ಬಹುಮುಖ ಪ್ರತಿಭೆ ಹೊಂದಿದ್ದ ಸರ್ ಎಂ.ವಿಶ್ವೇಶ್ವರಯ್ಯ: ನಾಗೇಂದ್ರ ಎಂ.ಎ.

KannadaprabhaNewsNetwork |  
Published : Sep 20, 2024, 01:31 AM IST
ತರೀಕೆರೆಯಲ್ಲಿ 8ನೇ ವರ್ಷದ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಸಾಧಾರಣ ವ್ಯಕ್ತಿತ್ವ ಮತ್ತು ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಷನ್ ಮಾಜಿ ಅಧ್ಯಕ್ಷರು ನಾಗೇಂದ್ರ ಎಂ.ಎ. ಹೇಳಿದರು.

ತರೀಕೆರೆಯಲ್ಲಿ 8ನೇ ವರ್ಷದ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ತರೀಕೆರೆ

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಸಾಧಾರಣ ವ್ಯಕ್ತಿತ್ವ ಮತ್ತು ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಷನ್ ಮಾಜಿ ಅಧ್ಯಕ್ಷರು ನಾಗೇಂದ್ರ ಎಂ.ಎ. ಹೇಳಿದರು.

ಬುಧವಾರ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ತರೀಕೆರೆಯಿಂದ ಲೋಕೋಪಯೋಗಿ ಇಲಾಖೆ ತರೀಕೆರೆ ಮತ್ತು ದಿ.ರಾಮ್ಕೋ ಸಿಮೆಂಟ್ಸ್ ಲಿ. ಇವರ ಸಹಯೋಗದೊಂದಿಗೆ ಪಟ್ಟಣದ ಐ.ಬಿ.ಆವರಣದಲ್ಲಿ ಏರ್ಪಡಿಸಿದ್ದ 8ನೇ ವರ್ಷದ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರು ವಿಶ್ವ ಕಂಡ ಅತ್ಯಂತ ಶ್ರೇಷ್ಠ ಸಿವಿಲ್ ಎಂಜಿನಿಯರ್ ಆಗಿ ವೃತ್ತಿಯಲ್ಲಿ ಶ್ರೇಷ್ಠತೆ ಕಾಪಾಡಿಕೊಂಡು ಬಂದವರು, ಮೂವತ್ತು ನಗರಗಳಲ್ಲಿ ನೀರಿನ ಸೌಲಭ್ಯ ಕಲ್ಪಿಸಿದವರು. ಕೃಷಿಕರ ಬಗ್ಗೆ ಆಪಾರ ಕಾಳಜಿ ಹೊಂದಿದ್ದರು. ಮಳೆಗಾಲದ ನಂತರ ನೀರನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದ ಸರ್.ಎಂ.ವಿಶ್ವೇಶ್ವರಯ್ಯ ಕೆಆರ್ ಎಸ್ ಒಂದು ಮೈಲಿಗಲ್ಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತಂತ್ರಜ್ಞಾನ ಮುಂದುವರಿದಿರುವುದಕ್ಕೆ ಕಾರಣ ಸರ್.ಎಂ.ವಿಶ್ವೇಶ್ವರಯ್ಯ ಗಂಧದ ಎಣ್ಣೆ, ಮೈಸೂರು ವಿಶ್ವವಿದ್ಯಾಲಯ ಇತ್ಯಾದಿಗಳಿಗೆ ಭದ್ರ ಅಡಿಪಾಯ ಹಾಕಿದ್ದರು. ಶಿಸ್ತು-ಶ್ರೇಷ್ಠ ಅಡಳಿತ ಮತ್ತು ಶಿಕ್ಷಣ ತಜ್ಞರಾಗಿದ್ದರು ಎಂದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಸಿವಿಲ್ ಎಂಜಿನಿಯರ್ಸ್ ಅಭಿವೃದ್ಧಿ ಕೆಲಸ ಚೆನ್ನಾಗಿ ಮಾಡಿರಿ ಎಂದು ಶುಭ ಕೋರಿದರು.

ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರು ಮಹಾನ್ ಎಂಜಿನಿಯರ್ ಹಾಗೂ ಭಾರತದ ವಿದ್ವಾಂಸರಾಗಿದ್ದರು. ಎಂಜಿನಿಯರ್‌ಗಳನ್ನು ನಾವು ಯಾವಾಗಲು ಗೌರವಿಸೋಣ ಹಾಗು ಅಭಿನಂದಿಸೋಣ ಎಂದು ಹೇಳಿದರು.

ತರೀಕೆರೆ ಲೋಕೋಪಯೋಗಿ ಇಲಾಖೆ ಎಇಇ ನಾಗೇಂದ್ರಪ್ಪ ಜಿ.ಎ. ಮಾತನಾಡಿ ವಿಶ್ವೇಶ್ವರಯ್ಯ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದರು. ಅವರು ದಿವಾನರಾಗಿ ಹಾಗೂ ದೇಶಕ್ಕೆ ಸರ್ವೋತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ತರೀಕೆರೆ ತಾಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಅದ್ಯಕ್ಷ, ಯೂನಿಕ್ ಅರ್ಕಿಟೆಕ್ಟ್ ನವೀನ್ ಜಿ.ನಾಯ್ಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಿ.ರಾಮ್ಕೋ ಸಿಮೆಂಟ್ಸ್ ಲಿ.ನ ಡಿಜಿಎಂ ಟೆಕ್ನಿಕಲ್ ಸರ್ವೀಸಸ್ ಶಶಾಂಕ್ ಶರ್ಮ, ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ರಮೇಶ್ ಕುಮಾರ್ ತರೀಕೆರೆ, ಕನ್ಸಲ್ಟಿಂಗ್ ಎಂಜಿನಿಯರ್ ಎಚ್.ಸಿ.ಗೋಪಾಲಕೃಷ್ಣ ಮಾತನಾಡಿದರು.

ಗ್ಲಾಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಸ್ಕೂಲ್ ತರೀಕೆರೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ವಸಂತಕುಮಾರ್ , ಯಶವಂತ ಸಾಗರ್, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಮತ್ತು ಲತಾ ಗೋಪಾಲಕೃಷ್ಣ, ಸುನಿತಾ ಕಿರಣ್, ವಿಜಯಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.18ಕೆಟಿಆರ್.ಕೆ.1ಃ

ತರೀಕೆರೆ ಪಟ್ಟಣದ ಐ.ಬಿ.ಆವರಣದಲ್ಲಿ ಏನಡೆದ 8ನೇ ವರ್ಷದ ಎಂಜಿನಿಯರ್ಸ್ ದಿನಾಚರಣೆ ನಡೆಯಿತು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ