ಸಂಘದ ಹಣ ಯಾರೊಬ್ಬರ ವೈಯಕ್ತಿಕ ದುಡ್ಡಲ್ಲ, ಸದಸ್ಯರ ಬೆವರಿನ ಹಣ

KannadaprabhaNewsNetwork |  
Published : Sep 26, 2026, 01:15 AM IST
25ಕೆಎಂಎನ್ ಡಿ16 | Kannada Prabha

ಸಾರಾಂಶ

ಸಂಘದ ಹಣ ಯಾರೊಬ್ಬರ ವೈಯಕ್ತಿಕ ಹಣವಲ್ಲ. ಇದು ಸದಸ್ಯರ ಬೆವರಿನ ಹಣ. ಬೇಕಾಬಿಟ್ಟಿಯಾಗಿ ಖರ್ಚು ಮಾಡುವ ಹಕ್ಕು ಯಾರಿಗೂ ಇಲ್ಲ. ಸದಸ್ಯರಿಗೆ ನೆರವಾಗಬೇಕಾದ ಮರಣ ನಿಧಿಯನ್ನೇ 15 ಸಾವಿರಕ್ಕಿಂತ ಕಡಿಮೆ ಮಾಡಿರುವುದಕ್ಕೆ ಷೇರುದಾರರು ತೀವ್ರ ಅಸಮಾಧಾನ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸ್ಫೂರ್ತಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಸದಸ್ಯರ ತೀವ್ರ ಆಕ್ರೋಶ ಹಾಗೂ ಪ್ರಶ್ನೆಗಳ ಸುರಿಮಳೆಯಿಂದ ಗದ್ದಲದ ವಾತಾವರಣ ಉಂಟಾಯಿತು.

ಸಂಘದ ಬೆಳ್ಳಿ ಹಬ್ಬದ ಸ್ಮರಣೆ ಸಂಚಿಕೆಗೆ ಸಂಘ ಸಂಸ್ಥೆ ಮತ್ತು ದಾನಿಗಳಿಂದ ವಂತಿಗೆ ಸಂಗ್ರಹಿಸಿ ವರ್ಷ ಕಳೆದಿದ್ದು, ಇಂದು ಸಂಚಿಕೆ ಬಿಡುಗಡೆ ಮಾಡಿದ್ದೀರಿ ಎಂದು ಕ್ಯಾತಘಟ್ಟ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಮರಣೆ ಸಂಚಿಕೆ ಸಮಿತಿಗೆ 30 ಸಾವಿರ ಪಾವತಿಸಿದ್ದು, ಈ ಹಣವನ್ನು ಯಾವ ಉದ್ದೇಶಕ್ಕೆ, ಯಾರ ಅನುಮೋದನೆ ಮೇರೆಗೆ ನೀಡಲಾಗಿದೆ. ಪಾವತಿಗೆ ಸಂಬಂಧಿಸಿದ ಬಿಲ್, ವೌಚರ್ ಹಾಗೂ ಸಂಪೂರ್ಣ ಲೆಕ್ಕವನ್ನು ಸದಸ್ಯರ ಮುಂದಿಡಬೇಕು. ಸದಸ್ಯರ ಹಣದ ಲೆಕ್ಕ ಕೇಳುವುದು ನಮ್ಮ ಹಕ್ಕು. ಸ್ಮರಣೆ ಸಂಚಿಕೆ ಸಂಬಂಧಿಸಿದ ಎಲ್ಲ ಆದಾಯ-ಖರ್ಚಿನ ವಿವರಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸುವಂತೆ ಎಂದು ಆಗ್ರಹಿಸಿದರು.

ಸಂಘದ ಹಣ ಯಾರೊಬ್ಬರ ವೈಯಕ್ತಿಕ ಹಣವಲ್ಲ. ಇದು ಸದಸ್ಯರ ಬೆವರಿನ ಹಣ. ಬೇಕಾಬಿಟ್ಟಿಯಾಗಿ ಖರ್ಚು ಮಾಡುವ ಹಕ್ಕು ಯಾರಿಗೂ ಇಲ್ಲ. ಸದಸ್ಯರಿಗೆ ನೆರವಾಗಬೇಕಾದ ಮರಣ ನಿಧಿಯನ್ನೇ 15 ಸಾವಿರಕ್ಕಿಂತ ಕಡಿಮೆ ಮಾಡಿರುವುದಕ್ಕೆ ಷೇರುದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಷೇರುದಾರರಿಗೆ ಬರಬೇಕಿರುವ ಎರಡು ವರ್ಷದ ಬೋನಸ್ ಹಣವನ್ನು ಷೇರುದಾರ ಖಾತೆಗೆ ಜಮಾ ಮಾಡುವ ಬದಲು ಸದಸ್ಯರಿಗೆ ನೇರವಾಗಿ ವಿತರಿಸಬೇಕು. ಬೋನಸ್ ಹಣ ತಡೆಹಿಡಿಯುವುದು, ಸದಸ್ಯರಿಗೆ ನೇರ ಲಾಭ ಸಿಗದಂತೆ ಮಾಡುವುದು ಬೇಡ ಎಂದು ಕ್ಯಾತಘಟ್ಟ ರವಿಕುಮಾರ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಎಲ್.ಶಿವರಾಮು, ಉಪಾಧ್ಯಕ್ಷ ಸಿದ್ದರಾಮೇಗೌಡ, ನಿರ್ದೇಶಕರಾದ ಬಿ.ಎಸ್.ರವಿಂದ್ರ, ಎಸ್,ಎಚ್. ಶಿವರಾಜು, ಡಿ.ಎನ್.ರಘು, ಎ.ಎಸ್,ವಿನಯ್‌ಕುಮಾರ್, ತಿಪ್ಪೂರು ಮನು, ಎಸ್,ಶಿವಕುಮಾರ್, ಸಿ.ಕೆಂಪರಾಜು, ಸುರೇಶ್, ಯಡಗನಹಳ್ಳಿ ಆತ್ಮಾನಂದ, ಎ.ಎಚ್. ರಮೇಶ್ ಸೇರಿದಂತೆ ಮತ್ತಿತರಿದ್ದರು.

ಸಂಘಕ್ಕೆ 1.17 ಲಕ್ಷ ನಿವ್ವಳ ಲಾಭ: ಅಮೃತಿ ರಾಜಶೇಖರ್

ಪಾಂಡವಪುರ:ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 1.17 ಲಕ್ಷ ರು.ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಅಮೃತಿ ರಾಜಶೇಖರ್ ತಿಳಿಸಿದರು.

ಪಟ್ಟಣದ ಕಸಾಪ ಭವನದಲ್ಲಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.ಬರಗಾಲ ಸನ್ನಿವೇಷದಿಂದಾಗಿ ಶೇ.50 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಸಂಸ್ಥೆಗೆ 56 ಲಕ್ಷ ಸಾಲ ಬರಬೇಕಾಗಿದೆ. ಮುಂದಿನ ವರ್ಷದೊಳಿಗೆ ಸಾಲ ವಸೂಲಾತಿಯನ್ನು ಶೇ.80 ರಿಂದ 85ರಷ್ಟು ಮಾಡಲಾಗುವುದು ಎಂದರು.

ಷೇರುದಾರರು ನೀಡಿರುವ ಸಲಹೆ ಸಹಕಾರ ಪಾಲಿಸಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಾಗುವುದು. ಡಿಫಾಜಿಟ್, ಪಿಗ್ಮಿ, ಆರ್‌ಡಿ ಹೆಚ್ಚಳ ಮಾಡುವುದಕ್ಕೂ ಕ್ರಮ ವಹಿಸಲಾಗುವುದು ಎಂದರು.ಸಭೆಯಲ್ಲಿ ಉಪಾಧ್ಯಕ್ಷ ಎ.ಎಸ್.ಪ್ರಭುಸ್ವಾಮಿ, ನಿರ್ದೇಶಕರಾದ ಟಿ.ಡಿ.ಚಂದ್ರಶೇಖರ್, ಎಂ.ಜಗದೀಶ್, ಬಿ.ಎಂ.ಸಿದ್ದರಾಜು, ತಮ್ಮಯ್ಯ, ಕೆ.ಎಲ್.ಆನಂದ್, ಸಿ.ನಾಗರಾಜು, ಮೀನಾಕ್ಷಿ, ಎನ್.ಲೋಕೇಶ್ವರಿ, ಸಿ.ಎಂ.ಮೀನಾಕ್ಷಿ, ಬೋರಯ್ಯ, ಕಾರ್‍ಯದರ್ಶಿ ಪಿ.ಲೀಲಾ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಸಂರಕ್ಷಿಸಿದರೆ ಮನುಷ್ಯನ ಆರೋಗ್ಯ ಸುಧಾರಣೆ: ಕೆ.ಆರ್.ಶ್ರೀನಿವಾಸ್
ಆರೋಗ್ಯಯುತ ಜೀವನಕ್ಕೆ ಕ್ರೀಡೆಗಳು ಅವಶ್ಯಕ: ಎ.ಸಿ.ಗೀತಾ