ನರಗುಂದ: ನಮ್ಮ ಶಿವಾನಂದ ಶ್ರೀಗಳು ಭಕ್ತರ ಸಮೂಹ ಕಟ್ಟಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆಂದು ಗದುಗಿನ ಶಿವಾನಂದ ಮಠದ ಸದಾ ಶಿವಾನಂದ ಶ್ರೀಗಳು ಹೇಳಿದರು.
ನಮ್ಮ ನಾಡಿನಲ್ಲಿ ಹಲವಾರು ಶರಣರಲ್ಲಿ ನಮ್ಮ ಶಿವಾನಂದ ಶ್ರೀಗಳ ಒಬ್ಬರು. ಅಂದಿನ ದಿನಗಳಲ್ಲಿ ಈ ಸಂಕದಾಳ ಗ್ರಾಮದ ಚಿಕ್ಕ ಮಠದಲ್ಲಿ ಶ್ರೀಮಠದ ಭಕ್ತರೆ ಆಸ್ತಿಯೆಂದು ತಿಳಿದು ಪ್ರತಿ ವರ್ಷ ಭಕ್ತರನ್ನು ಸೇರಿಸಿಕೊಂಡು ಹಲವಾರು ರೀತಿ ಧಾರ್ಮಿಕ, ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮಗಳನ್ನು ಮಾಡಿ ಈ ಭಾಗದ ಭಕ್ತರನ್ನು ಉದ್ದಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಈ ಆಧುನಿಕ ಯುಗದಲ್ಲಿ ಮನುಷ್ಯ ಬದುಕಿಗಾಗಿ ಹಲವಾರು ರೀತಿಯ ಒತ್ತಡದಿಂದ ಬಳಲುತ್ತಿದ್ದಾನೆ. ಹಾಗಾಗಿ ನಾವು ಈ ಒತ್ತಡದಿಂದ ಹೊರ ಬರಬೇಕೆಂದರೆ ಪ್ರತಿ ದಿವಸ ನಾವು ಶಿವಾನಂದ ಶ್ರೀಗಳ ಜಪ, ತಪ ಮಾಡಿದರೆ ಮಾತ್ರ ಒತ್ತಡ ಜೀವನದಿಂದ ಹೊರಬರಲು ಸಾಧ್ಯವಾಗುತ್ತದೆ ಭಕ್ತರು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಚನ್ನಬಸವ ಮಹಾಸ್ವಾಮಿಗಳ ಜನ್ಮಭೂಮಿಯಾದ ರೋಣ ತಾಲೂಕಿನ ಸುಕ್ಷೇತ್ರ ಯಾ.ಸ.ಹಡಗಲಿ ಗ್ರಾಮದಿಂದ ಗ್ರಂಥ ಮತ್ತು ಜ್ಯೋತಿಯಾತ್ರೆವು ಜಗದ್ಗುರು ಸದಾಶಿವಾನಂದ ಶ್ರೀಗಳ ನೇತೃತ್ವದಲ್ಲಿ ಸುರಕೋಡ, ನರಗುಂದ, ಚಿಕ್ಕನರಗುಂದ ಬೆನಕನಕೊಪ್ಪ, ಗ್ರಾಮಗಳ ಮುಖಾಂತರ ಸಂಕದಾಳ ಗ್ರಾಮಕ್ಕೆ ಆಗಮಿಸಿದ ಗ್ರಂಥ ಮೆರವಣಿಗೆ ಮತ್ತು ಜ್ಯೋತಿಯಾತ್ರೆಯನ್ನು ಶ್ರೀಗಳು ಮತ್ತು ಭಕ್ತರು ಬರಮಾಡಿಕೊಂಡರು.