ಕನ್ನಡಪ್ರಭ ವಾರ್ತೆ ಚವಡಾಪುರ
ಬಳಿಕ ಮಾತನಾಡಿದ ಅವರು 2011ರಲ್ಲಿ ನಿರ್ಮಿಸಿರುವ ನ್ಯಾಯಾಲಯ ಕಟ್ಟಡದ ತಳಪಾಯ ಕುಸಿಯುತ್ತಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಒಳ್ಳೆಯ ಜಮೀನು ಗುರುತಿಸಲಾಗುತ್ತಿದೆ. ನಾನು ಯಾರ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುವವನಲ್ಲ. ಖುದ್ದು ಸ್ಥಳದಲ್ಲಿ ನಿಂತು ಪೂರ್ವಾಪರಗಳನ್ನೆಲ್ಲಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಒಳ್ಳೆಯ ಸುಸಜ್ಜಿತ ಕೋರ್ಟ್ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ನ್ಯಾಯಾಧೀಶೆ ನಾಗಶ್ರೀ, ನ್ಯಾಯಾಧೀಶರಾದ ವಿನಾಯಕ ಮಾಯಣ್ಣವರ, ಅನೀಲ ಅಮಾತೆ, ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ ಗಣಾಚಾರಿ, ತಹಸೀಲ್ದಾರ ಸಂಜೀವಕುಮಾರ ದಾಸರ್, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್ ಪಾಟೀಲ, ಪಿಡ್ಬ್ಲೂಡಿ ಇಲಾಖೆ ಎಇಇ ಲಕ್ಷ್ಮೀಕಾಂತ ಬಿರಾದಾರ, ಕೆಎನ್‌ಎನ್‌ಎಲ್ ಎಇಇ ಸಂತೋಷ ಸಜ್ಜನ, ವಕೀಲರಾದ ಸುರೇಶ ಅವಟೆ, ಸಿ.ಎಸ್ ಹಿರೇಮಠ, ಅನಿತಾ ದೊಡ್ಮನಿ, ಡಿಡಿ ದೇಶಪಾಂಡೆ, ಎಸ್.ಜೆ ಗುತ್ತೇದಾರ, ಎಸ್.ಜಿ. ಹುಲ್ಲೂರ, ಎಂ.ಎಲ್. ಪಟೇಲ, ಎಂ.ಕೆ. ಪಟೇಲ, ರವೀಂದ್ರ ಬಬಲೇಶ್ವರ, ದತ್ತು ಪೂಜಾರಿ, ಅನಿಲ ಜಮಾದಾರ, ಸುಪ್ರಿಯಾ ಅಂಕಲಗಿ, ಎಂ.ಎಸ್ ಪಾಟೀಲ ಇದ್ದರು.