ರಾಖಿ ಕಟ್ಟಿ ಬಾಂಧವ್ಯ ಗಟ್ಟಿಗೊಳಿಸಿದ ಸಹೋದರಿಯರು

KannadaprabhaNewsNetwork |  
Published : Aug 10, 2025, 01:31 AM IST
9ಎಚ್‌ಯುಬಿ35ಹುಬ್ಬಳ್ಳಿಯ ಪಿರಮಿಡ್ ಧ್ಯಾನ ಮಂದಿರದಲ್ಲಿ ನಡೆದ ಧ್ಯಾನ ಶಿಬಿರದಲ್ಲಿ ಡಾ. ಎ.ಸಿ. ವಾಲಿ ಗುರೂಜಿ ಮಾತನಾಡಿದರು. | Kannada Prabha

ಸಾರಾಂಶ

ಹಬ್ಬದ ಅಂಗವಾಗಿ ಬೆಳಗ್ಗೆ ಬೇಗನೆ ಎದ್ದು, ಪೂಜೆ ಕಾರ್ಯಕ್ರಮಗಳನ್ನು ಮುಗಿಸಿ, ಮಹಿಳೆಯರು ರಕ್ಷಾ ಬಂಧನದ ನಂತರ ಸಹೋದರರಿಗೆ ವಿವಿಧ ಸಿಹಿ ತಿನಿಸುಗಳನ್ನು ತಿನಿಸುವ ಮೂಲಕ ಶುಭ ಹಾರೈಸಿದರು.

ಹುಬ್ಬಳ್ಳಿ: ನಗರದಾದ್ಯಂತ ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಬಂಧನವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಅಭಯ ನೀಡಿದರು.

ಹಬ್ಬದ ಅಂಗವಾಗಿ ಬೆಳಗ್ಗೆ ಬೇಗನೆ ಎದ್ದು, ಪೂಜೆ ಕಾರ್ಯಕ್ರಮಗಳನ್ನು ಮುಗಿಸಿ, ಮಹಿಳೆಯರು ರಕ್ಷಾ ಬಂಧನದ ನಂತರ ಸಹೋದರರಿಗೆ ವಿವಿಧ ಸಿಹಿ ತಿನಿಸುಗಳನ್ನು ತಿನಿಸುವ ಮೂಲಕ ಶುಭ ಹಾರೈಸಿದರು.

ಉದ್ಯೋಗ ನಿಮಿತ್ತ ವಿವಿಧ ನಗರದಲ್ಲಿರುವ ಸಹೋದರರಿಗೆ ಅವರ ಸಹೋದರಿಯರು ಪೋಸ್ಟ್‌ ಮೂಲಕ ರಾಖಿ ಮತ್ತು ಆರತಕ್ಷತೆ ಕಳಿಸಿದ್ದು ಕಂಡು ಬಂದಿತು. ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳಲ್ಲಿ ರಕ್ಷಾ ಬಂಧನ ಆಚರಿಸಲಾಯಿತು.

ಸಿದ್ದಿವಿನಾಯಕ ಆಶ್ರಮದಲ್ಲಿ ರಕ್ಷಾಬಂಧನ:

ಹುಬ್ಬಳ್ಳಿ ಸಾರ್ವಜನಿಕ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ಇಲ್ಲಿನ ಗಬ್ಬೂರ ವೃತ್ತದ ಶ್ರೀಸಿದ್ಧಿವಿನಾಯಕ ಆಶ್ರಮದಲ್ಲಿ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಸಮಾಜ ಸೇವಕ ಧರಣೇಂದ್ರ ಜವಳಿ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವುದು ರಕ್ಷಾ ಬಂಧನ ಪ್ರಮುಖ ಉದ್ದೇಶವಾಗಿದೆ ಎಂದರು.

ಈರಣ್ಣ ಪಾಳೇದ, ಹಿರಿಯ ಲೋಹ ಶಿಲ್ಪಿ ಸಾಯಿನಾಥ ಹಿತ್ತಾಳಿ, ಸಿದ್ಧಿವಿನಾಯಕ ಹುಲಗೂರಮಠ ಮಾತನಾಡಿದರು. ಸಂಗೀತಾ ಇಜಾರದ ಅಧ್ಯಕ್ಷತೆ ವಹಿಸಿದ್ದರು.

ನಂತರ ಮಹಾ ಮಂಡಳದ ಮಹಿಳೆಯರು ಆಶ್ರಮದ ವೃದ್ಧರು, ಮಕ್ಕಳಿಗೆ, ರಾಖಿ ಕಟ್ಟಿ, ಆರತಿ ಬೆಳಗುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ಚಂದ್ರಶೇಖರ ಗಾಣಿಗೇರ, ಅಕ್ಕಮ್ಮ ಕಂಬಳಿ, ಪುಷ್ಪಾ ಹಿತ್ತಾಳಿ, ಸರಸ್ವತಿ ಮೆಹರವಾಡೆ, ಮಧುಮತಿ ಪಾಟೀಲ, ರೇಖಾ ಆಪ್ಟೆ, ಡಾ. ಮಂಜುಳಾ ಹತ್ತಿಮತ್ತೂರ, ಸವಿತಾ ಚಂದನಮಟ್ಟಿ, ಅನಿತಾ ಜಡಿ ಮತ್ತಿತರರಿದ್ದರು.

ಈಶ್ವರಿ ವಿಶ್ವವಿದ್ಯಾಲಯ

ಇಲ್ಲಿನ ಸಂಗೊಳ್ಳಿ ರಾಯಣ್ಣ ನಗರದ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿಯರು ರಕ್ಷಾಬಂಧನದ ಅಂಗವಾಗಿ ಮಾಧ್ಯಮ ಸಹೋದರರಿಗೆ ರಾಖಿ ಕಟ್ಟಿ ಸಿಹಿ ನೀಡಿ ಶುಭಾಶಯ ಕೋರಿದರು.

ಬಾಕ್ಸ್

ಪ್ರಹ್ಲಾದ್‌ ಜೋಶಿ ಶುಭಾಶಯ

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಮಹಾನಗರ ಪಾಲಿಕೆ ಮಹಿಳಾ ಪೌರಕಾರ್ಮಿಕರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ರಾಖಿ ಕಟ್ಟಿ ಸಿಹಿ ತಿನಿಸಿ ಶುಭಾಶಯ ಕೋರಿದರು.

ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಲಕ್ಷ್ಮೀ ವಾಲಿ, ಮಂಜುಳಾ ವಜ್ಜಣ್ಣವರ, ಪಡೆವ್ವ ಹಾವರಗಿ, ಹುಲಿಗೆಮ್ಮ ಚಿಕ್ಕತುಂಬಳ, ಪಾರವ್ವ ಹೊಸಮನಿ, ಕಸ್ತೂರಿ ತಮದಡ್ಡಿ, ಗಂಗಮ್ಮ ಗುಂಡ, ಲಕ್ಷ್ಮೀ ಬೇತಾಪಲ್ಲಿ ಇತರರಿದ್ದರು.

ಸೇವಾ ಭಾರತಿ ಕೇಂದ್ರ

ಇಲ್ಲಿನ ಶಬರಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೇವಾ ಭಾರತಿ ಮಾತೃಛಾಯಾ ಕಲ್ಯಾಣ ಕೇಂದ್ರದ ಮಕ್ಕಳೊಂದಿಗೆ ಶನಿವಾರ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು. ಈ ವೇಳೆ, ಮಾತೃಛಾಯಾ ಕಲ್ಯಾಣ ಕೇಂದ್ರದ ಅಧ್ಯಕ್ಷತೆ ಕಮಲಾ ಜೋಶಿ ಮಾತನಾಡಿದರು.

ಪಾಲಿಕೆ ಸದಸ್ಯ ಉಮಾ ಮುಕುಂದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಭಾರತಿ ಮಾತಾಜಿ ರತ್ನಾ ಪವಾಡಶೆಟ್ಟಿ, ಬ್ರಾಹ್ಮಣ ಸಂಘದ ಮುಖಂಡ ಸುನೀಲ ಗುಮಾಸ್ತೆ, ವಿನೋದ ಪಟ್ವಾ, ಶ್ರೀನಿವಾಸ ಕಟ್ಟಿಮನಿ, ನಿಖಿಲ ವಾಂಘಿ ಹಾಗೂ ಮಧುರಾ ಎಸ್ಟೇಟ್ ಮಹಿಳಾ ಮಂಡಳದ ಸದಸ್ಯರು ಸೇರಿದಂತೆ ಅನೇಕರಿದ್ದರು.

ಧ್ಯಾನ, ಸತ್ಸಂಗ ಕಾರ್ಯಕ್ರಮ

ನೂಲ ಹುಣ್ಣಿಮೆಯ ಪ್ರಯುಕ್ತ ಶನಿವಾರ ನಗರದ ಪಿರಮಿಡ್ ಧ್ಯಾನ ಮಂದಿರದಲ್ಲಿ ಧ್ಯಾನ ಶಿಬಿರ ಹಾಗೂ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಡಾ. ಎ.ಸಿ. ವಾಲಿ ಗುರೂಜಿ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ನಾವೆಂದಿಗೂ ಮರೆಯಬಾರದು. ಧ್ಯಾನದ ಮುಖಾಂತರ ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮಲ್ಲಿಯೇ ದೇವರನ್ನು ಕಾಣಬೇಕು. ಯಾವುದೇ ಧರ್ಮ, ಪಂತವಿರಲಿ ಪ್ರತಿಯೊಬ್ಬರು ಧ್ಯಾನ ಅಳವಡಿಸಿಕೊಳ್ಳಬೇಕು ಎಂದರು.

ಪಿರಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಸಾವಕಾರ್ ಅಧ್ಯಕ್ಷತೆ ವಹಿಸಿದ್ದರು. ವಿಶಾಲಾಕ್ಷಿ ಆಕಳವಾಡಿ ಧ್ಯಾನ ಶಿಬಿರ ನಡೆಸಿಕೊಟ್ಟರು. ಟ್ರಸ್ಟಿಗಳಾದ ನೀಲಕಂಠ ಆಕಳವಾಡಿ, ಬಸವರಾಜ ಹೊಸಮನಿ ಮುಂತಾದವರಿದ್ದರು.

ಬಾಕ್ಸ್

ಕೇಶ್ವಾಪುರದ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ರಕ್ಷಾ ಬಂಧನದ ಅಂಗವಾಗಿ ಪತಂಜಲಿ ಯೋಗ ಪೀಠದ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ ಹಾಗೂ ಯೋಗ ಗುರು ಭವರಲಾಲ್ ಆರ್ಯ ಅವರು ಶನಿವಾರ ನಾಡಿನ ಒಳಿತಿಗೆ ವಿಶೇಷ ಅಗ್ನಿಹೋತ್ರ ಕಾರ್ಯಕ್ರಮ ಆಯೋಜಿಸಿದ್ದರು.

ನಂತರ ಪತಂಜಲಿ ಪರಿವಾರ ಹು-ಧಾ ಸಹೋದರಿಯರು, ಸಾರ್ವಜನಿಕರು ಎಲ್ಲ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಶುಭಾಶಯ ಕೋರಿದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ