6ರಂದು ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ

KannadaprabhaNewsNetwork | Published : Jan 3, 2025 12:33 AM

ಸಾರಾಂಶ

ಜ. ೬ರಂದು ದಿ. ನಾರಾಯಣ ನಾಯಕ ಹಿರೇಗುತ್ತಿ ವೇದಿಕೆಯಲ್ಲಿ ನಡೆಯುವ ಜಿಲ್ಲಾ ಶೈಕ್ಷಣಿಕ ಸಮಾವೇಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ.

ಯಲ್ಲಾಪುರ: ಪಟ್ಟಣದ ಕಾರ್ಮಿಕ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಆಶ್ರಯದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಜ. ೬ರಂದು ಬೆಳಗ್ಗೆ ೧೦ಕ್ಕೆ ನಡೆಯಲಿದೆ ಎಂದು ಮಾಧ್ಯಮಿಕ ನೌಕರ ಸಂಘದ ಕಾರ್ಯದರ್ಶಿ ಜಿ.ಆರ್. ಭಟ್ಟ ತಿಳಿಸಿದರು.ಡಿ. ೨೯ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಮಾಹಿತಿ ನೀಡಿ, ಜ. ೬ರಂದು ದಿ. ನಾರಾಯಣ ನಾಯಕ ಹಿರೇಗುತ್ತಿ ವೇದಿಕೆಯಲ್ಲಿ ನಡೆಯುವ ಜಿಲ್ಲಾ ಶೈಕ್ಷಣಿಕ ಸಮಾವೇಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಆರ್.ವಿ. ದೇಶಪಾಂಡೆ, ಎಂಎಲ್‌ಸಿಗಳಾದ ಎಸ್.ವಿ. ಸಂಕನೂರ, ಶಾಂತಾರಾಮ ಸಿದ್ದಿ, ವಿಕೇಂದ್ರಿಕರಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಆಯುಕ್ತೆ ಜಯಶ್ರೀ ಶಿಂತ್ರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಕಾಧ್ಯಕ್ಷ ಶಶಿಭೂಷಣ ಹೆಗಡೆ, ಡಿಡಿಪಿಐ ಬಸವರಾಜ, ವಿವಿಧ ತಾಲೂಕುಗಳ ಬಿಇಒ ಮತ್ತು ಅಧಿಕಾರಿಗಳು ಗಣ್ಯರು ಭಾಗವಹಿಸುವರು ಎಂದರು.

ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮು ಮೂಡಣ್ಣನವರ್, ದಿನೇಶ ನೇತ್ರೇಕರ, ಜಿ.ಯು. ಹೆಗಡೆ, ಪ್ರಮುಖರಾದ ಅಜೇಯ ನಾಯಕ, ಜಿ.ಕೆ. ನಾಯ್ಕ, ವಿ.ಎನ್. ಅರಿಶಿನಗೇರಿ, ಎಸ್.ಆರ್. ನರಸಣ್ಣನವರ್, ನಾರಾಯಣ ದಾಯಿಮನೆ, ಎಂ.ರಾಜಶೇಖರ, ಎಂ.ಕೆ. ಭಟ್ಟ, ನವೀನಕುಮಾರ ಮುಂತಾದವರು ಉಪಸ್ಥಿತರಿದ್ದರು.ಸವಣಗೇರಿ ಶಾಲೆಗೆ ಸಹಾಯಕ ಆಯುಕ್ತೆ ಕಾವ್ಯಾರಾಣಿ ಭೇಟಿ

ಯಲ್ಲಾಪುರ: ತಾಲೂಕಿನ ಸವಣಗೇರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಕಾವ್ಯಾರಾಣಿ ಸಹಾಯಕ ಆಯುಕ್ತರು ಭೇಟಿ ನೀಡಿ ಶಾಲೆಯ ನಲಿ ಕಲಿ ತರಗತಿ, 6ನೇ ತರಗತಿ ಇಂಗ್ಲಿಷ್ ಪಾಠಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಪಾಠ ಮಾಡುವುದನ್ನು ಹಾಗೂ ಮಕ್ಕಳ ಕಲಿಕೆ ನೋಡಿ ಸಂತಸ ವ್ಯಕ್ತಪಡಿಸಿದರು.ಶಾಲೆಯ ಆವಾರದಲ್ಲಿರುವ ಅಥರ್ವ ಶಾಲಾವನವನ್ನು ವೀಕ್ಷಿಸಿದರು. ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ವಿವೇಕ ಕೊಠಡಿ ಕಾಮಗಾರಿ ಮತ್ತು ಶಾಲಾ ಶೌಚಾಲಯದ ಕಾಮಗಾರಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕಾವ್ಯಾರಾಣಿ ಅವರನ್ನು ಶಾಲೆಯ ವತಿಯಿಂದ ಮತ್ತು ತಾಲೂಕು ಸರ್ಕಾರಿ ನೌಕರರ ವತಿಯಿಂದ ಸಂಜೀವ ಕುಮಾರ್ ಹೊಸ್ಕೇರಿ ಮತ್ತು ಶಿಕ್ಷಕರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಗೀತಾ ನಾಯ್ಕ, ಪೂರ್ಣಿಮಾ ನಾಯ್ಕ್, ಪವಿತ್ರಾ ಆಚಾರಿ ಉಪಸ್ಥಿತರಿದ್ದರು.

Share this article