ಗಂಗಾವತಿ: ನಗರದ ಕೊಟ್ಟೂರು ಬಸವೇಶ್ವರ ಸಭಾಂಗಣದಲ್ಲಿ ಮಾತಾ ಕರೋಕೆ ಸ್ಟುಡಿಯೋ ಹಾಗೂ ಸಪ್ತಸ್ವರ ಸಾಂಸ್ಕೃತಿಕ ಕಲಾ ಬಳಗದ ಗಾಯಕರಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ಸ್ಮರಣೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಶಿವಪ್ಪ ಗಾಳಿ ಮಾತನಾಡಿ, ಸಂಗೀತ, ಸಾಹಿತ್ಯ, ಸಮಾಜ ಸೇವಾ ಕಾರ್ಯಕ್ಕೆ ತಮ್ಮ ಸಹಕಾರ ಇರುವದಾಗಿ ಹೇಳಿದರು.
ನಗರಸಭಾ ಮಾಜಿ ಉಪಾಧ್ಯಕ್ಷ ಶಂಕರಗೌಡ ಹೊಸಳ್ಳಿ ಮಾತನಾಡಿ, ನಗರದಲ್ಲಿ ಇಂತಹ ಸಂಗೀತ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.ಮುಖ್ಯ ಅತಿಥಿ ರಾಮಮೂರ್ತಿ ನವಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಳಕ್ಕೆ ಕರೋಕೆ ಸಂಗೀತವೆ ಕಾರಣ ಎಂದರು. ಸುವರ್ಣ ಸಾಧಕಿ ಡಾ. ಸಿ. ಮಹಾಲಕ್ಷ್ಮೀ ಮಾತನಾಡಿ, ರಾಜ್ಯೋತ್ಸವ ಆಚರಿಸುವ ನವಂಬರ್ ತಿಂಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಗಾಯಕರನ್ನು ಗುರುತಿಸುವುದು ಇಂತಹ ವೇದಿಕೆ ಸಹಕಾರಿಯಾಗಿದೆ ಎಂದರು.
ಮಲ್ಲಪ್ಪ ಬಾಳೆಕಾಯಿ, ಮಂಜುನಾಥ ಗೋಡಿನಾಳ, ವೀರೇಶ ಪಪ್ತಿ, ಲಕ್ಕಪ್ಪನಾಯಕ, ಶಿವಮೂರ್ತಿ ಬರ್ಸಿ, ಬಸವರಾಜ ಶಿದ್ಲಗಟ್ಟಿ, ಖಾಜವಲಿ, ನಗರಸಭಾ ಮಾಜಿ ಸದಸ್ಯ ಆರ್. ಕಣ್ಣನ್, ಅಶ್ವಿನಿ ಮೌನೇಶ, ಮಂಜುನಾಥ ಬಡಿಗೇರ, ಖಾಜವಲಿ, ಶಾಮಣ್ಣ, ರಾಘವೇಂದ್ರ, ಸಂತೋಷ ಹುಳ್ಳಿ, ರಾಮಕೃಷ್ಣ, ನಾರಾಯಣ, ಹಾಜಿ, ರಾಜಾಸಾಬ್, ಅಂಬಿಕಾ, ಸುಧಾ, ಸಾವಿತ್ರಿ, ವಿಜಯಲಕ್ಷ್ಮೀ ಸೇರಿದಂತೆ ಕಲಾವಿದರು ಉಪಸ್ಥಿತರಿದ್ದರು.ಮಾತಾ ಕರೋಕೆ ಸ್ಟುಡಿಯೋ ಮಾಲೀಕ ಶಿವಪ್ಪ ಹುಳ್ಳಿ ಮತ್ತು ಗಾಯಕ ಪ್ರದೀಪ್ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ನಂತರ 25ಕ್ಕೂ ಹೆಚ್ಚು ಕಲಾವಿದರು ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರು. ಇದೇ ವೇಳೆ ಕಲಾವಿದರನ್ನು ಗೌರವಿಸಲಾಯಿತು.