ಕನಕಗಿರಿ: ಉದಾರೀಕರಣ ನೀತಿ ಜಾರಿಗೊಳಿಸುವ ದೇಶದಲ್ಲಿ ಬದಲಾವಣೆ ತರುವಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಪಾತ್ರ ದೊಡ್ಡದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಹೇಳಿದರು.
ಸತತ ೧೦ ವರ್ಷಗಳ ಕಾಲ ಪ್ರಧಾನಿಯಾಗಿದ್ದ ಸಿಂಗ್ ಉತ್ತಮ ಆಡಳಿತ ನೀಡಿ ದೇಶವನ್ನು ಮುನ್ನೆಡೆಸಿದರು. ಸೋನಿಯಾಗಾಂಧಿ ನಿರ್ಧಾರದಿಂದ ದೇಶದಲ್ಲಿ ಸತತ ೧೦ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಿಂಗ್ ಅಭಿವೃದ್ಧಿಯಿಂದ ದೇಶದ ಜನ ಇಂದು ಹಳ್ಳಿ-ಹಳ್ಳಿಯಲ್ಲೂ ಅವರನ್ನು ನೆನೆಯುತ್ತಿದ್ದಾರೆ ಎಂದರು.
ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ಶರಣೇಗೌಡ, ಪ್ರಮುಖರಾದ ಪ್ರಶಾಂತ ಪ್ರಭುಶೆಟ್ಟರ್, ಶರಣಪ್ಪ ಭತ್ತದ, ಟಿ.ಜೆ. ರಾಮಚಂದ್ರ, ರಮೇಶ ಶ್ರೇಷ್ಠಿ ಸಿರವಾರ, ರವಿ ಪಾಟೀಲ್, ಖಲೀಲ್ ಎಲಿಗಾರ, ವೆಂಕೋಬ ಭೋವಿ, ಪಾಮಣ್ಣ ಅರಳಿಗನೂರು, ನೀಲಕಂಠ ಬಡಿಗೇರ, ಮದರಸಾಬ ಸಂತ್ರಾಸ್, ಚಂದುಸಾಬ ಗುರಿಕಾರ ಇತರರಿದ್ದರು. ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯಲಬುರ್ಗಾ: ಆರ್ಥಿಕ ತಜ್ಞ, ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಸಂತಾಪ ಸೂಚಿಸಿದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಬಿ.ಎಂ. ಶಿರೂರ ಮಾತನಾಡಿ, ದೇಶ ಕಂಡ ಒಬ್ಬ ಧೀಮಂತ ಆರ್ಥಿಕ ತಜ್ಞೆ, ಸೌಮ್ಯ ಸ್ವಭಾವದ ವ್ಯಕ್ತಿತ್ವನ್ನು ಹೊಂದಿದ ಡಾ. ಮನಮೋಹನ ಸಿಂಗ್ ಅವರ ನಿಧನದಿಂದ ಇಡೀ ದೇಶವೇ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞನನ್ನು ಕಳೆದುಕೊಂಡು ಅನಾಥವಾಗಿದೆ. ಇವರನ್ನು ಕಳೆದುಕೊಂಡ ಅವರ ಕುಟುಂಬ ವರ್ಗಕ್ಕೆ ದೇವರು ದು:ಖ ಭರಿಸಿಕೊಳ್ಳುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.ಬ್ಲಾಕ್ ಕಾಂಗ್ರೆಸ್ ವಕ್ತಾರ ಆನಂದ ಉಳ್ಳಾಗಡ್ಡಿ ಮಾತನಾಡಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಮಗೆ ಬಂದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ೧೦ ವರ್ಷಗಳ ಕಾಲ ಪ್ರಧಾನಿಯನ್ನಾಗಿ ಮಾಡಿದರು. ದೇಶ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಗುಣಗಾನ ಮಾಡಿದರು.