4889 ಮಂದಿಯ ಎಸ್‌ಐಆರ್‌ ವಿಚಾರಣೆ ಬಾಕಿ

KannadaprabhaNewsNetwork |  
Published : Oct 07, 2026, 01:15 AM IST
ಕೆರೆ ಬಳಿ ಸೇರಿರುವ ಜನ | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಡಿ (ಎಸ್‌ಐಆರ್‌) ನೋಟಿಸ್‌ ಜಾರಿಗೊಳಿಸಿದವರ ಪೈಕಿ ಇನ್ನೂ 4,889 ಮಂದಿ ವಿಚಾರಣೆಗೆ ಹಾಜರಾಗುವುದು ಬಾಕಿ.

ಜಿಲ್ಲೆಯಲ್ಲಿ ಒಟ್ಟು 91,610 ಮತದಾರರಿಗೆ ನೋಟಿಸ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಡಿ (ಎಸ್‌ಐಆರ್‌) ನೋಟಿಸ್‌ ಜಾರಿಗೊಳಿಸಿದವರ ಪೈಕಿ ಇನ್ನೂ 4,889 ಮಂದಿ ವಿಚಾರಣೆಗೆ ಹಾಜರಾಗುವುದು ಬಾಕಿ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 91,610 ಮತದಾರರಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ವರೆಗೆ 86,721 ಮಂದಿ ವಿಚಾರಣೆಗೆ ಹಾಜರಾಗಿ ತಮ್ಮ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದು, ಶೇ.94 ರಷ್ಟು ವಿಚಾರಣೆ ಪೂರ್ಣಗೊಂಡಿದೆ. ಆದರೆ, ಇನ್ನೂ 4889 ಮಂದಿ ವಿಚಾರಣೆಗೆ ಬಾಕಿ ಇದ್ದಾರೆ.

ವಿಚಾರಣೆ ನಡೆಸುವುದಕ್ಕೆ ಚುನಾವಣಾ ಆಯೋಗದಿಂದ ಮೂರು ಬಾರಿ ದಿನಾಂಕ ನೀಡಲಾಗುತ್ತದೆ. ಆ ವೇಳೆ ನಿಗದಿ ಪಡಿಸಿದ ವಿಚಾರಣಾಧಿಕಾರಿ ಮುಂದೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸ ಬೇಕಾಗಲಿದೆ. ಅ.12ರ ವರೆಗೆ ವಿಚಾರಣೆಗೆ ಹಾಜ ರಾಗುವುದಕ್ಕೆ ಚುನಾವಣಾ ಆಯೋಗ ಅವಕಾಶ ನೀಡಿದೆ. ಒಂದು ವೇಳೆ ವಿಚಾರಣೆ ಹಾಜರಾಗದಿದ್ದ ಪಕ್ಷದಲ್ಲಿ ಮತದಾರ ಪಟ್ಟಿಯಿಂದ ಹೆಸರು ಕೈಬಿಟ್ಟು ಅ.27 ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಿದೆ.

-- ಬಾಕ್ಸ್‌--

ಕೆಲವು ಪ್ರಕರಣದಲ್ಲಿ ಕುಟುಂಬಸ್ಥರಿಗೆ ವಿಚಾರಣೆಗೆ ಅವಕಾಶ

ಹಿರಿಯ ನಾಗರಿಕರು, ವಿಕಲಚೇತನರು, ಅನಾರೋಗ್ಯ ಪೀಡಿತರು ಮತ್ತು ವಿದೇಶದಲ್ಲಿರುವ ಮತದಾರರಿಗೆ ಅನುಕೂಲವಾಗುವಂತೆ ಸೆ.11 ರಂದು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಅಂತಹ ಮತ ದಾರರ ಪರವಾಗಿ ಅವರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗಿ ನೋಟಿಸ್ ವಿಲೇವಾರಿಗೆ ಅಗತ್ಯ ದಾಖಲೆ, ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಹೀಗಾಗಿ, ಈ ರೀತಿ ಸಮಸ್ಯೆ ಎದುರಿಸುತ್ತಿರುವವರು ಕುಟುಂಬಸ್ಥರು ವಿಚಾರಣೆಗೆ ಹಾಜರಾಗಬಹುದು.

---ಬಾಕ್ಸ್---

ಫಾರಂ 7 ಅಡಿ 1903 ಅರ್ಜಿ

ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮಾಹಿತಿ ಪ್ರಕಾರ ಎಸ್‌ಐಆರ್‌ನಡಿ ಆಕ್ಷೇಪಣೆ ಸಲ್ಲಿಸುವುದಕ್ಕೆ ನಿಗದಿ ಪಡಿಸಿದ ಅವಧಿ ಸೇರಿದಂತೆ ಜೂನ್‌ 16 ರಿಂದ ಸೆ. 23ರ ಅವಧಿಯಲ್ಲಿ ಜಿಲ್ಲೆಯಲ್ಲಿ ಫಾರಂ 7 ಅಡಿ 1903 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ ಅತಿ ಹೆಚ್ಚು 631 ಅರ್ಜಿಗಳು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಉಳಿದಂತೆ ಮೂಡಿಗೆರೆ 417, ಶೃಂಗೇರಿ 375, ಕಡೂರು 339 ಹಾಗೂ ತರೀಕೆರೆಯಲ್ಲಿ ಕೇವಲ 141 ಅರ್ಜಿ ಸಲ್ಲಿಕೆಯಾಗಿರುವುದು ತಿಳಿದು ಬಂದಿದೆ.

ಫಾರಂ 7 ಅರ್ಜಿ ಏಕೆ ಬಳಕೆ?

ಮತದಾರ ಪಟ್ಟಿಯಲ್ಲಿರುವ ಹೆಸರು ತೆಗೆಯುವುದಕ್ಕೆ ಫಾರಂ 7 ಅರ್ಜಿ ಪಡೆಯಲಾಗುತ್ತದೆ. ಈ ಅರ್ಜಿಯಲ್ಲಿ ಮತದಾರರ ಕುಟುಂಬಸ್ಥರು ಅಥವಾ ಸಂಬಂಧಪಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಮತದಾರ ಸಲ್ಲಿಸಬಹುದು. ಉದಾರಣೆಗೆ ಮರಣ ಹೊಂದಿದವರು, ಸ್ಥಳಾಂತರಗೊಂಡವರು, ಅನರ್ಹರು ಹಾಗೂ ತಪ್ಪಾಗಿ ಮತದಾರಪಟ್ಟಿಗೆ ಸೇರ್ಪಡೆಗೊಂಡವರನ್ನು ಮತದಾರ ಪಟ್ಟಿಯಿಂದ ಕೈಬಿಡಲು ಸಲ್ಲಿಕೆ ಮಾಡಲಾಗುತ್ತದೆ.--- ಬಾಕ್ಸ್‌--

ಎಸ್‌ಐಆರ್‌ ವಿಚಾರಣೆ ವಿವರ

ವಿಧಾನಸಭಾ ಕ್ಷೇತ್ರಒಟ್ಟು ನೋಟಿಸ್‌ ಸಂಖ್ಯೆ ವಿಚಾರಣೆ ಪೂರ್ಣ ವಿಚಾರಣೆ ಬಾಕಿ

ಶೃಂಗೇರಿ88958566329

ಮೂಡಿಗೆರೆ1151710815702

ಚಿಕ್ಕಮಗಳೂರು30761295211240

ತರೀಕೆರೆ18568170681500

ಕಡೂರು21869207511118

ಒಟ್ಟು91610867214889

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವ ಮೆಚ್ಚಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್: ಬಸವ ಮಹಾಲಿಂಗ ಶ್ರೀ
ಯುವ ಆಲೋಚನೆಗಳೇ ಸಮಾಜದ ಬಲ: ಡಾ. ಚಂದ್ರಶೇಖರ್‌