ಮಂಗಳೂರು: ಕರ್ನಾಟಕದ ಹೆಮ್ಮೆಯ ‘ಬಿಂದು’ ಸಂಸ್ಥೆಯು ಇದೀಗ ಎರಡು ಹೊಸ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಿಫೋನ್ ಟೆಂಡರ್ ಕೋಕೊನಟ್ ವಾಟರ್, ಸಿಫೋನ್ ಲೆಮನ್ ಡ್ರಿಂಕ್.
ಸಿಫೋನ್ ಟೆಂಡರ್ ಕೋಕೊನಟ್ ವಾಟರ್: ಗೆಂದಾಳಿ ತಳಿ ಸೀಯಾಳದ ಸಿಹಿ ಮತ್ತು ಆರೋಗ್ಯದ ರಹಸ್ಯ ದಕ್ಷಿಣ ಕನ್ನಡದ ಫಲವತ್ತಾದ ಮಣ್ಣಿನಲ್ಲಿ ಹೇರಳವಾಗಿ ಬೆಳೆಯುವ ‘ಆರೆಂಜ್ ಕಿಂಗ್ ಕೋಕೊನಟ್’ ಅಥವಾ ಸ್ಥಳೀಯವಾಗಿ ‘ಗೆಂದಾಳಿ’ ಎಂದು ಕರೆಯಲ್ಪಡುವ ವಿಶೇಷ ತೆಂಗಿನ ಕಾಯಿಯಿಂದ ತಯಾರಿಸಲಾದ ಸಿಫೋನ್ ಟೆಂಡರ್ ಕೋಕೊನಟ್ ವಾಟರ್ ಭಾರತದಲ್ಲೇ ಮೊದಲ ಬಾರಿಗೆ ಬಿಂದು ಸಂಸ್ಥೆಯಿಂದ ಪರಿಚಯಿಸಲ್ಪಟ್ಟಿದೆ.ಈ ಉತ್ಪನ್ನವನ್ನು ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ನೈಸರ್ಗಿಕ ಪಲ್ಪ್‌ನಿಂದ ಕೂಡಿದ ಈ ಎಳನೀರು, ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಎಲ್ಲರಿಗೂ ಸೂಕ್ತವಾದ ತಂಪು ಪಾನೀಯವಾಗಿದೆ. ನೈಸರ್ಗಿಕ ಪೋಷಕಾಂಶಗಳ ಆಗರವಾಗಿರುವ ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಸಿಫೋನ್ ಟೆಂಡರ್ ಕೋಕೊನಟ್ ವಾಟರ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಮುಖ ಉತ್ಪನ್ನವಾಗಿ ಹೊರಹೊಮ್ಮಲಿದೆ ಎಂಬ ಆಶಯವನ್ನು ಸಂಸ್ಥೆ ಹೊಂದಿದೆ. ಸಿಫೋನ್ ಲೆಮನ್ ಡ್ರಿಂಕ್: ಬೇಸಿಗೆಯ ಬಿಸಿಲಿಗೆ ತಂಪೆರೆಯುವ ಪಾನೀಯವಾಗಿದೆ. ಜನವರಿ ತಿಂಗಳಲ್ಲಿ ಬಿಡುಗಡೆಯಾದ ಇದು ಬಿಂದು ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ನೈಸರ್ಗಿಕ ತಾಜಾ ನಿಂಬೆ ಹಣ್ಣಿನ ಪಲ್ಪ್‌ನಿಂದ ತಯಾರಿಸಲಾದ ಈ ಪಾನೀಯ ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದಂತಿದೆ. ಈ ಪಾನಿಯ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಬಿಸಿಲಿನ ಝಳದ ನಡುವೆ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಮತ್ತು ನಿರ್ಜಲೀಕರಣವನ್ನು ತಡೆಯಲು ಇದು ಉತ್ತಮ ಪಾನೀಯವಾಗಿದೆ.ಬಿಂದು ಸಂಸ್ಥೆಯ ಈ ಎರಡೂ ಹೊಸ ಉತ್ಪನ್ನಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ.
ರಾಷ್ಟ್ರವ್ಯಾಪಿ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಇವು ಹೆಚ್ಚಿನ ಬೇಡಿಕೆಯನ್ನು ಪಡೆದು ಉಳಿದ ಬಿಂದು ಉತ್ಪನ್ನಗಳಂತೆ ಯಶಸ್ಸು ಗಳಿಸುವ ವಿಶ್ವಾಸವನ್ನು ಮಾರುಕಟ್ಟೆ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.