ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿ, ಕ್ಷೇತ್ರದಲ್ಲಿ ಒಟ್ಟು ೧,೮೯,೫೨೮ ಮತದಾರರಿದ್ದು, ಶೇ.೯೫ ರಷ್ಟು ಮ್ಯಾಪಿಂಗ್ ಮುಗಿದಿದೆ. ಮರಣ, ಶಾಶ್ವತ ವಲಸೆ ಹಾಗೂ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಹೆಸರು ಇರುವುದು ಮುಂತಾದ ಕಾರಣಗಳಿಂದ ಒಟ್ಟು ೧೬,೧೦೨ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಂದಿರುವ ೧೦,೧೧೫ ಮತದಾರರ ಹೆಸರು, ವಯಸ್ಸು ಇತ್ಯಾದಿ ವಿಷಯಗಳು ನ್ಯೂನತೆಯಿಂದ ಕೂಡಿದ್ದು, ಅದನ್ನು ಸರಿಪಡಿಸಲು ಬಿಎಲ್‌ಓಗಳು ಸಂಬಂಧಿತ ಮತದಾರರ ಮನೆಗೆ ನೋಟಿಸ್ ನೀಡಲಿದ್ದಾರೆ. ನಿಗದಿತ ದಿನದಂದು ಆಧಾರ್ ಕಾರ್ಡ್, ಶಾಲಾ ಪ್ರಮಾಣಪತ್ರ ಇತ್ಯಾದಿ ದಾಖಲೆಗಳೊಂದಿಗೆ ವಿಚಾರಣಾ ಕೇಂದ್ರಕ್ಕೆ ಹಾಜರಾಗಿ ಸರಿಪಡಿಸಿಕೊಳ್ಳಬಹುದು ಎಂದರು.ಎರಡನೇ ಹಂತದ ಈ ಪ್ರಕ್ರಿಯೆಯಲ್ಲಿ ಅ. ೧ಕ್ಕೆ ೧೮ ವರ್ಷ ತುಂಬುವವರು ಅರ್ಜಿ ಸಲ್ಲಿಸಬಹುದು. ವಲಸೆ, ವಿವಾಹ ಇತ್ಯಾದಿ ಕಾರಣಗಳಿಂದ ಮತಗಟ್ಟೆಯನ್ನು ಬದಲಾಯಿಸಿಕೊಳ್ಳುವವರೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದ ಅವರು, ಎಸ್‌ಐಆರ್ ನಂತರ ಯಲ್ಲಾಪುರದಲ್ಲಿ ೨, ಮುಂಡಗೋಡಿನಲ್ಲಿ ೭, ಬನವಾಸಿಯಲ್ಲಿ ೩ ಸೇರಿ ಒಟ್ಟು ೧೨ ಮತಗಟ್ಟೆಗಳು ಹೊಸದಾಗಿ ಸ್ಥಾಪನೆಯಾಗಲಿವೆ. ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ ೨೪೬ಕ್ಕೆ ಏರಿದೆ ಎಂದರು.