₹13.59 ಕೋಟಿ ನಿವ್ವಳ ಲಾಭ: ವಾರ್ಷಿಕ ಸಭೆಯಲ್ಲಿ ಅಧ್ಯಕ್ಷರ ಮಾಹಿತಿ
ಮುಂದುವರೆದು ಅವರು ಬ್ಯಾಂಕಿನ ಸದಸ್ಯರ ಸಂಖ್ಯೆ 51,487 ದಾಟಿದ್ದು, ಸಂದಾಯಿತ ಶೇರು ಬಂಡವಾಳ ₹44.93 ಕೋಟಿ ತಲುಪಿದೆ. ಇದು ಬ್ಯಾಂಕು ಸುದೃಢವಾಗಿ ಪ್ರಗತಿಯತ್ತ ಸಾಗುವ ಸಂಕೇತವಾಗಿದೆ ಎಂದು ತಿಳಿಸಿದರು.ಬ್ಯಾಂಕು ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ಮುಂಬರುವ ದಿನದಲ್ಲಿ ನೆರೆಯ ಗೋವಾ ರಾಜ್ಯಕ್ಕೂ ವಿಸ್ತರಿಸುವ ಕಾರ್ಯಯೋಜನೆ ಹೊಂದಿರುವುದಾಗಿ ತಿಳಿಸಿದರು.ಪ್ರಸ್ತುತ ಬ್ಯಾಂಕು ಒಟ್ಟೂ 22 ಶಾಖೆ ಹಾಗೂ 2 ವಿಸ್ತರಣಾ ಶಾಖೆ ಹೊಂದಿದ್ದು, ಇನ್ನೂ 03 ನೂತನ ಶಾಖೆಗಳು ರಾಣೆಬೆನ್ನೂರು, ಸಾಗರ ಹಾಗೂ ಉಡುಪಿಯಲ್ಲಿ ಮುಂದಿನ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಇದರಿಂದ ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ 25ಕ್ಕೆ ತಲುಪಲಿದೆ ಎಂದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಬ್ಯಾಂಕಿನ ಪ್ರಗತಿಯ ಕುರಿತು ಚಿತ್ರಣ ನೀಡಿದರು.ಈ ಸಂದರ್ಭ ಉತ್ಕೃಷ್ಟ ಸಾಧನೆ ಮಾಡಿದ ಬ್ಯಾಂಕಿನ ದಾಂಡೇಲಿ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗೆ ಅವರ ಈ ಸಾಧನೆಗಾಗಿ ಸಭೆಯಲ್ಲಿ ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿ, ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಬ್ಯಾಂಕಿನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಸದಸ್ಯರು 122 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹5.61 ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬ್ಯಾಂಕಿನ ನಿರ್ದೇಶಕ ಪ್ರೊ. ಕೆ.ಎನ್. ಹೊಸಮನಿ ಪರಿಚಯಿಸಿದರು. ಉಪಾಧ್ಯಕ್ಷ ಸಂತೋಷ ಎಸ್. ಪಂಡಿತ ಇದ್ದರು. ಬ್ಯಾಂಕಿನ ನಿರ್ದೇಶಕ ಸದಾನಂದ ಎಮ್. ನಾಯ್ಕ ವಂದಿಸಿದರು.