ಪಾಪಿ ಪಾಕಿಸ್ತಾನಕ್ಕೆ ಇನ್ನೂ ಹೆಚ್ಚು ಶಿಕ್ಷೆ ಆಗಬೇಕು

KannadaprabhaNewsNetwork | Published : May 10, 2025 1:20 AM

ಜೈಷೆಮೊಹಮದ್ ಮುಖ್ಯಸ್ಥ ಅಜರ್ ನನ್ನು 1993 ರಲ್ಲಿ ಭಾರತ ಬಂದಿಸಿತ್ತು. ಅಜರ್ ಬಿಡುಗಡೆಗೆ ಒತ್ತಾಯಿಸಿ ಭಯೋತ್ಪಾದಕರು ವಿಮಾನ ಅಪಹರಣ ಮಾಡಿ ಅಜರ್‌ನನ್ನು ಬಿಡುಗಡೆ ಮಾಡಿಸಿದ್ದರು. ನಂತರ ಈ ಅಜರ್ ಪಾಕಿಸ್ತಾನ ದ ಪೆಹವಾಲ್‌ನಲ್ಲಿ ನೆಲೆಸಿದ್ದಾನೆ. ಮೊನ್ನೆ ಭಾರತ ನಡೆಸಿದ ದಾಳಿಯಲ್ಲಿ ಇದೇ ಪೆಹವಾಲ್ ನಲ್ಲಿನಲ್ಲಿ ಅಜರ್‌ನ ಅಡಗುದಾಣದಲ್ಲಿ ಆತನ ಕುಟುಂಬದ 13 ಜನರು ಸತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಭಯೋತ್ಪಾಧಕರ ನೆಲೆಗಳನ್ನು ಉಡಾಯಿಸಿದ ಬಳಿಕವೂ ಭಯೋತ್ಪಾದನೆಗೆ ನೆಲೆ ಮತ್ತು ಪ್ರಚೋದನೆ ನೀಡುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಇನ್ನು ಶಿಕ್ಷೆ ಆಗಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಜಿಲ್ಲೆಯ ಮಂಚೇನಹಳ್ಳಿ ಪಟ್ಟಣದಲ್ಲಿ ಶುಕ್ರವಾರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ ಮಂಚೇನಹಳ್ಳಿ ನಗರದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ವರ್ತಕರ ಸಮಸ್ಯೆಗಳನ್ನು ಆಲಿಸಿ, ಮಂಚೇನಹಳ್ಳಿ ಗೌರಿಬಿದನೂರು ಮುಖ್ಯ ರಸ್ತೆ ಯಿಂದ ಹಳೆಬುದ್ದಿವಂತನಹಳ್ಳಿ ಗ್ರಾಮಕ್ಕೆ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತೋಯ್ಬಾ ಉಗ್ರಗಾಮಿ ಸಂಘಟನೆ

ಈಗ ಪಾಕಿಸ್ತಾನದಲ್ಲಿ ಉಡಾಯಿಸಿರುವ ಪೆಹವಾಲ್ ನಗರಕ್ಕೆ ಕ್ರೂರ ಇತಿಹಾಸವಿದೆ. ಇದು ಜೈಷೆ ಮೊಹಮದ್, ಲಷ್ಕರಿ ತೋಯ್ಬಾ, ಉಗ್ರ ಸಂಘಟನೆಗಳ ತವರಾಗಿದೆ. ಅಫೀಜ್ ಸಯ್ಯದ್ ಲಷ್ಕರಿ ತೋಯ್ಬಾವನ್ನು 1986 ರಲ್ಲಿ ಬಾರತ ದೇಶವನ್ನು ಸಂಪೂರ್ಣವಾಗಿ ನಾಶ ಮಾಡುವ ಉದ್ದೇಶದಿಂದ ಸ್ಥಾಪಿಸಲಾಯಿತು. ಮುಂಬೈ ತಾಜ್ ಹೋಟೆಲ್ ದಾಳಿಯ ರೂವಾರಿಯೂ ಈತನೆ. ಲಷ್ಕರಿ ತೋಯ್ಬಾಗೆ ಒಸಾಮ ಬಿನ್ ಲಾಡೆನ್ ಬೆಂಬಲವಿತ್ತು ಎಂದರು.

ಜೈಷೆಮೊಹಮದ್ ಮುಖ್ಯಸ್ಥ ಅಜರ್ ನನ್ನು 1993 ರಲ್ಲಿ ಭಾರತ ಬಂದಿಸಿತ್ತು. ಅಜರ್ ಬಿಡುಗಡೆಗೆ ಒತ್ತಾಯಿಸಿ ಭಯೋತ್ಪಾದಕರು ವಿಮಾನ ಅಪಹರಣ ಮಾಡಿ ಅಜರ್‌ನನ್ನು ಬಿಡುಗಡೆ ಮಾಡಿಸಿದ್ದರು. ನಂತರ ಈ ಅಜರ್ ಪಾಕಿಸ್ತಾನ ದ ಪೆಹವಾಲ್‌ನಲ್ಲಿ ನೆಲೆಸಿದ್ದಾನೆ. ಮೊನ್ನೆ ಭಾರತ ನಡೆಸಿದ ದಾಳಿಯಲ್ಲಿ ಇದೇ ಪೆಹವಾಲ್ ನಲ್ಲಿನಲ್ಲಿ ಅಜರ್‌ನ ಅಡಗುದಾಣದಲ್ಲಿ ಆತನ ಕುಟುಂಬದ 13 ಜನರು ಸತ್ತಿದ್ದಾರೆ. ಇಂತಹ ಸಾಹಸ ಮಾಡಿರುವ ನಮ್ಮ ಕೇಂದ್ರ ಸರ್ಕಾರ ಮತ್ತು ಸೈನ್ಯಕ್ಕೆ ನನ್ನ ಅಭಿನಂದನೆಗಳು ಎಂದರು.

ವ್ಯಾಪಾರಕ್ಕೆ ಪರವಾನಗಿ ಅಗತ್ಯ

ಮಂಚೇನಹಳ್ಳಿ ಗೌರಿಬಿದನೂರು ಮುಖ್ಯ ರಸ್ತೆ ಯಿಂದ ಹಳೆ ಬುದ್ದಿವಂತನಹಳ್ಳಿ ಗ್ರಾಮಕ್ಕೆ 66 ಲಕ್ಷಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು ಶೀಘ್ರದಲ್ಲೆ ಕಾಮಗಾರಿ ಮುಗಿಯಲಿದೆ.ಮಂಚೇನಹಳ್ಳಿ ಪಟ್ಟಣದ ಗೌರಿಬಿದನೂರು- ಚಿಕ್ಕಬಳ್ಳಾಪುರ ರಸ್ತೆಯ ಅಂಗಡಿ ಮತ್ತು ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರಸ್ಥರಿಂದ ಕುಂದು ಕೊರತೆಗಳ ಅಹವಾಲು ಆಲಿಸಿದ್ದೇನೆ. ಎಲ್ಲ ವ್ಯಾಪರಿಗಳು ಗ್ರಾಮಪಂಚಾಯತಿಯಿಂದ ಪರವಾನಗಿ ಪಡೆದು ವ್ಯಾಪಾರಕ್ಕೆ ವ್ಯವಸ್ಥೆ ಮಾಡಿ ಕೊಳ್ಳಬೇಕು. ವ್ಯಾಪಾರಿಗಳ ತೊಂದರೆಗಳು ನನಗೆ ಅರ್ಥವಾಗುತ್ತದೆ. ಅವರಿಗೆ ಬೇಕಾದ ಮೂಲ ಭೂತ ವ್ಯೆವಸ್ಥೆಗಳನ್ನು ಮಾಡಿ ಕೊಡಲಾಗುವುದು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಕ್ಷ್ಮೀನಾರಾಯಣ,ರಮೇಶ್ ಬಾಬು, ರಾಜಣ್ಣ,ಅರವಿಂದ್,ಕುಪೇಂದ್ರ,ಅಲ್ಲು ಅನಿಲ್, ವಿನಯ್ ಬಂಗಾರಿ, ಗ್ರಾಮ ಪಂಚಾಯತಿ ಅಧಿಕಾರಿಗಳು, ಮತ್ತಿತರರು ಇದ್ದರು.