ನೆಲಮಂಗಲ: ರೋಟರಿ ಸಂಸ್ಥೆ ಸದಾ ಮಹಿಳೆಯರನ್ನು ಸ್ವಾವಲಂಬಿ, ಆರ್ಥಿಕ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಗ್ರಾಮೀಣ ಮಹಿಳೆಯರ ಜೀವನ ಮಟ್ಟ ಸುಧಾರಣೆಗಾಗಿ ಸ್ವ ಉದ್ಯೋಗ ತರಬೇತಿ ನೀಡುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯಲ್ಲಿ ವಿವಿಧ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಟೈಲರಿಂಗ್, ಬ್ಯೂಟಿ ಪಾರ್ಲರ್, ಕ್ರೋಷಾ, ಕುಚ್ಚು ಹಾಕುವ ತರಬೇತಿ, ಪ್ರಮಾಣ ಪತ್ರ ಹಾಗೂ ಹೊಲಿಗೆ ಯಂತ್ರ ವಿತರಣೆ, ವಿವಿಧ ಕಿಟ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದೇಶ ಅಭಿವೃದ್ಧಿಗೆ ಮಹಿಳೆಯರು ಆರ್ಥಿಕ ಸಬಲೀಕರಣ ಸಬಲರಾಗಬೇಕಿದೆ. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯ. ಈ ಹಿಂದೆ ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದ ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳ ಸಹಕಾರದಲ್ಲಿ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸೇರಿದಂತೆ ಕೌಶಲವೃತ್ತಿಗಳ ತರಬೇತಿ ನೀಡಲಾಗುತ್ತಿದೆ ಎಂದರು.
ರೋಟರಿ ಅದ್ಯಕ್ಷ ಜಿ.ಆರ್.ನಾಗರಾಜು ಮಾತನಾಡಿ, ಸ್ವಉದ್ಯೋಗ ಮಹಿಳೆಯರ ಆರ್ಥಿಕ ಮಟ್ಟವನ್ನು ಸುಧಾರಿಸುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಿ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ರೋಟರಿಯಿಂದ ಹೊಲಿಗೆ ತರಬೇತಿ, ಬ್ಯೂಟಿಪಾರ್ಲರ್ ಕಲಿತ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.ಇದೇ ವೇಳೆ ತರಬೇತಿ ಪಡೆದ 46 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು. ಬ್ಯೂಟಿ ಪಾರ್ಲರ್, ಕ್ರೋಷಾ, ಕುಚ್ಚು ಹಾಕುವ ತರಬೇತಿ ಪಡೆದ ಮಹಿಳೆಯರಿಗೆ ಕಿಟ್ ವಿತರಣೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ರೊ.ಎಂ.ಜಗದೀಶ್. ರೊ.ಉಮೇಶ್. ನಿರ್ದೇಶಕ ಗಣೇಶ್ ಬಾಲಕೃಷ್ಣನ್, ರೊ.ಮಂಜುನಾಥ್ ಪಾಟೀಲ್, ನೆಲಮಂಗಲ ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಎನ್. ಹರೀಶ್ ಕುಮಾರ್ ಮಾಜಿ ಅಧ್ಯಕ್ಷರಾದ ಟಿ.ನಾಗರಾಜು ನವೀನ್ ಕುಮಾರ್, ಹೆಚ್. ಜಿ.ರಾಜು, ವಿ.ಆರ್.ಸ್ವಾಮಿ, ಎನ್. ಜಿ.ನಾಗರಾಜು, ಲೋಕೇಶ್, ಖಜಾಂಚಿ ಎಸ್.ಗಂಗರಾಜು, ಕಾರ್ಯದರ್ಶಿ ಆರ್. ರವಿಕುಮಾರ್, ನಿರ್ದೇಶಕರಾದ ಆರ್.ನಾಗರಾಜು, ಶಿವಶಂಕರ್ ಪ್ರಸಾದ್, ಸಿ.ಸೋಮಶೇಖರ್, ಶಿವರಾಂ ಗಂಗೇಗೌಡ, ಗಂಗಾಧರಯ್ಯ, ಇನ್ನರ್ ವೀಲ್ ಅಧ್ಯಕ್ಷೆ ಪೂರ್ಣಿಮಾ, ಶ್ರೀವಿದ್ಯಾ ಸರಸ್ವತಿ ಟ್ರಸ್ಟ್ ಅಧ್ಯಕ್ಷ ಚಿಕ್ಕ ಬುಡ್ಡೇಗೌಡ ಮತ್ತು ಎಸ್ ಆರ್. ನಾಗರಾಜು ಹಾಜರಿದ್ದರು.ಪೊಟೊ-15ಕೆಎನ್‌ಎಲ್‌ಎಮ್1-
ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿಯಲ್ಲಿ ವಿವಿಧ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೌಶಲ್ಯ ತರಬೇತಿ, ಪ್ರಮಾಣ ಪತ್ರ ಹಾಗೂ ಹೊಲಿಗೆ ಯಂತ್ರ ವಿತರಣೆ, ವಿವಿಧ ಕಿಟ್‌ಗಳನ್ನು ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್ ವಿತಸಿದರು.