ಹಳಿಯಾಳ: ವಿದ್ಯಾಥಿಗಳು ವಿದ್ಯೆಯ ಜೊತೆಯಲ್ಲಿ ಕೌಶಲ್ಯ ಅರಿಯಬೇಕು. ಜತೆಗೆ ಉತ್ತಮ ಚಾರಿತ್ರ್ಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು, ಸದ್ವಿಚಾರಗಳನ್ನು ತಿಳಿಯುವಂತಹ ಜ್ಞಾನವನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ ಎಂದು ಯಲ್ಲಾಪುರದ ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ದತ್ತಾತ್ರೇಯ ಗಾಂವ್ಕರ ಹೇಳಿದರು.
ಈ ಜೀವ ಪ್ರಪಂಚದಲ್ಲಿ ಅತ್ಯಂತ ಒತ್ತಡದ ಜೀವನವನ್ನು ಮಾನವ ಬಾಳುತ್ತಿದ್ದು, ಯಾವ ಪ್ರಾಣಿಗಳಿಗೂ ಇರದ ಒತ್ತಡಗಳು ಇಂದು ಮಾನವನಿಗಿವೆ. ಆದುದರಿಂದ ಇತರ ಪ್ರಾಣಿಗಳಿಗಿರದ ಕಲಿಕೆಯು ಮಾನವನಿಗೆ ಅವಶ್ಯಕವಾಗಿದೆ. ಉದ್ಯೋಗಕ್ಕಾಗಿ ಬದುಕಿಗಾಗಿ ಅನ್ನಕ್ಕಾಗಿ ಶಿಕ್ಷಣ ಅವಶ್ಯಕ ಹಾಗೆಯೇ ಆನಂದಮಯ ಬದುಕಿಗಾಗಿ ಒಳ್ಳೆಯ ಹವ್ಯಾಸಗಳು ರೂಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ, ವಿದ್ಯಾರ್ಜನೆ ಮಾಡುವ ಕಾಲೇಜಿಗೆ ಹಾಗೂ ಸಮಾಜಕ್ಕೆ ವಿಧೇಯರಾಗಿ ಬಾಳುವ ಮೂಲಕ ಉಜ್ವಲ ಭಾರತದ ಭವಿಷ್ಯಕ್ಕೆ ಸಾಕ್ಷಿಯಾಗಬೇಕು ಎಂದರು.ಸನ್ಮಾನ:
ಶೈಕ್ಷಣಿಕ ಸಂಯೋಜಕಿ ದೀಪಾ ನಾಯ್ಕ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ನಮೃತಾ ಗುರವ, ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಸಂಗೀತಾ ಪ್ರಭು, ಕ್ರೀಡಾ ನಿರ್ದೇಶಕ ಮಲ್ಲಿಕಾರ್ಜುನ ಕಾಜಗಾರ, ಎನ್.ಎಸ್.ಎಸ್ ಅಧಿಕಾರಿ ಶಾಂತಾರಾಮ ಚಿಬುಲಕರ, ಉಪನ್ಯಾಸಕರುಗಳಾದ ಮಿನಾಜ ಶೇಖ್, ಮಾಧವ ಸುರತ್ಕರ, ಮೆಹ್ತಾಬ್ ಶೇಖ್, ಪ್ರಗತಿ ಲಕ್ಕುಂಡಿ, ಹನುಮಂತಿ ಪವಾರ, ಅನುಷಾ ನಾಯ್ಕವಾಡ, ಸಿಬ್ಬಂದಿ ನಾಗೇಂದ್ರ ಖಂಡೇಕರ, ಅಕ್ಷತಾ ಹುಲಿಕೇರಿ, ಲೀಲಾ ಅಂಬಿಗ, ಶೀತಲ ತೋರಸ್ಕರ ಇದ್ದರು.