ಮಾಜಿ ಶಾಸಕರ ವಿರುದ್ಧ ಅಪಪ್ರಚಾರ ಸಲ್ಲದು: ಪ್ರತಾಪ್ ಗರಗದಹಳ್ಳಿ

KannadaprabhaNewsNetwork |  
Published : Jul 27, 2025, 12:00 AM IST
ಮಾಜಿ ಶಾಸಕ ಡಿ.ಎಸ್.ಸುರೇಶ್ ವಿರುದ್ದ ಅಪಪ್ರಚಾರ ಕೂಡದುಃ ಪ್ರತಾಪ್ ಗರಗದಹಳ್ಳಿ | Kannada Prabha

ಸಾರಾಂಶ

ತರೀಕೆರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಾಜಿ ಶಾಸಕ ಡಿ.ಎಸ್.ಸುರೇಶ್ ವಿರುದ್ಧ ಅಪಪ್ರಚಾರ ಕೂಡದು ಎಂದು ತಾಲೂಕು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ ಹೇಳಿದ್ದಾರೆ.

ಮಾಜಿ ಶಾಸಕ ಡಿ.ಎಸ್.ಸುರೇಶ್ ನಿವಾಸ ಆವರಣದಲ್ಲಿ ನೊಳಂಬ ಸಮಾಜದ ಮುಖಂಡರೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಾಜಿ ಶಾಸಕ ಡಿ.ಎಸ್.ಸುರೇಶ್ ವಿರುದ್ಧ ಅಪಪ್ರಚಾರ ಕೂಡದು ಎಂದು ತಾಲೂಕು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ ಹೇಳಿದ್ದಾರೆ.ಶುಕ್ರವಾರ ಮಾಜಿ ಶಾಸಕ ಡಿ.ಎಸ್.ಸುರೇಶ್ ನಿವಾಸ ಆವರಣದಲ್ಲಿ ನಡೆದ ನೊಳಂಬ ಸಮಾಜದ ಮುಖಂಡರು, ಪದಾಧಿಕಾರಿಗಳು ಮತ್ತು ಸದಸ್ಯರ ಸಭೆಯಲ್ಲಿ ಮಾತನಾಡಿ, ನೊಳಂಬ ಸಮಾಜದ ಮುಖಂಡ ರವಿ ಶಾನುಬೋಗ್ ಅವರು ಮಾಜಿ ಶಾಸಕ ಡಿ.ಎಸ್.ಸುರೇಶ್ ನಿವಾಸದ ಮುಂದೆ ಕೈಗೊಳ್ಳಬೇಕೆಂದಿದ್ದ ಧರಣಿ ಉದ್ದೇಶವನ್ನೇ ಸ್ಪಷ್ಟ ಪಡಿಸಿಲ್ಲ. ಕಳೆದ ತಿಂಗಳು ಅಜ್ಜಂಪುರದಲ್ಲಿ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯತ ಸಮಾಜದ ಜಿಲ್ಲೆಯ ಪ್ರತಿಭಾನ್ವಿತ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಯಾವ ಮಾತುಗಳನ್ನುಆಡಿದರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ, ಯಾರನ್ನೋ ಓಲೈಸುವ ಇಂತಹ ಕಾರ್ಯಗಳಿಗೆ ಸಮಾಜವನ್ನು ಬಳಸಿಕೊಳ್ಳುವುದು ಸರಿಯಲ್ಲ. ಟೀಕೆ ಟಿಪ್ಪಣಿಗಳು ಸಹಜ, ಪ್ರಚಾರದ ಗೀಳಿಗಾಗಿ ಈ ತರಹದ ಕಾರ್ಯ ಸರಿಯಲ್ಲ. ಮಾಜಿ ಶಾಸಕ ಡಿ.ಎಸ್.ಸುರೇಶ್ ನಿವಾಸದ ಮುಂದೆ ಧರಣಿ ಅಥವಾ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.ನೊಳಂಬ ಸಮಾಜದ ಯುವಕ ಸಂಘದ ಅಧ್ಯಕ್ಷ ಗೆಜ್ಜೆಗೊಂಡನಹಳ್ಳಿ ಭೋಜರಾಜ್ ಮಾತನಾಡಿ ಅಜ್ಜಂಪುರದಲ್ಲಿ ನಡೆದ ಸಮಾರಂಭದಲ್ಲಿ ಸಮಾಜದ ಬಂಧುಗಳು ಭಾಗವಹಿಸಿದ್ದರು. ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹತ್ತು ವರ್ಷದಿಂದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಿಕೊಂಡು ಬರುತ್ತಿದ್ದಾರೆ. ಮಾಜಿ ಶಾಸಕ ಡಿ.ಎಸ್.ಸುರೇಶ್ ಈ ಸಭೆಯಲ್ಲಿ ಮಾತನಾಡಿದ್ದು ಇದು ಬಹಳ ಒಳ್ಳೆಯ ಕಾರ್ಯಕ್ರಮ, ಸಮಾಜದ ಜೊತೆಗೆ ಯಾವಾಗಲು ನಾನು ಇರುತ್ತೇನೆ ಎಂದಷ್ಟೆ. ಅವರು ತಪ್ಪು ಮಾತನಾಡಿದ್ದರೆ ಅದನ್ನು ಸಮಾಜದ ಮುಖಂಡರ ಜೊತೆ ಮಾತನಾಡಬೇಕಿತ್ತು. ಇದರ ಬದಲಾಗಿ ಪತ್ರಿಕಾ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.ಮುಖಂಡರಾದ ಎಸ್.ಎನ್.ಲೋಹಿತ್ ಮಾತನಾಡಿದರು.

25ಕೆಟಿಆರ್.ಕೆ.04ಃ

ತರೀಕೆರೆಯಲ್ಲಿ ನಡೆದ ಸಭೆಯಲ್ಲಿ ನೊಳಂಬ ಸಮಾಜದ ಯುವಕ ಸಂಘದ ಅಧ್ಯಕ್ಷ ಗೆಜ್ಜೆಗೊಂಡನಹಳ್ಳಿ ಬೋಜರಾಜ್ ಮಾತನಾಡಿದರು. ತಾ. ಬಿಜೆಪಿಅಧ್ಯಕ್ಷ ಪ್ರತಾಪ್ ಗರಗದಹಳ್ಳಿ ಮತ್ತಿತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್