- ಕಾದಂಬರಿಕಾರ ಡಾ. ಬಿ.ಎಲ್. ವೇಣು ಮತ್ತಿತರ ಗಣ್ಯರು ಭಾಗಿ
ಪಟ್ಟಣದಲ್ಲಿ ಮಾ.23ರಂದು ಚಿಕ್ಕ ಅರೆಕೆರೆ ಬಸವರಾಜ್ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಮತ್ತು ಧ್ವನಿಸುರುಳಿ ವಿವಿಧ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರು ಉದ್ಘಾಟನೆ ಮಾಡಿಲಿದ್ದಾರೆ ಎಂದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟಗಾರ, ವಕೀಲ ಆರ್.ಓಬಳೇಶ್ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಪಂಚಾಯಿತಿ ಆವರಣದ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಜನಶಕ್ತಿ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಬಯಲು ಸಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕೃತಿ ಹಾಗೂ ದ್ವನಿಸುರುಳಿ ಬಿಡುಗಡೆಯಾಗಲಿದೆ ಎಂದರು.ಪತ್ರಕರ್ತ, ಸಾಹಿತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಕವಿಗಳಿಂದ ಮಹಿಳಾ ಸಾಧಕರ ಕುರಿತು ಕೇವಲ 21 ನಿಮಿಷಗಳಲ್ಲಿ ದಾಖಲೆ ಬರಹ ಮತ್ತು ವಿವಿಧ ಸಾಧಕರಿಗೆ ಸನ್ಮಾನ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಅನಂತರ ಖ್ಯಾತ ಚಲನಚಿತ್ರ ಸಂಭಾಷಣೆಕಾರ, ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಡಾ. ಬಿ.ಎಲ್. ವೇಣು ಅವರಿಂದ ಕೃತಿ ಬಿಡುಗಡೆ ಮತ್ತು ಧ್ವನಿಸುರುಳಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಪ್ರಗತಿಪರ ಮುಖಂಡ ಆರ್.ಸತ್ಯಮೂರ್ತಿ ಗೌರಿಪುರ ಮತ್ತಿತರ ಮುಖಂಡರು ಹಾಜರಿದ್ದರು.
- - --21ಜೆ.ಜಿ.ಎಲ್.1:
ಜಗಳೂರು ಪಟ್ಟಣದಲ್ಲಿ ವಕೀಲ ಆರ್. ಓಬಳೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಪಿ.ಎಚ್. ಬಸವರಾಜ ಇತರರು ಇದ್ದರು.