ಎಸ್ಐಆರ್‌ ಸಂವಿಧಾನ ವಿರೋಧಿ ನಡೆ: ನವೀನ್ ಕುಮಾರ್

KannadaprabhaNewsNetwork |  
Published : Jun 30, 2026, 02:45 AM IST
ವಿಚಾರ ಸಂಕಿರಣದಲ್ಲಿ ಪಾಲ್ಗೊಂಡವರು. | Kannada Prabha

ಸಾರಾಂಶ

ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು, ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಹಾಸನ ಜಿಲ್ಲಾ ಕಾರ್ಯದರ್ಶಿ ಎಚ್.ಆರ್ ನವೀನ್ ಕುಮಾರ್ ದೂರಿದ್ದಾರೆ.

ಮಡಿಕೇರಿ: ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು, ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಹಾಸನ ಜಿಲ್ಲಾ ಕಾರ್ಯದರ್ಶಿ ಎಚ್.ಆರ್ ನವೀನ್ ಕುಮಾರ್ ದೂರಿದ್ದಾರೆ.

ಸಿದ್ದಾಪುರ ಪಂಚಾಯತಿ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಮಾರ್ಕ್ಸ್ ವಾದಿ ಸಿಪಿಐ(ಎಂ) ವತಿಯಿಂದ ಆಯೋಜಿಸಿದ್ದ ಎಸ್ಐಆರ್‌ ಕುರಿತ ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.ಬಡವರು, ಕಾರ್ಮಿಕರು, ದಲಿತರು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ ಷಡ್ಯಂತ್ರ ಎಂದರು. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಚುನಾವಣ ಆಯೋಗ ಇದರ ಹೊಣೆಗಾರಿಕೆ ತೆಗೆದುಕೊಂಡು ಯಾರನ್ನು ಮತದಾರ ಪಟ್ಟಿಯಿಂದ ಕೈಬಿಡದಂತೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ಕೂಡ ಹೊಸಬರನ್ನು ಪಟ್ಟಿಗೆ ಸೇರಿಸಬೇಕೆ ಹೊರತು ಇರುವ ಮತದಾರರನ್ನು ಕೈಬಿಡುವ ಕೆಲಸ ಮಾಡಬಾರದೆಂದು ಸಲಹೆ ನೀಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್‍ ಬಿ ರಮೇಶ, ಜಿಲ್ಲಾ ಸಮಿತಿ ಸದಸ್ಯರು ಎನ್ ಡಿ ಕುಟ್ಟಪ್ಪ, ಪಿ ಆರ್ ಭರತ್, ಕೆ ಎಸ್ ರಮೇಶ್, ಎಸ್ ಬೈಜು, ಪದ್ಮಿನಿ ಶ್ರೀಧರ್, ಜೆ ಆರ್ ಪ್ರೇಮ, ಅನಿಲ್, ಉದಯ, ಮುಸ್ತಫಾ ಸೇರಿದಂತೆ ಸಾರ್ವಜನಿಕರು ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ತಡೆಗೆ ಪೋಲಿಯೋ ಲಸಿಕೆ ಕಡ್ಡಾಯ: ಪೊನ್ನಣ್ಣ
ಜಾಗತಿಕ ಆರ್ಥಿಕತೆಗೆ ಎಂಎಸ್‌ಎಂಇಯಿಂದ ಅಗಾಧ ಕೊಡುಗೆ: ಸಿಎ ಎಸ್‌.ಎಸ್‌. ನಾಯಕ್‌