ಕನ್ನಡಪ್ರಭವಾರ್ತೆ, ಹೊಳೆನರಸೀಪುರ
ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯಲ್ಲಿ ಇರುವ ಅಕ್ರಮ ಕಸಾಯಿಖಾನೆಯಲ್ಲಿ ಉಳಿಯುವ ಗೋಮಾಂಸ, ಮೂಳೆಗಳು ಮತ್ತು ಸತ್ತ ಜಾನುವಾರುಗಳ ಕಳೇಬರಗಳನ್ನು ಮೂಟೆಗಳಲ್ಲಿ ಕಟ್ಟಿ ರಾತ್ರೋರಾತ್ರಿ ಹೇಮಾವತಿ ನದಿಗೆ ಅಡ್ಡವಾಗಿ ಕಟ್ಟಿರುವ ತಡೆಗೋಡೆ ಮೇಲಿಂದ ಹಾಗೂ ನದಿಯ ದಂಡೆಗಳಲ್ಲಿ ಎಸೆಯಲಾಗುತ್ತಿದೆ.
ನಗರ ಪೊಲೀಸ್ ಠಾಣೆಯಿಂದ ಕೇವಲ ೪೦೦ ಮೀಟರ್ ದೂರದ ಅಕ್ರಮ ಕಸಾಯಿಖಾನೆಯಲ್ಲಿ ಗೋಹತ್ಯೆ ನಡೆಯುತ್ತಲೇ ಇದೆ. ೨ ವರ್ಷಗಳ ಹಿಂದೆ ಒಂದೆರಡು ಸಲ ದಾಳಿ ನಡೆಸಿದ್ದು ಬಿಟ್ಟರೆ ತಡೆಗೆ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಹೇಮಾವತಿ ನದಿಯ ನೀರು ಹಾಸನ ಜಿಲ್ಲೆ ಮಾತ್ರವಲ್ಲದೆ ಮಂಡ್ಯ, ಮೈಸೂರು ಭಾಗದ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ಕಳೇಬರಗಳು ಕೊಳೆತು ದುರ್ನಾತ ಬೀರುತ್ತಿರುವುದು ಹಾಗೂ ನೀರು ಕಲುಷಿತಗೊಳ್ಳುತ್ತಿರುವುದು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟುಹಾಕಿದೆ.ಹೇಮಾವತಿ ನದಿಯ ಪಾವಿತ್ರ್ಯ, ಪರಿಸರ ಸಂರಕ್ಷಣೆ ಹಾಗೂ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿರುವ ಕೃತ್ಯದ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯವಿದೆ. ಜತೆಗೆ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಹಾಗೂ ಹಿಂದೂಪರ ಸಂಘಟನೆಗಳು