ಕನ್ನಡಪ್ರಭ ವಾರ್ತೆ ಬೆಳಗಾವಿ
೨೦೨೪ನೇ ಸಾಲಿನ ವಿವಿಧ ದತ್ತಿ ಜೀವಮಾನ ಸಾಧನೆ ಪ್ರಶಸ್ತಿಗಳು:
-ಪ್ರೊ.ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ- ಪ್ರಾಣನಾಥಾಚಾರ್ಯ ಪಾಂಗ್ರಿ-ಡಾ.ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ- ಉಮಾ ಕುಲಕರ್ಣಿ.
-ದಿ.ವೆಂ.ಲ.ಜೋಶಿ ಸ್ಮಾರಕ ದತ್ತಿ ಪ್ರಶಸ್ತಿ- ಈಶ್ವರ ಮಮದಾಪುರ
-ರಾಮಚಂದ್ರಪ್ಪ ಹಾಗೂ ಷನ್ಮುಖಪ್ಪ ಗೊಣಬಾಳ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ- ಬಿ.ಎಸ್.ಗವಿಮಠ,
ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳು:
-ಪಿ.ವಿಜಯಕುಮಾರ ದತ್ತಿ ಪ್ರಶಸ್ತಿಗೆ ಡಾ.ಗುರದೇವಿ ಹುಲೆಪ್ಪನವರಮಠ ಅವರ ಮಕ್ಕಳ ಸಾಹಿತ್ಯ ಬೆಳಗು ಜಗವ ಮಗು ಕೃತಿ.
-ದಿ.ಣಮಂತರಾವ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿಗೆ ಪಾರ್ವತಿ ಪಿಟಗಿ ಅವರ ಕಾದಂಬರಿ ಚಂದ್ರಯಾನ ಕೃತಿ.
-ದಿ.ಚಂದ್ರವ್ವ ಧರ್ಮಾಜಿ ಅನಗೋಳ ದತ್ತಿ ಪ್ರಶಸ್ತಿಗೆ ಶ್ವೇತಾ ನರಗುಂದ ಅವರ ಕತೆಗಳು ಆಯಾಮ ಕೃತಿ.
-ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿಗೆ ಮಾಲಾ ಅಕ್ಕಿಶೆಟ್ಟಿ ಅವರ ವೈಚಾರಿಕ ಕೃತಿ ಸ್ವಾವಲಂಬಿ ಬುದುಕಿನಾಚೆ.-ದಿ.ಭಾರತಿಬಾಯಿ ಬಾಳಕೃಷ್ಣ ಜೋಶಿ ಸ್ಮರಣಾರ್ಥ ದತ್ತಿ ಪ್ರಶಸ್ತಿ ಜೀವನ ಚರಿತ್ರೆಗೆ ಎಲ್.ಎಸ್.ಶಾಸ್ತ್ರಿ ಅವರ ಕನ್ನಡದ ಭಾಗ್ಯ ಕೃತಿ.
-ವಿ.ಆರ್.ಗುಡಿ ದತ್ತಿ ಪ್ರಶಸ್ತಿ, ಅತ್ಯುತ್ತಮ ಆಧ್ಯಾತ್ಮಿಕ ಕೃತಿಗೆ ದೀಪಿಕಾ ಚಾಟೆ ಅವರ ಶ್ರೀರಾಮಚಂದ್ರ ಚರಿತೆ ಮತ್ತು ದಿ.ರಾಮರಾವ್ -ಶಿರಹಟ್ಟಿ ದತ್ತಿ ಪ್ರಶಸ್ತಿ -ಲೇಖಕರ ಉತ್ತಮ ಪ್ರಥಮ ಕೃತಿಗೆ ಇಂದಿರಾ ಹೋಳಕರ ಅವರ ಮಿಂಚು ಮಿಂಚೈತಿ ಕೃತಿ ಆಯ್ಕೆಯಾಗಿವೆ.ಪ್ರಶಸ್ತಿಯನ್ನು ಡಿ.೨೫ ರಂದು ನಡೆಯುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ತಿಳಿಸಿದ್ದಾರೆ. ಪ್ರಶಸ್ತಿ ವಿಜೇತರಿಗೆ ಪ್ರತಿಷ್ಠಾನ ಅಧ್ಯಕ್ಷ ಎಸ್.ಎಂ.ಕುಲಕರ್ಣಿ ಅಭಿನಂದನೆ ತಿಳಿಸಿದ್ದಾರೆ.