ಎಸ್‌ಐಆರ್ ಒಂದು ಪಿತೂರಿ: ಪ್ರಕಾಶ್‌ರಾಜ್‌

KannadaprabhaNewsNetwork |  
Published : Sep 25, 2026, 01:15 AM IST
ಬಹುಭಾಷಾ ನಟ ಪ್ರಕಾಶ ರಾಜ್‌ ಅವರು ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅವೈಜ್ಞಾನಿಕ ಹಾಗೂ ಎಸ್‌ಐಆರ್ ನಿಲ್ಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಟೀಕಿಸಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪದೋಷ ಸರಿಪಡಿಸಿ, ನೈಜ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ನಟ ಪ್ರಕಾಶ್ ರಾಜ್ ಅವರು ರಾಜ್ಯದ 100 ಆಯ್ದ ಮತಗಟ್ಟೆಗಳಲ್ಲಿ ಎಸ್‌ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ ಕೈಗೊಂಡಿದ್ದು, ಈ ಪ್ರಯುಕ್ತ ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅವೈಜ್ಞಾನಿಕ ಹಾಗೂ ಎಸ್‌ಐಆರ್ ನಿಲ್ಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಟೀಕಿಸಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪದೋಷ ಸರಿಪಡಿಸಿ, ನೈಜ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ನಟ ಪ್ರಕಾಶ್ ರಾಜ್ ಅವರು ರಾಜ್ಯದ 100 ಆಯ್ದ ಮತಗಟ್ಟೆಗಳಲ್ಲಿ ಎಸ್‌ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ ಕೈಗೊಂಡಿದ್ದು, ಈ ಪ್ರಯುಕ್ತ ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಸ್‌ಐಆರ್‌ ಬಂಗಾಲದಲ್ಲಿ ನಡೆದಿರುವುದು ಹುನ್ನಾರವಾಗಿದೆ, ಆದರೆ ಕರ್ನಾಟಕದಲ್ಲಿ ಇದು ನಡೆಯಬಾರದು. ರಾಜ್ಯದಲ್ಲಿ ಮುಂದಿನ ಎರಡು ವರ್ಷ ಯಾವುದೇ ಚುನಾವಣೆ ಇಲ್ಲದಿದ್ದರೂ ಇಷ್ಟೊಂದು ಅವಸರದಲ್ಲಿ ಪರಿಷ್ಕರಣೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ ಪ್ರಕಾಶ ರಾಜ್, ದಲಿತರು, ಹಿಂದುಳಿದವರು ಮತಗಳನ್ನು ಗುರಿಯಾಗಿಸಿ ಮತದಾನ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪದೋಷಗಳನ್ನು ಸರಿಪಡಿಸಲು ಕರಡು ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಸಮರ್ಪಕ ಅವಕಾಶ ನೀಡಬೇಕು. ಅರ್ಹ ಮತದಾರರ ಪಟ್ಟಿಯಿಂದ ಕೈಬಿಡಬಾರದು. ನೋಟಿಸ್ ಪಡೆದಿರುವ ಮತದಾರರಿಗೆ ತಮ್ಮ ಹಕ್ಕು ಸಮರ್ಥಿಸಿಕೊಳ್ಳಲು ಅವಕಾಶ ಕಲ್ಪಿಸಿ ಮತದಾನದ ಹಕ್ಕನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಆಳುವ ಪಕ್ಷ, ವಿರೋಧ ಪಕ್ಷ, ಸುಪ್ರೀಂಕೋರ್ಟಿನ ನ್ಯಾಯಾಧೀಶರು ಚುನಾವಣೆ ಆಯೋಗವನ್ನು ರಚಿಸುತ್ತಾರೆ. ಆದರಿಲ್ಲಿ ಸರ್ವಾಧಿಕಾರದ ಮೇಲೆ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ. ಈಗಾಗಲೇ ಸುಮಾರು ೫.೨೧.೯೫೭ ಮತಗಳನ್ನು ತೆಗೆದುಹಾಕಲಾಗಿದೆ ಎಂದು ಕಿಡಿಕಾರಿದರು.

ಮತದಾರ ಸ್ಥಳಾಂತರಗೊಂಡವರಿಗೆ ವಿಳಾಸ ಬದಲಾವಣೆ ಮಾಡಲು ಫಾರಂ 8 ಕೊಡಬೇಕು. ಅದನ್ನು ಬಿಟ್ಟು ಹೆಸರನ್ನೇ ಡಿಲೀಟ್ ಮಾಡಿ ಮತ್ತೆ ಹೊಸದಾಗಿ ಫಾರಂ ನಂ. 6 ತುಂಬಲು ಹೇಳುವುದು ಯಾವ ನ್ಯಾಯ ಎಂದು ಕೇಳಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ವರ್ಷಕ್ಕೆ ಸಾವಿರಾರು ಸಂಖ್ಯೆಯ ಜನರು ದುಡಿಯಲು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ, ಅದು ಅಪರಾಧವೇ ? ಕೇವಲ ದುಡಿಯಲು ಹೋದವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಒಂದು ಪಿತೂರಿ ಹಾಗೂ ಹಗರಣ ಹಾಗೂ ಅಸಂವಿಧಾನಿಕ ಪ್ರಕ್ರಿಯೆಯಾಗಿದೆ. ರಾಜ್ಯದ ಆಯ್ದ 100 ಮತಗಟ್ಟೆಗಳಲ್ಲಿ ಜನಪರ ಸಂಘಟನೆಯ ವಿವಿಧ ಪ್ರತಿನಿಧಿಗಳೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ಸಂಕಷ್ಟದಲ್ಲಿರುವ ಜನರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ, ಚುನಾವಣಾ ಆಯೋಗವು ದೇಶದ ನಾಗರಿಕರಿಗೆ ಉಂಟು ಮಾಡುತ್ತಿರುವ ಸಂಕಷ್ಟ ಮತ್ತು ದುರಪಯೋಗ ಎತ್ತಿ ತೋರಿಸಲಾಗುವುದು ಎಂದು ಪ್ರಕಾಶ್ ರಾಜ್

ಕೆ.ಎಲ್ ಅಶೋಕ, ಲಕ್ಷ್ಮಣ ಮಂಡಲಗೇರ, ಆರ್.ಚೆನ್ನಬಸ್ಸು, ಗಿರೆಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೇಗುಂದಿ, ಮಲ್ಲಿಕಾರ್ಜುನ ಸತ್ಯಂಪೇಠ, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸ್ಮನಿ, ಮಾಯಾ, ಖಾಲೀದ್, ಮರೆಪ್ಪ ಪ್ಯಾಟಿ, ನಾಗಣ್ಣ ಬಡಿಗೇರ, ಶಿವಕುಮಾರ ತಳವಾರ, ಶಿವಪುತ್ರ ಜವಳಿ, ಎಸ್.ಎಂ ಸಾಗರ, ಶರಣು ಸಗರ, ವಿಶ್ವ ನಾಟೇಕರ ಸಹಿತ ಮಹಿಳೆಯರು, ವಿವಿಧ ಸಮಾಜದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸರವಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ
ಚಿಂಚೋಳಿ ಪಟ್ಟಣದಲ್ಲಿ ರಸ್ತೆ ದುರಸ್ತಿ ಮರೀಚಿಕೆ