ಹೊಸಮಜಲುವಿನಲ್ಲಿ SJM ಉಪ್ಪಿನಂಗಡಿ ರೇಂಜ್ ಕಾನ್ಫರೆನ್ಸ್

KannadaprabhaNewsNetwork |  
Published : Jun 18, 2026, 01:45 AM IST
ಉಪ್ಪಿನಂಗಡಿ | Kannada Prabha

ಸಾರಾಂಶ

ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (SJM) ಉಪ್ಪಿನಂಗಡಿ ರೇಂಜ್ 140ರ ವತಿಯಿಂದ ಬುಧವಾರ ಹೊಸಮಜಲುವಿನ ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ರೇಂಜ್ ಕಾನ್ಫರೆನ್ಸ್ ನಡೆಯಿತು.

ಉಪ್ಪಿನಂಗಡಿ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (SJM) ಉಪ್ಪಿನಂಗಡಿ ರೇಂಜ್ 140ರ ವತಿಯಿಂದ ಬುಧವಾರ ಹೊಸಮಜಲುವಿನ ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ರೇಂಜ್ ಕಾನ್ಫರೆನ್ಸ್ ನಡೆಯಿತು.ಕಾರ್ಯಕ್ರಮಕ್ಕೆ SJM ಉಪ್ಪಿನಂಗಡಿ ರೇಂಜ್ ಅಧ್ಯಕ್ಷ D.H. ಇಬ್ರಾಹಿಂ ಸಅದಿ ನೆಕ್ಕಿಲಾಡಿ ಅಧ್ಯಕ್ಷತೆ ವಹಿಸಿದರು. ಸತ್ತಾರ್ ಹಿಶಾಮಿ ಉಸ್ತಾದ್ ಖಿರಾಅತ್ ನೆರವೇರಿಸಿದರು. ಹೊಸಮಜಲು ಖತೀಬರಾದ ಮುಹಮ್ಮದ್ ಶಂಸೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಫಿರೋಝ್ ಸಅದಿ ಸ್ವಾಗತ ಭಾಷಣ ಮಾಡಿದರು. ಬಳಿಕ ಮುಹಮ್ಮದ್ ರಫೀಖ್ ಅಹ್ಸನಿ ನೆಕ್ಕಿಲಾಡಿ ಅವರು 6ನೇ ತರಗತಿಯ ತಝ್ಕಿಯಾ ಪಾಠ-5 ಕುರಿತ ಮಾದರಿ ತರಗತಿ ನಡೆಸಿಕೊಟ್ಟರು. ಇಸ್ಮಾಯಿಲ್ ಸಅದಿ ನೆಲ್ಯಾಡಿ ಅವರು 8ನೇ ತರಗತಿ ತಝ್ಕಿಯಾ ಪಾಠ-4 ಕುರಿತು ಪಾಠ ಕಿತಾಬ್ ಚರ್ಚೆ ನಡೆಸಿದರು.9ನೇ ತರಗತಿ ದುರೂಸ್ 1, 2 ಹಾಗೂ 3 ಪಾಠಗಳನ್ನು ಆಧರಿಸಿ ಕ್ವಿಝ್ ಸ್ಪರ್ಧೆಯನ್ನು ಶರೀಫ್ ಸಅದಿ ನೆಕ್ಕಿಲಾಡಿ ನಡೆಸಿಕೊಟ್ಟರು.ಮುಹಮ್ಮದ್, M.K. ಇಬ್ರಾಹಿಂ ಹಾಗೂ ಇಬ್ರಾಹಿಂ ಖಲೀಲ್ ಉಸ್ತಾದ್ ಆಶಂಸ ಭಾಷಣ ಮಾಡಿದರು. ಅಬ್ದುಲ್ ಲತೀಫ್ ಸಖಾಫಿ ಕರ್ವೇಲ್ ಅವರು “ಹೊಸ ವರ್ಷ – ಹೊಸ ಹರುಷ” ವಿಷಯದ ಕುರಿತು ಪ್ರಬಂಧ ಮಂಡಿಸಿದರು.ಮುಹಮ್ಮದ್ ರಾಶೀದ್ ಮದನಿ ನೆಲ್ಯಾಡಿ ನ್ಯೂಸ್ ರೀಡಿಂಗ್ ನಡೆಸಿದರೆ, ಅನ್ಸಿಫ್ ಸಅದಿ ಮೊರಂಕಳ ಆಲಾಪಣೆ ನಡೆಸಿದರು. ಕೊನೆಯಲ್ಲಿ ಅಬ್ದುಲ್ ಜಬ್ಬಾರ್ ಝೈನಿ ಕರ್ವೇಲು ಧನ್ಯವಾದ ಅರ್ಪಿಸಿದರು.ರೇಂಜ್ ವ್ಯಾಪ್ತಿಯ ಮುಅಲ್ಲಿಮರು ಮತ್ತು ಸಂಬಂಧಿತ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಉಸ್ತಾದರಿಗಾಗಿ ಬಗೆಬಗೆಯ ಸಿಹಿ ತಿಂಡಿಗಳು, ಬೆಳಗಿನ ಉಪಹಾರ ಹಾಗೂ ಪಾನೀಯಗಳ ವ್ಯವಸ್ಥೆ ಹೊಸಮಜಲು ಊರಿನವರು ಮಾದಿದರು. ಜೊತೆಗೆ ಹೊಸಮಜಲು SBS ವತಿಯಿಂದ ಆಗಮಿಸಿದ ಎಲ್ಲ ಉಸ್ತಾದರಿಗೆ ಸ್ಮರಣಿಕೆಯಾಗಿ ಗಿಫ್ಟ್‌ಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಹೊಸಮಜಲು ಆಡಳಿತ ತಂಡವು ಸಂಪೂರ್ಣ ಸಹಕಾರ ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು