ಕನ್ನಡಪ್ರಭ ವಾರ್ತೆ ಹೊನ್ನಾವರ
ಉದಯಗಾನವನ್ನು ಪತ್ರಕರ್ತ ಜಿ.ಯು. ಭಟ್ ಹೊನ್ನಾವರ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮ ಪರಿಸರ, ಆರೋಗ್ಯ ಮತ್ತು ಮನಸ್ಸಿಗೆ ಪರಿಣಾಮಕಾರಿ ಎಂದರು.
ವೇದಿಕೆಯಲ್ಲಿ ರಾಗಶ್ರೀ ಅಧ್ಯಕ್ಷ ಸಂಗೀತ ಕಲಾವಿದ ವಿ. ಶಿವಾನಂದ ಭಟ್, ಹಡಿನಬಾಳ, ವಿದುಷಿ ವಾಣಿ ಹೆಗಡೆ, ಜಿ.ಜಿ. ಹೆಗಡೆ, ಹರಿಶ್ಚಂದ್ರನಾಯ್ಕ, ವಿದ್ಯಾನ್ ಶೇಷಾದ್ರಿ ಅಯ್ಯಂಗಾರ್, ಐ.ಎಸ್. ಹೆಗಡೆ ವಿದ್ವಾನ್ ಎನ್.ಜಿ. ಹೆಗಡೆ ಇದ್ದರು.ನಂತರ ವಿದುಷಿ ವಾಣಿ ಹೆಗಡೆ ಯಲ್ಲಾಪುರ ಅವರಿಂದ ಬೆಳಗಿನ ಉದಯ ಗಾಯನ ರಾಗ ಲಲಿತ್‌ನೊಂದಿಗೆ ಆರಂಭಿಸಿ, ಭೈರಾಗಿ ಭೈರವ, ಹಿಂಡೋಲ್ ಹಾಗೂ ಭೈರವಿ ರಾಗದ ಭಜನೆಗಳು ಶೋತೃಗಳ ಮನತಣಿಸಿತು.
ನಂತರ ಸಂಧ್ಯಾಗಾನವನ್ನು ಕುಮಾರ ಪ್ರಥಮ ಭಟ್ ರಾಗ ದಾನಿಯನ್ನು ಪ್ರಸ್ತುತ ಪಡಿಸಿ ದೇವರನಾಮಗಳನ್ನು ಪ್ರಸ್ತುತ ಪಡಿಸಿದರು. ನಂತರ ಶ್ರೀ ಯೋಗಾನಂದ ಭಟ್ ಅವರಿಂದ ತಬಲಾ ಸೋಲೊ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂತು. ನಂತರ ರಾಗಶ್ರೀ ಹಡಿನಬಾಳ ಅವರಿಂದ ನಡೆದ ನುಡಿ ನಮನದಲ್ಲಿ ಪ್ರೊ. ಎಸ್. ಶಂಭು ಭಟ್ಟ ಕಡತೋಕಾ, ನಿವೃತ್ತ ಪ್ರಾಚಾರ್ಯ ವಿ.ಜಿ. ಹೆಗಡೆಗುಡ್ಗೆ, ಡಾ. ಗೋಪಾಲ ಹೆಗಡೆ ಯಲಗುಪ್ಪ ಹಾಗೂ ವಾಣಿಶ್ರೀ ಮತ್ತು ಮಂಜುನಾಥ ಭಟ್ ದಂಪತಿ, ವಿದ್ವಾನ್ ಶಿವಾನಂದ ಭಟ್ಟ ಇರ್ವರು ಸಾಧಕರ ಕುರಿತು ಮಾತನಾಡಿದರು.ನಂತರ ಪ್ರಖ್ಯಾತ ಕೀರ್ತನಾಕಾರರಾದ ಶ್ರೀ ನಾರಾಯಣ ದಾಸ ಶಿರಸಿ ಅವರಿಂದ ಸುಂದರ ಖಾಂಡ ಕೀರ್ತನೆ ಎಲ್ಲ ಶೋತೃಗಳನ್ನು ಭಕ್ತಿ ಪರವಶವಾಗುವಂತೆ ಮಾಡಿತು. ಇವರಿಗೆ ಅವರ ಶಿಷ್ಯ ಗಣಪತಿ ಹೆಗಡೆ ಹಂದಿಮುಲ್ಲೆ ಹಾಗೂ ಎನ್.ಜಿ. ಹೆಗಡೆ ಮತ್ತು ಕೆ.ಪಿ.ಹೆಗಡೆ ಶಿರಸಿ ತಬಲಾ, ಹಾರ್ಮೋನಿಯಂ ಸಾಥ್ ಮೇಳೈಸಿತು.
ಈ ಕಾರ‍್ಯಕ್ರಮವನ್ನು ಸಂಘಟಕರಾದ ಎನ್.ಜಿ. ಹೆಗಡೆ ಶ್ರೀ ಮಹಾಸತಿ ದೇವಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮಹೇಶ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಚಂದ್ರಶೇಖರ್ ನಾಯ್ಕ, ಎನ್.ಎಸ್. ಭಂಡಾರಿ, ಜಿ.ವಿ. ನಾಯ್ಕ, ಗಣಪತಿ ಶೆಟ್ಟಿ, ಷಣ್ಮುಖ ನಾಯ್ಕ, ಶಾರದಾ ಹೆಗಡೆ ಮತ್ತು ಕಲಾಭಿಮಾನಿಗಳ ಸಹಕಾರದಿಂದ ಎನ್.ಜಿ. ಹೆಗಡೆ ಕಪ್ಪೆಕೆರೆಯವರು ತಮ್ಮ ಗುರುಗಳ ಸಂಸ್ಮರಣೆಯನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.