ಮಹಾನಗರ ಪಾಲಿಕೆ, ನಗರದ ವಾರ್ಡ್‌ಗಳಲ್ಲಿ ತೆರಳಿ ಮಾಹಿತಿ ಪಡೆದ ಬಿಎಲ್‌ಒಗಳು
ಜಿಲ್ಲೆಯಲ್ಲಿ ಮಂಗಳವಾರ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡಿದ್ದು, ಬಿಎಲ್‌ಒಗಳು ಫಾರಂಗಳನ್ನು ಹಿಡಿದು ಮನೆಮನೆಗಳಿಗೆ ತೆರಳಿ ಮಾಹಿತಿ ಪಡೆದರು.
ನಗರದಲ್ಲಿ ಎಸ್ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್‌ಗಳಲ್ಲೂ ಎಸ್ ಐಆರ್ ಪ್ರಕ್ರಿಯೆಗೆ ಚಾಲನೆಗೊಂಡಿದೆ. ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ನೇತೃತ್ವದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡಿದ್ದು, 35 ವಾರ್ಡ್‌ಗಳಿಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಬಿಎಲ್ಓಗಳಿಗೆ ಫಾರಂಗಳನ್ನು ವಾಹನಗಳಲ್ಲಿ ಕಳುಹಿಸಲಾತು. ಹೊಳೆಹೊನ್ನೂರು : ಇಂದಿನಿಂದ ರಾಜ್ಯದಾದ್ಯಂತ ಎಸ್ಐಆರ್ ಅಧಿಕೃತವಾಗಿ ಆರಂಭವಾದ ಹಿನ್ನೆಲೆಯಲ್ಲಿ, ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ವ್ಯಾಪ್ತಿಯ ಅಗರದಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಚಾಲನೆ ನೀಡಿದರು.ಪ್ರತಿಯೊಬ್ಬರೂ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಬಾಗವಹಿಸಿ. ಬಿಎಲ್ಓಗಳು ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸುಮಾರು ನೂರು ಮನೆಗಳನ್ನು ಭೇಟಿ ಮಾಡಿ ಫಾರಂ ವಿತರಣೆ ಮಾಡಲಾಯಿತು.
ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ 11994 ಮತದಾರರೂ ಸೇರಿದಂತೆ ತಾಲೂಕಿನ ಒಟ್ಟು 171 ಬೂತ್ ವ್ಯಾಪ್ತಿಯಲ್ಲಿ 1,25,068 ಮತದಾರರಿದ್ದು ಸಂಜೆ 4.30 ಗಂಟೆಯ ವೇಳೆಗೆ ದೊರೆತ ಮಾಹಿತಿಯಂತೆ ತಾಲೂಕಿನಲ್ಲಿ 3000 ಮತದಾರರನ್ನು ಭೇಟಿ ಮಾಡಲಾಗಿದೆ. ಮಂಗಳವಾರ ಬೆಳಗಿನಿಂದ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತಗಳ ಪರಿಷ್ಕರಣೆಯ ಫಾರಂಗಳನ್ನು ವಿತರಣೆ ಮಾಡಿದ್ದು ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಪೂರ್ಣ ಮಾಹಿತಿ ದೊರೆತಿಲ್ಲಾ.
ಪ್ರತಿ ಬೂತ್‍ಗೆ ಒಬ್ಬರಂತೆ ಗ್ರಾಮ ಲೆಕ್ಕಿಗರು, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಿಬ್ಬಂದಿ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು, ಗ್ರಾಪಂ ಆರ್‌ಡಿಪಿಆರ್ ಮತ್ತು ಬೇರೆ ಇಲಾಖೆಗಳಿಂದ ಬಿಎಲ್‍ಓಗಳನ್ನು ನೇಮಕಗೊಳಿಸಲಾಗಿದೆ. ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್‍ಎಗಳು ಕೂಡಾ ಈ ಕಾರ್ಯಕ್ಕೆ ನೆರವು ನೀಡುತ್ತಿದ್ದಾರೆ.ಆನಂದಪುರ : ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ಮನೆ ಮನೆಗೆ ಎಸ್ಐಆರ್ ತಂಡದ ಭೇಟಿ ಮಂಗಳವಾರ ಬೆಳಗ್ಗೆಯಿಂದಲೇ ಪ್ರಾರಂಭಗೊಂಡಿದೆ. ಆನಂದಪುರ ಪಟ್ಟಣ ಸೇರಿದಂತೆ ಆಚಾಪುರ, ಯಡೇಹಳ್ಳಿ, ಹೊಸೂರು, ಗೌತಮಪುರ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಲ್ಲಿನ ಮತದಾರರ ಬಳಿ ರಾಜ್ಯದಲ್ಲೇ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕಣೆಗೆ ಬಿ ಎಲ್ ಓ, ಮತ್ತು ಅಧಿಕಾರಿಗಳು ಹಾಗೂ ವಿವಿಧ ಪಕ್ಷದ ಪದಾಧಿಕಾರಿಗಳು ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತದಾರರಿಗೆ ಅರ್ಜಿ ವಿತರಿಸಿ ಮಾಹಿತಿ ಕಲೆ ಹಾಕಿದರು.
ಬೀಗ ಹಾಕಿದ ಮನೆಗಳಿಗೆ ಪ್ರತ್ಯೇಕ ಸ್ಟಿಕ್ಕರನ್ನು ಅಂಟಿಸಲಾಯಿತು. ಒಂದೊಂದು ಮತಗಟ್ಟೆಯಲ್ಲಿನ 40 ಮತದಾರರಿಗೆ ಅರ್ಜಿಯನ್ನು ನೀಡುವ ಅವಕಾಶವಿದ್ದು ಕೆಲವು ಮತಗಟ್ಟೆ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಅರ್ಜಿ ನೀಡಿರುವುದಾಗಿ ತಿಳಿದು ಬಂದಿದೆ.
----------------------ಫೋಟೋ 30 ಎ, ಎನ್, ಪಿ 1 ಆನಂದಪುರದಲ್ಲಿ ಮಂಗಳವಾರದಿಂದ ಆರಂಭಗೊಂಡ ಮನೆ ಮನೆಗೆ ಎಸ್ಐಆರ್ ತಂಡ ಭೇಟಿ ಯಲ್ಲಿ ಆನಂದಪುರ ಸಮೀಪದ ಗೌತಮಪುರ ಮತಗಟ್ಟೆಯಲ್ಲಿ ಹಿರಿಯ ನಾಗರಿಕರಿಗೆ ಮಾಹಿತಿ ಅರ್ಜಿಯನ್ನು ವಿತರಿಸಿದ ನಾಡಕಚೇರಿಯ ಉಪತಹಸಿಲ್ದಾರ್ ಶಾಂತ ಮೂರ್ತಿ ಹಾಗೂ ತಂಡ.---------------------
-----------------
ಅಗರದಹಳ್ಳಿಯಲ್ಲಿ ಸಿ.ಹನುಮಂತು ಮನೆಯಿಂದ ಎಸ್ಐಆರ್‌ಗೆ ಚಾಲನೆ ನೀಡಲಾಯಿತು. ಎಂ.ಎಸ್.ಮಮತಾ, ಈರಮ್ಮ, ವೈಭವ್, ಅಭಿಷೇಕ್, ಸಂತೋಷ್ ಹಾಗೂ ಗಿರೀಶ್ ಇದ್ದರು.