ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಏರ್ಪಡಿಸಿದ್ದ ಎಂಜಿನಿಯರುಗಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿ, ತಾಂತ್ರಿಕ ಕ್ಷೇತ್ರಕ್ಕೆ ಸರ್ ಎಂ.ವಿ. ಅವರು ಅಪಾರವಾದ ಕೊಡುಗೆ ನೀಡಿದರು. ಆ ಮೂಲಕ ಹಲವಾರು ಬದಲಾವಣೆ ಮತ್ತು ಬೆಳವಣಿಗೆಗೆ ಕಾರಣರಾದರು ಎಂದರು.
ಮೈಸೆಮ್ ಕಾಲೇಜಿನ ಕಾರ್ಯದರ್ಶಿ ಎಂ. ಮಂಜುನಾಥ್ ಮಾತನಾಡಿ, ವಿಶ್ವೇಶ್ವರಯ್ಯನವರ ಏಳಿಗೆಗೆ ಅವರ ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನವೇ ಕಾರಣ. ಇಂದಿನ ಯುವಪೀಳಿಗೆ ಸರ್ ಎಂ.ವಿ. ಅವರ ಆದರ್ಶ ಪಾಲಿಸಬೇಕು ಎಂದರು.ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್. ಪುಟ್ಟಬುದ್ದಿ, ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ್, ಎಲ್ಲಾ ಬೋಧಕರು, ಬೋಧಕೇತರರು ಇದ್ದರು.. ಎಂ. ವಿಜಯಶ್ರೀ ಸ್ವಾಗತಿಸಿದರು. ಎಂ. ಜಸ್ವಂತ್ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತಾ ವಂದಿಸಿದರು. ಡಿ.ಎಸ್. ಯೋಗೀಸ್, ಪಿ. ಅಶ್ವಿನಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.