ಸೌಜನ್ಯಾ ಪ್ರಕರಣದಲ್ಲಿ ಸಿಎಂ ಡಿಕೆಶಿ ನ್ಯಾಯ ಕೊಡಿಸಬೇಕು: ತಿಮರೋಡಿ

KannadaprabhaNewsNetwork |  
Published : Nov 27, 2026, 02:30 AM IST
26ಎಂಡಿಜಿ4. ಮುಂಡರಗಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಜರುಗಿದ ಸಂವಿಧಾನ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಬಸವರಾಜ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ಸೌಜನ್ಯಾ ಪ್ರಕರಣದಲ್ಲಿ ಎಸ್ಐಟಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದ 90 ದಿನಗಳಲ್ಲೇ ಪ್ರಕರಣದ ತನಿಖೆ ಮುಗಿಸಿ ಎಂದು ನಾವು ಖಂಡಿತಾ ಹೇಳುವುದಿಲ್ಲ. ಈ ಪ್ರಕರಣದಲ್ಲಿ ಮಾತ್ರ ನಮಗೆ ರಾಜ್ಯದ ಮುಖ್ಯಮಂತ್ರಿಗಳೇ ನ್ಯಾಯ ದೊರಕಿಸಿ ಕೊಡಬೇಕು ಎಂದು ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಮಂಗಳೂರು: ಸೌಜನ್ಯಾ ಪ್ರಕರಣದಲ್ಲಿ ಎಸ್ಐಟಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದ 90 ದಿನಗಳಲ್ಲೇ ಪ್ರಕರಣದ ತನಿಖೆ ಮುಗಿಸಿ ಎಂದು ನಾವು ಖಂಡಿತಾ ಹೇಳುವುದಿಲ್ಲ. ಈ ಪ್ರಕರಣದಲ್ಲಿ ಮಾತ್ರ ನಮಗೆ ರಾಜ್ಯದ ಮುಖ್ಯಮಂತ್ರಿಗಳೇ ನ್ಯಾಯ ದೊರಕಿಸಿ ಕೊಡಬೇಕು ಎಂದು ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.

ಮಂಗಳೂರಿನ ಎಸ್ಐಟಿ ಕಚೇರಿ ಮುಂದೆ ಗುರುವಾರ ಹಾಜರಾಗಿ ಪ್ರಕರಣದ ಬಗ್ಗೆ ತಮ್ಮಲ್ಲಿದ್ದ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ಮುಖ್ಯಮಂತ್ರಿಗಳು ಹಿಂದೆ ಡಿಸಿಎಂ ಆಗಿದ್ದಾಗಲೇ ನನ್ನಂಥಹ ಸಾವಿರ ಡಿಕೆಶಿಗಳು ನಿಮ್ಮ ರಕ್ಷಣೆಗೆ ಇದ್ದೇನೆ ಎಂದು ಹೇಳಿದ್ದರು. ಯಾರಿಗೆ ಹೇಳಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ನಾವು ಎಸ್ಐಟಿಯವರಲ್ಲಿ ನ್ಯಾಯ ಕೇಳದೆ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಕೇಳುತ್ತಿದ್ದೇವೆ ಎಂದರು. ಸೌಜನ್ಯಾ ಪ್ರಕರಣದಲ್ಲಿ ಎಸ್ಐಟಿ ಮುಂದೆ ಹಾಜರಾಗಿ ತನಿಖೆಗೆ ಪೂರಕ ದಾಖಲೆಗಳನ್ನು ನೀಡಿದ್ದೇನೆ. ನನ್ನಲ್ಲಿರುವ ಹಲವಾರು ದಾಖಲೆಗಳನ್ನು ಟೈಪಿಸಿರುವ ಬರಹ ರೂಪದಲ್ಲಿ ಹಾಗೂ ಸಿಡಿಯಲ್ಲೂ ನೀಡಿದ್ದೇನೆ. ಎಸ್‌ಐಟಿ ಅಧಿಕಾರಿಗಳು ಇನ್ನೂ ಮಾಹಿತಿಗಳನ್ನು ನೀಡಬೇಕೆಂದಿದ್ದಾರೆ. ಅದನ್ನೂ ನೀಡಲು ನಾನು ತಯಾರಾಗಿದ್ದೇನೆ ಎಂದರು.

ಸೌಜನ್ಯಾ ಪ್ರಕರಣ ನಡೆದು 14 ವರ್ಷ ಕಳೆದಿದೆ. ಅಷ್ಟೊಂದು ಹಿಂದಿನ ಪ್ರಕರಣದ ತನಿಖೆಯನ್ನು 90 ದಿನಗಳಲ್ಲಿ ಪೂರೈಸಿ ಕೊಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ಮಾಡಿದೆ. ಎಸ್ಐಟಿ ಅಧಿಕಾರಿಗಳು ಅದಕ್ಕೆ ಪೂರಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರಕರಣದ ಆಳಕ್ಕೆ ಇಳಿಯಬೇಕಾದರೆ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದರು.

ಸೌಜನ್ಯಾ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿದೆ ಎಂದು ಸಿಬಿಐ, ಸಿಐಡಿ, ಪೊಲೀಸ್ ಅಧಿಕಾರಿಗಳು, ಇಲ್ಲಿನ ರಾಜಕೀಯ ನಾಯಕರ ಮುಖಕ್ಕೆ ಸುಪ್ರೀಂ ಕೋರ್ಟ್‌ ಮಂಗಳಾರತಿ ಮಾಡಿದೆ. ಉಳಿದ ಸಾಕ್ಷಿಗಳನ್ನು ಇನ್ನು ಹುಡುಕಬೇಕಾಗಿದೆ. ಅದು ಅಷ್ಟೊಂದು ಸುಲಭದ ವಿಚಾರವೂ ಅಲ್ಲ. ಆದರೂ ಇಂದಿನ ತಂತ್ರಜ್ಞಾನ ಯುಗದಲ್ಲಿ ಆ ಸಾಕ್ಷಿಗಳನ್ನು ಹುಡುಕುವ ವಿಧಾನ ಇದ್ದೇ ಇದೆ. ಹುಡುಕಿಯೇ ಹುಡುಕುತ್ತಾರೆ‌. ಆದ್ದರಿಂದ ಸೌಜನ್ಯಾ ಪ್ರಕರಣದ ಹಿಂದಿನ‌ ಆರೋಪಿಗಳನ್ನು ಪತ್ತೆ ಮಾಡಿಯೇ ಮಾಡುತ್ತಾರೆಂಬ ಭಾವನೆ ನಮಗಿದೆ. ಹೊಸಸಾಕ್ಷಿಗಳು ಬರುತ್ತಿದ್ದಾರೆ, ಗೌಪ್ಯ ಸಾಕ್ಷಿಗಳು ಇದ್ದಾರೆ. ನಾವೂ ಒಂದಷ್ಟು ಸಾಕ್ಷಿಗಳನ್ನು ಕೊಡುತ್ತೇವೆ. ಎಸ್ಐಟಿ ನಮ್ಮನ್ನು ಮತ್ತೆ ಕರೆದಿದ್ದಾರೆ ಎಂದರು.

ಸೌಜನ್ಯಾ ಹೋರಾಟಕ್ಕೆ ಆರ್‌ಎಸ್ಎಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಧ್ವನಿ ಎತ್ತಿರುವ ಕುರಿತು ಪ್ರತಿಕ್ರಿಯಿಸಿದ ತಿಮರೋಡಿ, ಕಲ್ಲಡ್ಕ ಪ್ರಭಾಕರ್ ಭಟ್ ಸನಾತನ ಹಿಂದೂ ಧರ್ಮದ ಪರವಾಗಿ ಹೋರಾಡಿಕೊಂಡು ಬಂದವರು. ನಾವು ಕೂಡ ರಾಜಕೀಯಕ್ಕಾಗಲಿ ಅಥವಾ ಸ್ವಾರ್ಥಕ್ಕಾಗಲಿ ಈ ಹೋರಾಟ ಮಾಡುತ್ತಿಲ್ಲ ಎಂದರು. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಹಾಗೂ ಅಸಹಜ ಸಾವು ಸೇರಿ ಒಟ್ಟು 2,000ಕ್ಕೂ ಅಧಿಕ ಯುಡಿಆರ್ ಪ್ರಕರಣಗಳಿವೆ. ಅವುಗಳ ಬಗ್ಗೆ ಯಾಕೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಿಲ್ಲ ಎಂದವರು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ತರಂಜನ್ ಬೋಳಾರ್‌ಗೆ ರಾಜ್ಯದ ಶ್ರೇಷ್ಠ ಸಾಧಕ ಪುರಸ್ಕಾರ ‘ಕರುನಾಡ ರತ್ನ’ ಪ್ರಶಸ್ತಿ
ಕರಾವಳಿ ಪೊಲೀಸ್‌ ಬಲ ಸುಧಾರಣೆ, ಉನ್ನತೀಕರಣಕ್ಕೆ ಬದ್ಧ: ಖರ್ಗೆ