ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.62 ಮತದಾನ

KannadaprabhaNewsNetwork |  
Published : May 08, 2024, 01:03 AM IST
07ಕೆಪಿಆರ್‌ಸಿಆರ್ 01: | Kannada Prabha

ಸಾರಾಂಶ

ಎಂಟು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ. ಮತದಾನ ಪ್ರಕ್ರಿಯೆ ಬಳಿಕ ಗೆಲುವಿನ ಲೆಕ್ಕಾಚಾರ ಆರಂಭ, ರಾಯಚೂರು ಜಿಲ್ಲೆಯ 5 ಹಾಗೂ ಯಾದಗಿರಿ ಜಿಲ್ಲೆಯ 3 ಕ್ಷೇತ್ರಗಳ ಒಟ್ಟು 2203 ಮತಗಟ್ಟೆಗಳಲ್ಲಿ ಮಂಗಳವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಂದಾಜು ಶೇ.62 ರಷ್ಟು ಮತದಾನವು ದಾಖಲಾಗಿದ್ದು, ಅಂತಿಮವಾದ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆಗಳಿವೆ.

ಕನ್ನಡಪ್ರಭ ವಾರ್ತೆ ರಾಯಚೂರು

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಕ್ಷೇತ್ರದಲ್ಲಿ ಮಂಗಳವಾರ ಬಹುತೇಕ ಶಾಂತಿಯುತವಾಗಿ ನಡೆದ ಮತದಾನದಲ್ಲಿ ಕಣದಲ್ಲಿದ್ದ ಎಂಟು ಅಭ್ಯರ್ಥಿಗಳ ಭವಿಷ್ಯದ ಮೇಲೆ ಮತದಾರರು ಮುದ್ರೆಯನ್ನೊತ್ತಿದ್ದು, ಇದೀಗ ಮತಯಂತ್ರದಲ್ಲಿ ಅವರ ರಾಜಕೀಯ ಭವಿಷ್ಯವು ಭದ್ರಗೊಂಡಿದೆ.

ರಾಯಚೂರು ಜಿಲ್ಲೆಯ 5 ಹಾಗೂ ಯಾದಗಿರಿ ಜಿಲ್ಲೆಯ 3 ಕ್ಷೇತ್ರಗಳ ಒಟ್ಟು 2203 ಮತಗಟ್ಟೆಗಳಲ್ಲಿ ಮಂಗಳವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಂದಾಜು ಶೇ.62 ರಷ್ಟು ಮತದಾನವು ದಾಖಲಾಗಿದ್ದು, ಅಂತಿಮವಾದ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆಗಳಿವೆ.

ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನವು 9 ರ ವೇಳೆಗೆ ಶೇ.8.83 ರಷ್ಟು ಮತದಾನವಾಗಿದೆ. ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.9.25, ರಾಯಚೂರು ನಗರ ಪ್ರದೇಶದಲ್ಲಿ ಶೇ.9.63, ಮಾನವಿಯಲ್ಲಿ ಶೇ.7.72, ದೇವದುರ್ಗ ಶೇ.6.68, ಲಿಂಗಸುಗೂರು 7.06, ಶೋರಾಪುರ ಶೇ.9.64, ಶಹಾಪುರ ಶೇ.8.84 ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.7.30ರಷ್ಟು ಶೇಕಡವಾರು ಮತದಾನವಾಗಿದೆ.

ಸಂಜೆ 5 ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.65.21, ರಾಯಚೂರು ನಗರ ಪ್ರದೇಶದಲ್ಲಿ ಶೇ.54.53, ಮಾನ್ವಿಯಲ್ಲಿ ಶೇ.58.28, ದೇವದುರ್ಗ ಶೇ.58.38, ಲಿಂಗಸುಗೂರು ಶೇ.57.98, ಶೋರಾಪುರ ಶೇ.66.72, ಶಹಾಪುರ ಶೇ.57.68 ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.56.31ರಷ್ಟು ಶೇಕಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.58.9 ರಷ್ಟು ಮತದಾನವಾಗಿದೆ.

ಮತದಾನ ಮುಕ್ತಾಯವಾದ ವೇಳೆಗೆ ಅಂದಾಜು ಶೇ.62 ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.67.71, ರಾಯಚೂರು ನಗರ ಪ್ರದೇಶದಲ್ಲಿ ಶೇ.57.37, ಮಾನವಿಯಲ್ಲಿ ಶೇ.61.31, ದೇವದುರ್ಗ ಶೇ.60.44, ಲಿಂಗಸುಗೂರು ಶೇ.59.9, ಶೋರಾಪುರ ಶೇ.69.61, ಶಹಾಪುರ ಶೇ.60.13 ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.58.79ರಷ್ಟು ಶೇಕಡವಾರು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಿಂದ ಮತಯಂತ್ರಗಳನ್ನು ತಂದ ಸಿಬ್ಬಂದಿ ಸ್ಟ್ರಾಂಗ್‌ ರೂಮ್‌ನಲ್ಲಿರಿಸಿದರು. ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಮುಖ ಹಂತವಾಗಿರುವ ಮತದಾನ ಪ್ರಕ್ರಿಯೇ ಮುಗಿಯುತ್ತಿದ್ದಂತೆ ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದ್ದು, ಬರುವ ಜೂ.4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯವು ಅಂದು ಪ್ರಕಟಗೊಳ್ಳಲಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ