ಮೇಲುಕೋಟೆ:
ಸಂಘದ ಮಹಾಸಭೆಯಲ್ಲಿ ಅಭಿನಂದಿಸಿ ಮಾತನಾಡಿ, ವೃತ್ತಿಯಲ್ಲಿ ಸ್ಥಾನೀಕರಾಗಿರುವ ತಿರುನಾರಾಯಣ ಅಯ್ಯಂಗಾರ್ ಮತ್ತು ಅವರ ಪುತ್ರ ಎಸ್.ಟಿ ನರಸಿಂಹನ್ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಸುಗಳ ಸೇವೆ ಮಾಡುತ್ತಾ ಕಳೆದ ವರ್ಷ ದಿನದ ಎರಡೂ ಹೊತ್ತಿನ ವೇಳೆ 300 ಲೀಟರ್ ಹಾಲು ಸಂಘಕ್ಕೆ ಹಾಕುವ ಮೂಲಕ ಪಶುಸಂಗೋಪನೆಯಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಈ ವರ್ಷವೂ ಹೆಚ್ಚು ಹಾಲು ಹಾಕಿದ 5 ಮಂದಿ ಹಾಲು ಉತ್ಪಾದಕರು ಹಾಗೂ ಹೆಚ್ಚು ಶೈಕ್ಷಣಿಕ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಗಿದೆ. ಸಂಘ ಸಾಲಿನಲ್ಲಿ 9 ಲಕ್ಷ 96 ಸಾವಿರ ರು ಆದಾಯಗಳಿಸಿದೆ ಎಂದರು.ಸಭೆಯಲ್ಲಿ ಡೇರಿಗೆ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಾದ ತಿರುನಾರಾಯಣ ಅಯ್ಯಂಗಾರ್, ಎಸ್.ಟಿ ನರಸಿಂಹನ್, ಎಂ.ವೈ ವೆಂಕಟೇಶ್, ಬಿ.ಆರ್ ಪುಟ್ಟರಾಜು, ಪರುಶುರಾಮ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಡೇರಿ ಸದಸ್ಯರ ಮಕ್ಕಳಾದ ದರ್ಶಿನಿ, ಕವಿತ ಎಂ.ಎಸ್, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ತ್ರಿಶಾ.ಡಿ, ಅಮೂಲ್ಯಎಂ.ಎಂ ರನ್ನು ಗೌರವಿಸಲಾಯಿತು.