ಜಗತ್ತಿಗೆ ಬೆಳಕು ಕೊಟ್ಟವರು ಗಾಣಿಗರು: ಸಂಯುಕ್ತಾ

KannadaprabhaNewsNetwork |  
Published : Jun 13, 2025, 02:25 AM IST
ಕಾರ್ಯಕ್ರಮವನ್ನು ಸಂಯುಕ್ತಾ ಬಂಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿ ಗ್ರಾಮದಲ್ಲಿ ಗಾಣಿಗ ಸಮುದಾಯದವರು ಬಹಳಷ್ಟು ಬಲಿಷ್ಠರಾಗಿದ್ದು, ಗಾಣದೇವತೆ ಎಂದರೆ, ಅದು ಲಕ್ಷ್ಮಿ. ಹೀಗಾಗಿ ಸದಾಕಾಲ ಗಾಣಿಗ ಸಮಾಜದವರಿಗೆ ಬಡತನ ಅನ್ನುವುದಿಲ್ಲ. ಒಂದು ಗಾಣಕ್ಕೆ ಎತ್ತು ಕಟ್ಟಿ ಕಾಳುಗಳಿಂದ ಎಣ್ಣೆ ತೆಗೆದು ಜಗತ್ತಿಗೆ ಬೆಳಕು ಕೊಟ್ಟವರು ಗಾಣಿಗರು ಎಂದು ಗಜೇಂದ್ರಗಡ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತ ಬಂಡಿ ಹೇಳಿದರು.

ಗದಗ: ಪ್ರತಿ ಗ್ರಾಮದಲ್ಲಿ ಗಾಣಿಗ ಸಮುದಾಯದವರು ಬಹಳಷ್ಟು ಬಲಿಷ್ಠರಾಗಿದ್ದು, ಗಾಣದೇವತೆ ಎಂದರೆ, ಅದು ಲಕ್ಷ್ಮಿ. ಹೀಗಾಗಿ ಸದಾಕಾಲ ಗಾಣಿಗ ಸಮಾಜದವರಿಗೆ ಬಡತನ ಅನ್ನುವುದಿಲ್ಲ. ಒಂದು ಗಾಣಕ್ಕೆ ಎತ್ತು ಕಟ್ಟಿ ಕಾಳುಗಳಿಂದ ಎಣ್ಣೆ ತೆಗೆದು ಜಗತ್ತಿಗೆ ಬೆಳಕು ಕೊಟ್ಟವರು ಗಾಣಿಗರು ಎಂದು ಗಜೇಂದ್ರಗಡ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತ ಬಂಡಿ ಹೇಳಿದರು.

ನಗರದ ಚನ್ನಮ್ಮ ಭವನದಲ್ಲಿ ಜಿಲ್ಲಾ ಸಜ್ಜನ ಗಾಣಿಗ ಸಮಾಜ ಸುಧಾರಣಾ ಸಂಘ ಕಾರಹುಣ್ಣಿಮೆಯ ನಿಮಿತ್ತ ನಡೆದ ಗಾಣದೇವತಾ ಹಾಗೂ ಬಸವಣ್ಣ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವರಾಜ ನಿಂ.ಸಜ್ಜನರ ಮಾತನಾಡಿ, ಸಮಾಜ ಸಂಘಟಿತವಾಗಬೇಕು, ಬಹಳಷ್ಟು ಇತಿಹಾಸ ಹೊಂದಿರುವ ನಮ್ಮ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯಬೇಕೆಂದರೆ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕೆಂದರು.

ಗುರುಸಿದ್ದಪ್ಪ ಚ. ಕೊರವನವರ ಮಾತನಾಡಿ, ವ್ಯಕ್ತಿ ಬಿಟ್ಟು ಸಮಾಜ ಇಲ್ಲ ನಾವೆಲ್ಲರೂ ಸಮಾಜಕ್ಕಾಗಿ ತನು, ಮನ, ಧನ ಅರ್ಪಣೆಯಿಂದ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ನಾಗರಾಜ ಸಜ್ಜನರ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ರೈತಾಪಿ ವರ್ಗಕ್ಕೆ ಕೃಷಿ ಚಟುವಟಿಕೆ ನಡೆಸಲು ಸಿದ್ಧವಾಗಲು ನಾಂದಿ ಹಬ್ಬವೇ ಕಾರಹುಣ್ಣಿಮೆ ಮತ್ತು ಗಾಣದೇವತಾ ಪೂಜಾ ಹಬ್ಬವಾಗಿದೆ ಎಂದರು.

ಶಾರದಾ ಸಜ್ಜನರ, ಡಾ. ಸುನೀತಾ ಸಜ್ಜನ, ಸುಜಾತಾ ಸಜ್ಜನರ, ಆಶಾ ಸಜ್ಜನರ, ನಯನಾ ಸಜ್ಜನರ, ಬಸಲಿಂಗಪ್ಪ ಸಜ್ಜನ, ಶ್ರೀಧರ ಸಜ್ಜನ, ಕುಮಾರೇಶ ಸಜ್ಜನ, ಎಂ.ಪಿ. ಜಕ್ಕಲಿ, ಶಿವಲಿಂಗಪ್ಪ ವಡ್ಡಟ್ಟಿ, ಬಸವರಾಜ ಸಜ್ಜನ, ಎನ್.ಎಫ್. ಸಜ್ಜನ, ವಿಜಯಕುಮಾರ ಸಜ್ಜನ, ಮೀನಾಕ್ಷಿ ಕೊರವನ್ನವರ, ಹಾಗೂ ಸಮಾಜ ಬಾಂಧವರು ಇದ್ದರು. ಗುರುಸಿದ್ದಪ್ಪ ಶಿ.ಸಜ್ಜನ ಪ್ರಾರ್ಥಿಸಿದರು. ಉಮೇಶ ಸಜ್ಜನರ ಸ್ವಾಗತಿಸಿದರು, ಡಾ. ವಿ.ಎಂ.ಸಜ್ಜನ, ಕುಮಾರೇಶ ಸಜ್ಜನ ಪರಿಚಯಸಿದರು. ಪ್ರೊ. ಎಸ್.ಯು.ಸಜ್ಜನಶೆಟ್ಟರ ನಿರೂಪಿಸಿದರು. ಮಾಲಾ ವಿ.ಸಜ್ಜನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ