ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶಾಸಕರಿಂದ ಸ್ಥಳ ಪರಿಶೀಲನೆ

KannadaprabhaNewsNetwork |  
Published : Nov 01, 2024, 12:07 AM IST
31ಕೆಎಂಎನ್ ಡಿ11 | Kannada Prabha

ಸಾರಾಂಶ

ಆರೋಗ್ಯ ಕೇಂದ್ರಕ್ಕೆ ಜಾಗದ ಕೊರತೆ ಇದ್ದು, ಹೆದ್ದಾರಿಗೆ ಸಮೀಪವಿದ್ದರೆ ಒಳ್ಳೆಯದು ಎಂಬ ಕಾರಣದಿಂದ ಸ್ಥಳ ಹುಡುಕಾಟದಲ್ಲಿದ್ದೇವೆ. ಕೆಪಿಟಿಸಿಎಲ್ 4 ಎಕರೆಗೂ ಹೆಚ್ಚು ಭಾಗ ನಿವೇಶನ ಖಾಲಿ ಇದ್ದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರು ಮಾಡಿಕೊಡುವಂತೆ ಕೇಳಿದಾಗ ಸಚಿವರು ಖುದ್ದು ಜಾಗವನ್ನು ನೋಡಿ ಮಂಜೂರು ಮಾಡಲು ಒಪ್ಪಿದ್ದಾರೆ.

ಹಲಗೂರು: ತೊರೆಕಾಡನಹಳ್ಳಿಯ ಕೆಪಿಟಿಸಿಎಲ್ ವಸತಿ ಗೃಹದ ಅವರಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕಾಗಿ ಕೆಪಿಟಿಸಿಎಲ್ ಮ್ಯಾನೆಜಿಂಗ್ ಡೈರೆಕ್ಟರ್ ಪಂಕಜ್ ಕುಮಾರ ಪಾಂಡೆ ಅವರೊಂದಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ಥಳ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ತೊರೆಕಾಡನಹಳ್ಳಿಯಲ್ಲಿ ಐದನೇ ಹಂತದ ಕಾವೇರಿ ನೀರು ಬಿಡುಗಡೆ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ.ಚಾರ್ಜ್ ಅವರಿಗೆ ನನ್ನ ಮನವಿ ಮೇರೆಗೆ ಹಲಗೂರಿಗೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿದೆ ಎಂದರು.

ಆರೋಗ್ಯ ಕೇಂದ್ರಕ್ಕೆ ಜಾಗದ ಕೊರತೆ ಇದ್ದು, ಹೆದ್ದಾರಿಗೆ ಸಮೀಪವಿದ್ದರೆ ಒಳ್ಳೆಯದು ಎಂಬ ಕಾರಣದಿಂದ ಸ್ಥಳ ಹುಡುಕಾಟದಲ್ಲಿದ್ದೇವೆ. ಕೆಪಿಟಿಸಿಎಲ್ 4 ಎಕರೆಗೂ ಹೆಚ್ಚು ಭಾಗ ನಿವೇಶನ ಖಾಲಿ ಇದ್ದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರು ಮಾಡಿಕೊಡುವಂತೆ ಕೇಳಿದಾಗ ಸಚಿವರು ಖುದ್ದು ಜಾಗವನ್ನು ನೋಡಿ ಮಂಜೂರು ಮಾಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

ಕೆಪಿಟಿಸಿಎಲ್ ಮ್ಯಾನೆಜಿಂಗ್ ಡೈರೆಕ್ಟರ್ ಪಂಕಜ್ ಕುಮಾರ್ ಪಾಂಡೆ ರವರು ಮಳವಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗುವಂತೆ 400 ಕೆ ವಿ ಸಬ್ ಸ್ಟೇಷನ್ ಗೆ 40 ಎಕರೆ ಜಾಗದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಆದರೆ, ಈ ಜಾಗದ ಲಭ್ಯತೆ ಇಲ್ಲದಿರುವುರಿಂದ ಗಾಣಾಳು ಸಮೀಪ ಮಡಳ್ಳಿ ಬಳಿ ಅವರಿಗೆ ಅವಶ್ಯವಿರುವ ಜಾಗವನ್ನು ಮಂಜೂರು ಮಾಡಲು ಕ್ರಮವಹಿಸಲಾಗುವುದು ಎಂದು ಶಾಸಕರು ಹೇಳಿದರು.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ತಹಸೀಲ್ದಾರ್ ಬಿ.ವಿ.ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಪಿ.ವೀರಭದ್ರಪ್ಪ, ತೊರೆ ಕಾಡನಹಳ್ಳಿ ಗ್ರಾಪಂ ಅಧ್ಯಕ್ಷ ತೇಜ್ ಕುಮಾರ್ (ಶ್ಯಾಮ್) ಎಡಿಎಲ್ಆರ್ ನಟೇಶ್, ರಾಜಸ್ವ ನಿರೀಕ್ಷಕ ಮಧುಸೂಧನ್, ತಾಲೂಕು ಸರ್ವೇಯರ್ ಬೀರೇಶ್ ಸೇರಿದಂತೆ ಹಲವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...