ಗುಣಮಟ್ಟದ ಶಿಕ್ಷಣದಿಂದ ಗುಲಾಮಗಿರಿ ಮೆಟ್ಟಿ ನಿಲ್ಲಲು ಸಾಧ್ಯ: ತಮ್ಮಯ್ಯ

KannadaprabhaNewsNetwork |  
Published : Apr 15, 2024, 01:15 AM IST
ಚಿಕ್ಕಮಗಳೂರಿನ ನಿರಂತರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಡಾ. ಬಿ.ಆರ್.ಅಂಬೇಡ್ಕರ್, ಜಗಜೀವನರಾಮ್ ಜಯಂತಿ ಹಾಗೂ ಚುನಾವಣಾ ವಾರ್ ರೂಂನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ಡಾ. ಅಂಶುಮಂತ್‌, ಡಾ. ವಿಜಯಕುಮಾರ್‌, ಶಿವಾನಂದಸ್ವಾಮಿ, ಮಂಜೇಗೌಡ ಇದ್ದರು. | Kannada Prabha

ಸಾರಾಂಶ

ಮಕ್ಕಳಿಗೆ ಮತ, ಧರ್ಮ ಬೋಧಿಸಿದರೆ ಮೂಢನಂಬಿಕೆ ದಾಸರಾಗುವರು. ಗುಣಮಟ್ಟದ ಶಿಕ್ಷಣ ಬೋಧಿಸಿದರೆ ಗುಲಾಮಗಿರಿಯನ್ನು ಮೆಟ್ಟಿ ನಿಂತು ಶಾರೀರಿಕವಾಗಿ ಗಟ್ಟಿಯಾಗುವರು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ- ಚುನಾವಣಾ ವಾರ್‌ ರೂಂ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಕ್ಕಳಿಗೆ ಮತ, ಧರ್ಮ ಬೋಧಿಸಿದರೆ ಮೂಢನಂಬಿಕೆ ದಾಸರಾಗುವರು. ಗುಣಮಟ್ಟದ ಶಿಕ್ಷಣ ಬೋಧಿಸಿದರೆ ಗುಲಾಮಗಿರಿಯನ್ನು ಮೆಟ್ಟಿ ನಿಂತು ಶಾರೀರಿಕವಾಗಿ ಗಟ್ಟಿಯಾಗುವರು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಸಮೀಪದ ನಿರಂತರ ಸಮುದಾಯ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್, ಜಗಜೀವನರಾಮ್ ಜಯಂತಿ ಹಾಗೂ ಚುನಾವಣಾ ವಾರ್ ರೂಂನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ವ ಸಮಾನತೆ ಆಧಾರದಲ್ಲಿ ರಚಿಸಿದ ಸಂವಿಧಾನ ಇಡೀ ಪ್ರಪಂಚವೇ ಮೆಚ್ಚುವಂತಾಗಿದೆ. ದೇಶದ ಜನಪ್ರತಿನಿಧಿಗಳು ಅಧಿಕಾರ ಪಡೆಯಲು ಹಾಗೂ ಸಾಮಾನ್ಯ ಜನರನ್ನು ಮುಖ್ಯ ವಾಹಿನಿಗೆ ತಂದು ಸ್ವಾಭಿಮಾನದಿಂದ ನೆಲೆಯೂರಲು ಸಾಧ್ಯವಾಗಿದೆ ಎಂದರು.ಬೀದಿದೀಪದಲ್ಲಿ ವಿದ್ಯಾರ್ಜನೆ ನಡೆಸಿದ ಅಂಬೇಡ್ಕರ್ ಉನ್ನತ ಮಟ್ಟಕ್ಕೇರುವ ಮೂಲಕ ಬಡವರು, ಶೋಷಿತರು ಹಾಗೂ ದೀನ ದಲಿತರ ಜೀವನದ ಕತ್ತಲೆ ಬದುಕನ್ನು ಬೆಳಕಿನೆಡೆಗೆ ಕೊಂಡೊಯ್ದುರು. ಸಮಾಜದ ಪ್ರತಿ ಕುಟುಂಬದವರು ಸಂವಿಧಾನ ಕೈಪಿಡಿ ಅಧ್ಯಯನ ನಡೆಸಬೇಕು ಎಂದು ಹೇಳಿದರು.ಕೇಂದ್ರ ಬಿಜೆಪಿ ಸರ್ಕಾರ ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಲ್ಲದೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗಳಿಸಿದರೆ ಸಂವಿಧಾನ ಬದಲಾವಣೆ ಮಾಡುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಮತದಾರರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಯೋಚಿಸಿ ಮತಯಾಚಿಸಬೇಕಿದೆ ಎಂದು ಮನವಿ ಮಾಡಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಸಂವಿಧಾನದ ಹರಿಕಾರ ಹಾಗೂ ಬಡಜನತೆಯ ಆಶಾದೀಪ ಡಾ.ಬಿ.ಆರ್. ಅಂಬೇಡ್ಕರ್‌ರವರ ಆಶಯಗಳಿಗೆ ಬೆಲೆಕೊಡದ ಕೇಂದ್ರ ಸರ್ಕಾರ ದಲಿತರನ್ನು ಮತಬ್ಯಾಂಕ್ ಗಾಗಿ ಬಳಸಿ ಕೊಳ್ಳುತ್ತಿರುವುದು ದುರ್ಧೈವ. ಕಾಂಗ್ರೆಸ್‌ನಲ್ಲಿ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಸರ್ವ ಜನಾಂಗಕ್ಕೂ ಅಧಿಕಾರ ಹಾಗೂ ಸಮರ್ಪಕ ಸೌಲಭ್ಯ ಒದಗಿಸಿದೆ ಎಂದರು.ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಪರವಾಗಿ ಅತಿ ಹೆಚ್ಚು ಕಾರ್ಯಕರ್ತರು ಆಯಾಯ ಬೂತ್‌ಗಳಲ್ಲಿ ಹೆಚ್ಚು ಶ್ರಮವಹಿಸಬೇಕು. ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರ ವಿರುವ ಬೂತ್‌ ಗಳನ್ನು ಗುರುತಿಸಬೇಕು. ಬಳಿಕ ಅತಿಹೆಚ್ಚು ಪ್ರಾಮುಖ್ಯತೆಯನ್ನು ಅಲ್ಲಿಗೆ ನೀಡುವ ಮೂಲಕ ಅಭ್ಯ ರ್ಥಿಗೆ ಗೆಲುವಿಗೆ ಮುಂದಾಗಬೇಕು ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಹುಟ್ಟಿನಿಂದ ಬಡತನ ಹಾಗೂ ಅವಮಾನವನ್ನು ಎದುರಿಸಿ ಕುಗ್ಗದೇ ಸಮಾನತೆಗೆ ಹೋರಾಡಿದವರು ಅಂಬೇಡ್ಕರ್. ಹಲವಾರು ದೇಶಗಳಲ್ಲಿ ಅಧ್ಯಯನ ನಡೆಸಿ ಸೌಹಾರ್ದತೆ, ಸಹಬಾಳ್ವೆ ಜೀವನಕ್ಕೆ ಸಂವಿಧಾನ ರಚಿಸಿ ಹಾಗೂ ಮತದಾನಕ್ಕೆ ಅವಕಾಶ ಕಲ್ಪಿಸಿದವರ ತ್ಯಾಗ ಅಜಾರಾಮರ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ಬಾಲ್ಯದಿಂದಲೇ ಬುದ್ಧಿ ವಂತರಾಗಿದ್ದರು. ಸಮಾಜದಲ್ಲಿನ ಶೋಷಣೆ ಹೋಗಲಾಡಿಸುವ ನಿಟ್ಟಿನಲ್ಲಿ ಭದ್ರ ಬುನಾದಿ ಹಾಕಿ ಕೀಳರಿಮೆ, ಬೇಧ ಭಾವ ತೊಡೆದು ಹಾಕುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ ಯಶಸ್ಸು ಕಂಡವರು ಎಂದು ಹೇಳಿದರು.ವಿದ್ಯಾವಂತ ಯುವಕನಿಗೆ ಉದ್ಯೋಗ ಕಲ್ಪಿಸುವುದು, ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರು. ಸಾಲ ಮನ್ನಾ, ಶ್ರಮಿಕ ನ್ಯಾಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪ್ತಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಪರಿಗಣಿಸುವ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಬಳಿಕ ಕುಟುಂಬದ ಮಾಹಿತಿ ಸಂಗ್ರಹಿಸಿ ಕೆಪಿಸಿಸಿ ಕಳುಹಿಸಿಕೊಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇಶ್‌ಸ್ವಾಮಿ, ದಲಿತರ ಉದ್ದಾರಕ್ಕಾಗಿ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಇಡೀ ಜೀವನ ಮುಡಿಪಾಗಿಟ್ಟವರು ಅಂಬೇಡ್ಕರ್. ದೇಶದ ಜನತೆ ಸ್ವಾಭಿಮಾನ ಹಾಗೂ ಸಮಾಜಮುಖಿಯಾಗಿ ಬದುಕು ರೂಪಿಸಿಕೊಳ್ಳಲು ಸಂವಿಧಾನ ಗ್ರಂಥ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಪಿ.ಮಂಜೇ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹ್ಮದ್ ನಯಾಜ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ನಗರಸಭಾ ಸದಸ್ಯ ಮುನೀರ್ ಅಹ್ಮದ್, ಲಕ್ಷ್ಮಣ್, ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ಮುಖಂಡರಾದ ಎಂ.ಡಿ.ರಮೇಶ್, ಜಯರಾಜ್, ಪ್ರಕಾಶ್ ರೈ ಹಾಜರಿದ್ದರು.

14 ಕೆಸಿಕೆಎಂ 6ಚಿಕ್ಕಮಗಳೂರಿನ ನಿರಂತರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಡಾ. ಬಿ.ಆರ್.ಅಂಬೇಡ್ಕರ್, ಜಗಜೀವನ ರಾಮ್ ಜಯಂತಿ ಹಾಗೂ ಚುನಾವಣಾ ವಾರ್ ರೂಂನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ಡಾ. ಅಂಶುಮಂತ್‌, ಡಾ. ವಿಜಯಕುಮಾರ್‌, ಶಿವಾನಂದಸ್ವಾಮಿ, ಮಂಜೇಗೌಡ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ