ಸ್ಲೇಟು ಬಳಪ ಫೌಂಡೇಶನ್ ನಿಂದ ಸರ್ಕಾರಿ ಶಾಲೆಗೆ 10 ಡೆಸ್ಕ್ ವಿತರಣೆ

KannadaprabhaNewsNetwork |  
Published : Sep 13, 2025, 02:04 AM IST
12ಕೆಎಂಎನ್ ಡಿ27 | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಹಳುವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಲೇಟು ಬಳಪ ಫೌಂಡೇಶನ್ ವತಿಯಿಂದ 10 ಡೆಸ್ಕ್ ಗಳನ್ನು ವಿತರಿಸಿ, ಪ್ರತಿಯೊಬ್ಬ ಉಳ್ಳವರು ತಮ್ಮೂರಿನ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸೇವೆ ಮಾಡಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಲೇಟು ಬಳಪ ಫೌಂಡೇಶನ್ ವತಿಯಿಂದ ತಾಲೂಕಿನ ಹಳುವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 10 ಡೆಸ್ಕ್ ಗಳನ್ನು ವಿತರಿಸಲಾಯಿತು.

ಸಂಸ್ಥೆ ಮಾಲೀಕರಾದ ಭಾರ್ಗವಿ ಹೇಮಂತ್ ಅವರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಸರ್ಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಡೆಸ್ಕ್ ಗಳನ್ನು ವಿತರಿಸಿದರು. ಪ್ರತಿಯೊಬ್ಬ ಉಳ್ಳವರು ತಮ್ಮೂರಿನ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸೇವೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕಮಲಮ್ಮ ಮೈಕ್ ಅನ್ನು ಕೊಡುಗೆಯಾಗಿ ನೀಡಿದ್ದರು. ಅಲ್ಲದೆ ಗ್ರಾಮ ಪಂಚಾಯ್ತಿ ವತಿಯಿಂದ ಬ್ಯಾಂಡ್ ಸೆಟ್ ಅನ್ನು ನೀಡಿದ್ದರು.

ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಕೆ.ಮಂಜುನಾಥ್ , ಮಾಜಿ ಅಧ್ಯಕ್ಷ ಎಚ್.ಎಂ.ಸಿದ್ದರಾಜು, ಮುಖಂಡರಾದ ಮಂಚೇಗೌಡ, ವೆಂಕಟೇಶ್, ನಿತೀನ್ ಸೇರಿದಂತೆ ಶಾಲಾ ಎಸ್ ಡಿಎಂಸಿ ಪದಾಧಿಕಾರಿಗಳು , ಶಿಕ್ಷಕರು, ಗ್ರಾಮದ ಮಹಿಳೆಯರು, ಮಕ್ಕಳು ಇದ್ದರು.

ಬಾಲಕರ ಟೇಬಲ್ ಟೆನಿಸ್: ರಾಜ್ಯಮಟ್ಟಕ್ಕೆ ಆಯ್ಕೆ

ಮಂಡ್ಯ: ಜಿಲ್ಲಾ ಮಟ್ಟದ 17 ವರ್ಷದೊಳಗಿನ ಬಾಲಕರ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಎಂ.ಚಂದನ್ ಅವರಿಗೆ ಮುಖ್ಯ ಶಿಕ್ಷಕ ಎಚ್‌.ಎನ್‌.ದೇವರಾಜು, ಶಿಕ್ಷಕ ಸಿ.ಎಂ.ಮಹೇಶ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು-ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.ಹಲ್ಲೆಗೆರೆ ಗ್ರಾಮದಲ್ಲಿ ಅದ್ಧೂರಿ ಗಣೇಶ ವಿಸರ್ಜನಾ ಮಹೋತ್ಸವ

ಮಂಡ್ಯ:

ತಾಲೂಕು ಹಲ್ಲೆಗೆರೆ ಗ್ರಾಮದ ಶ್ರೀವಿನಾಯಕ ಗೆಳೆಯರ ಬಳಗ, ಶ್ರೀವಿಶ್ವೇಶ್ವರಯ್ಯ ಯುವಕರು ಸಂಘ, ಶ್ರೀ ಮಾರುತಿ ಗೆಳೆಯರ ಬಳಗದ ವತಿಯಿಂದ ಅದ್ಧೂರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಿತು.

ಉದ್ಯಮಿ, ಎಂ.ಎಂ.ಫೌಂಡೇಶನ್ ಅಧ್ಯಕ್ಷರಾದ ಮಹಾಲಿಂಗೇಗೌಡ ಮುದ್ದನಘಟ್ಟ ಪಾಲ್ಗೊಂಡು ಮಾತನಾಡಿ, ಗ್ರಾಮದಲ್ಲಿ ಶಾಂತಿ ಸಮಾನತೆ, ಸೌಹಾರ್ದತೆಗೆ ಇಂತಹ ಹಬ್ಬಗಳು ನಡೆಯಬೇಕು ಎಂದರು.

ದೇಶ ಆಳುವ ರಾಜಕಾರಣಿ, ದೇಶ ಕಾಯುವ ಸೈನಿಕ, ಮಾದರಿ ರೈತ, ಉತ್ತಮ ಡಾಕ್ಟರ್ಸ, ಎಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿ ದೊಡ್ಡ ವ್ಯಕ್ತಿಗಳು ಹುಟ್ಟಿ ಬರಲಿ. ಈ ಹೋಬಳಿ ತಾಲೂಕು, ಜಿಲ್ಲೆ ರಾಜ್ಯದಲ್ಲಿ ದೇಶದಲ್ಲೇ ಕೀರ್ತಿ ತರಲಿ ಎಂದು ಹಾರೈಸಿದರು.

ಇದೇ ವೇಳೆ ಮಹಾಲಿಂಗೇಗೌಡರು ಯುವಕರ ಜೊತೆ ನೃತ್ಯ ಮಾಡಿ ಗಮನ ಸೆಳೆದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಯುವಕ ಸಂಘದ ಮಿತ್ರರಾದ ರಾಜು, ಬೋರೇಗೌಡ ಮೋಹನ್, ವಿನಯ್, ಗ್ರಾಪಂ ಸದಸ್ಯೆ ಮಣಿ ಮುಂತಾದವರು ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ