ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಶ್ರೀಗಳು 3 ದಶಕಗಳಿಂದಲೂ ಭಕ್ತಾಧಿಗಳಿಗೆ ಮಾರ್ಗದರ್ಶನ, ದಾಸೋಹ ಉಣಬಡಿಸುವ ಔದಾರ್ಯ ಗುಣ ಹೊಂದಿದ್ದರು. ಎಲ್ಲಾ ವರ್ಗದ ಸಮಾಜದ ಮುಖಂಡರನ್ನು ಪ್ರೀತಿಸುತ್ತಾ, ಉತ್ತಮ ಬಾಂಧವ್ಯ ಹೊಂದುವ ಮೂಲಕ ಶ್ರೀಗಳು ಖ್ಯಾತರಾಗಿದ್ದರು. 1994ರಲ್ಲಿ ಅವರು ಅಂದಿನ ಮಠಾಧಿಪತಿಗಳಾಗಿದ್ದ ಬಸಪ್ಪ ಶ್ರೀಗಳಿಂದ ಮಠದ ಹೊಣೆಗಾರಿಕೆ ಸ್ವೀಕರಿಸಿ ಮೂರು ದಶಕಗಳ ಕಾಲ ತಮ್ಮ ಹೊಣೆಗಾರಿಕೆ ನಿಭಾಯಿಸುವ ಜೊತೆಗೆ ಸಿದ್ಧಗಂಗಾ ಶ್ರೀ, ಸುತ್ತೂರು ಶ್ರೀಗಳಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.
1947 ಜನವರಿ 1ರಂದು ಜನನ:ಮೈಸೂರು ಜಿಲ್ಲೆ ನರಸೀಪುರ ತಾಲೂಕು ಶಂಭುದೇವನಪುರ ಗ್ರಾಮದ ನಿವಾಸಿಗಳಾದ ಬಸಮ್ಮ ಹಾಗೂ ನಂಜುಂಡಪ್ಪ ದಂಪತಿಗಳ ಏಕೈಕ ಪುತ್ರರಾಗಿ ಶ್ರೀಗಳು 1947 ಜನವರಿ 1ರಂದು ಜನಿಸಿದ್ದರು. ಅವರಿಗೆ ಶಿವನಂಜಪ್ಪ ಎಂದು ನಾಮಕರಣ ಮಾಡಲಾಗಿತ್ತು. ಒಮ್ಮೆ ಆಲಹಳ್ಳಿ ಪಟ್ಟದ ಮಠದ ಹಿಂದಿನ ಶ್ರೀಗಳಾದ ಬಸಪ್ಪ ಸ್ವಾಮೀಜಿ ಇವರ ಮನೆಗೆ ಆಗಮಿಸಿದ್ದ ವೇಳೆ ಬಾಲಕನ ಮೇಲೆ ದೃಷ್ಟಿ ಬೀರಿ ಐದು ವರ್ಷವಾಗಿದ್ದಾಗಲೆ ಶ್ರೀಗಳನ್ನು ಮಠಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದಲೇ ಅವರ ವಿದ್ಯಾಭ್ಯಾಸ ಪ್ರಾರಂಭವಾಗುತ್ತದೆ.
1994ರಲ್ಲಿ ಅಂದಿನ ಮಠಾಧ್ಯಕ್ಷರಾದ ಬಸಪ್ಪ ಸ್ವಾಮೀಜಿ ಶಿವನಂಜಪ್ಪ ಎಂಬ ನಾಮಾಂಕಿತರಾಗಿದ್ದ ಶ್ರೀಗಳಿಗೆ ಶಿವಕುಮಾರ ಸ್ವಾಮಿ ಎಂದು ನಾಮಕರಣ ಮಾಡಿ ಪೀಠವನ್ನು ಹಸ್ತಾಂತರಿಸಿದ್ದರು. ಈ ಹಿನ್ನೆಲೆಯಲ್ಲಿ 30 ವರುಷಗಳ ಕಾಲ ಮಠದ ಹೊಣೆ ವಹಿಸಿಕೊಂಡು ಅನೇಕ ಸಾರ್ಥಕ ಕೆಲಸ ಮೂಡುವ ಮೂಲಕ ಶ್ರೀಗಳು ಜನಪ್ರಿಯರಾಗಿದ್ದರು. ಸಿದ್ಧಗಂಗಾಶ್ರೀಗಳಿಂದ ನಮನ: