೋಗ ಹತೋಟಿ ತರಲು ಒಂದು ಸಿಂಗಲ್ ಬ್ಯಾರನ್ ಗೆ ನೆರಳಿನಲ್ಲಿ 3 ಕೆಜಿ ಎಷ್ಟು ಟ್ರೈಕೋಡರ್ಮಾ 1 ಕೆ.ಜಿಯಟ್ಟು ಬೇವಿನ ಹಿಂಡಿ ಮತ್ತು 50ರಿಂದ 60 ಕೆಜಿ ಎಷ್ಟು ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ನೀರನ್ನು ಹಾಕಬೇಕು. ಆದರೆ ನೀರು ಹೊರಕ್ಕೆ ಹರಿಯಬಾರದು ಹಾಗೆಯೇ ತೇವಾಂಶವನ್ನು ನಿಯಂತ್ರಣ ಮಾಡಬೇಕು. ನಂತರ ಗೋಣಿಚೀಲದ ಮುಚ್ಚಿ ಪ್ರತಿದಿನ ನೀರನ್ನು ಹಾಕಿ ತೇವಾಂಶ ಸರಿಯಾಗಿರುವಂತೆ ನೋಡಿಕೊಳ್ಳಬೇಕು. 8ರಿಂದ 10 ದಿನಗಳ ನಂತರ ಬಿಳಿಯ ಬಣ್ಣದ ಪರದೆಯ ಸಿಲಿಂದ್ರದ ಬೆಳವಣಿಗೆ ಕಾಣಿಸುತ್ತದೆ. ಹೀಗೆ ಬೆಳವಣಿಗೆಯಾದ ಟ್ರೈ ಕೊಡೋರ್ಮಾವನ್ನು ಕೊಡಮಾರಗವನ್ನು ಒಂದು ಚೀಲ ಕೋಕೋಪಿತ್ ಒಂದು ಬಾಣಲಿ ಎಷ್ಟು ಬೆರಸಿಕೊಳ್ಳಬೇಕು. ಇದರಿಂದ ಸೊರಗು ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವ ಅವಶ್ಯಕತೆ ಇರುವುದಿಲ್ಲ.

ರೋಗ ನಿಯಂತ್ರಣ ಮತ್ತು ಹಣದ ಉಳಿತಾಯಕ್ಕೆ ನೆರವಾಗುತ್ತದೆ. ಮುಖ್ಯವಾಗಿ ಟ್ರೇ ಮಾಡುವ ಹತ್ತರಿಂದ ಹನ್ನೆರಡು ದಿವಸಗಳ ಮುಂಚೆಯೇ ಟ್ರೇ ಕೊಡಮಾರ್ಗದ ಬೆಳವಣಿಗೆಯ ಕಾರ್ಯವನ್ನು ಪ್ರಾರಂಭಿಸಬೇಕು. ಟ್ರೇಕೊಡರ್ಮಾ ಆರು ತಿಂಗಳಿಗಿಂತ ಹಳೆಯದಾಗಿರಬಾರದು. ಆದ್ದರಿಂದ ತೆಗೆದುಕೊಳ್ಳುವಾಗ ಉತ್ಪಾದನಾ ದಿನಾಂಕವನ್ನು ಸಹ ಪರಿಶೀಲಿಸಿಕೊಳ್ಳಬೇಕು. ಟ್ರೈನ್ ಬೆಳವಣಿಗೆ ಯಾದ ನಂತರ ಗೊಬ್ಬರದ ರಾಶಿಯನ್ನು ಮಿಶ್ರಣ ಮಾಡಿಕೊಳ್ಳಬೇಕು ಎನ್ನುತ್ತಾರೆ ಅಧಿಕಾರಿಗಳು.ಜಮೀನಿನಲ್ಲಿ ಸೊರಗು ರೋಗ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಸಸಿ ಮಡಿಗಳಿಗೆ ಜಮೀನಿಗೆ ನಾಟಿ ಮಾಡುವ ಮೂರ್ನಾಲ್ಕು ದಿನ ಮುಂಚಿತವಾಗಿ 20 ಗ್ರಾಂ ಡೋಮಿಲ್ ಗೋಲ್ಡ್ 10 ಗ್ರಾಂ ಗೋ ಇಟ್ ಮತ್ತು 100 ಗ್ರಾಂ ಪಟಾಸಿಯಂ ನೈಟ್ರೇಟ್ ಹದಿ ಲೈಟ್ 15 ಲೀಟರ್ ಹಾಕಿಟ್ಟರೆ ಸಸಿಗಳಿಗೆ ಸಿಂಪಡಿಸಿದ ನಂತರ ಜಮೀನಿಗೆ ನಾಟಿ ಮಾಡುವುದು ಸೂಕ್ತ. ನಾಟಿ ಮಾಡಿದ ಹತ್ತರಿಂದ ಹನ್ನೆರಡು ದಿನಗಳ ನಂತರ ಸೊರಗು ರೋಗಕ್ಕೆ ವೆಲ್ ಮತ್ತು ಕಪ್ಪು ಕಾಂಡದ ರೋಗ ನಿಯಂತ್ರಣಕ್ಕೆ ರಿಡಾ ಮಿಲ್ 200 ಗ್ರಾಂ ಮತ್ತು ಗ್ಲೋಇಟ್ 100 ಎಂಎಲ್ ಜೊತೆಗೆ ಒಂದು ಕೆಜಿ ಫೋಟೋಸಿಯಂ ಅನ್ನು 200 ಲೀಟರ್ ನೀರಿನ ಡ್ರಮ್ ಗೆ ಸೇರಿಸಿ ಒಂದು ಈ ಲೋಟದಷ್ಟನ್ನು 80 ರಿಂದ 100 ಎಂಎಲ್‌ ಔಷಧಿಯನ್ನು ಗಿಡಕ್ಕೆ ಬುಡಕ್ಕೆ ಔಷಧಿಯನ್ನು ನೀಡಬೇಕು. ಇದರಿಂದ ತಂಬಾಕು ಗಿಡಗಳು ರೋಗದಿಂದ ಮುಕ್ತಿ ಕಾಣುತ್ತವೆ ಬೆಳಗಾರರು ಈ ವಿಧಾನಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು. ತಂಬಾಕು ಬೆಳಗಾರರಿಗೆ ಸಸಿ ಮಡಿ ಬೆಳೆಸಲು ವಿವಿಧ ಸ್ಥಳೀಯ ಬೀಜ ವಿತರಿಸಲಾಗಿದೆ. ವೈಜ್ಞಾನಿಕ ವಿಧಾನ ಅನುಸರಿಸಿ ಟ್ರೈನಲ್ಲಿ ಸಸಿ ಮಾಡಿ ಬೆಳೆಸಬೇಕು. ಇದರಿಂದ ಮಳೆಬಿದ್ದ ಕೂಡಲೇ ನಾಟಿ ಕಾರ್ಯ ಮಾಡಲು ಅನುಕೂಲವಾಗುತ್ತದೆ ವೈ.ಎಲ್. ಸವಿತಾ, ತಂಬಾಕು ಮಾರುಕಟ್ಟೆ ಹರಾಜು ಅಧಿಕ ರಾಮನಾಥಪುರ.

ಸಕಾಲದಲ್ಲಿ ನಾಟಿ ನಡೆಸುವ ಉದ್ದೇಶದಿಂದ ಸಸಿ ಮಾಡಿ ಬೆಳೆಯಲು ಸಿದ್ಧತೆ ಕೈಗೊಂಡಿದ್ದು, ಈಗಾಗಲೇ ಗಿಡಗಳನ್ನು ರಕ್ಷಣೆ ಮಾಡಿಕೊಳ್ಳಲು ಟ್ರೇ ಸಸಿ ಮಡಿಗೆ ಒತ್ತು ನೀಡಲಾಗಿದೆ. ನಾಗರಾಜ ಮಲ್ಲಾಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ