ಎಸ್.ಎಂ. ಕೃಷ್ಣ ವ್ಯಕ್ತಿತ್ವ ದೇಶದ ಇತರ ರಾಜಕಾರಣಿಗಳಿಗೆ ಮಾದರಿ: ಎಚ್. ವಿಶ್ವನಾಥ್

KannadaprabhaNewsNetwork |  
Published : Dec 23, 2024, 01:04 AM IST
50 | Kannada Prabha

ಸಾರಾಂಶ

ಯಶಸ್ವಿನಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ಜನರ ಪ್ರಾಣ ಉಳಿಸಿದ ಆ ಮಹಾನುಭಾವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಾನೆತ್ತರಕ್ಕೆ ಕೊಂಡೊಯ್ದು ಚುನಾಯಿತ ಜನಪ್ರತಿನಿಧಿಗಳು ಯಾವ ರೀತಿ ಕೆಲಸ ಮಾಡಬೇಕೆಂಬುದನ್ನು ತೋರಿಸಿದ ಚತುರಮತಿ ರಾಜಕೀಯ ನಾಯಕ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ವ್ಯಕ್ತಿತ್ವ ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಪಟ್ಟಣದ ಕೃಷ್ಣಮಂದಿರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳಾಗಿದ್ದಾದ ಅಕ್ಷರ ಕಲಿಕೆ, ಹಸಿದ ಮಕ್ಕಳಿಗೆ ಅನ್ನ ನೀಡುವುದರ ಜತೆಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಎಸ್.ಎಂ. ಕೃಷ್ಣ ಅವರ ಸರ್ಕಾರದ ಯೋಜನೆಗಳು ಅನುಕರಣೀಯ ಎಂದರು.

ಯಶಸ್ವಿನಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ಜನರ ಪ್ರಾಣ ಉಳಿಸಿದ ಆ ಮಹಾನುಭಾವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಾನೆತ್ತರಕ್ಕೆ ಕೊಂಡೊಯ್ದು ಚುನಾಯಿತ ಜನಪ್ರತಿನಿಧಿಗಳು ಯಾವ ರೀತಿ ಕೆಲಸ ಮಾಡಬೇಕೆಂಬುದನ್ನು ತೋರಿಸಿದ ಚತುರಮತಿ ರಾಜಕೀಯ ನಾಯಕ ಎಂದು ಅವರು ಹೇಳಿದರು.

ಸ್ತ್ರೀ ಶಕ್ತಿ ಯೋಜನೆಯ ಮೂಲಕ ಲಕ್ಷಾಂತರ ತಾಯಂದಿರು ಆರ್ಥಿಕವಾಗಿ ಸಬಲರಾಗಲು ಕಾರಣರಾಗುವುದರೊಂದಿಗೆ ಭ್ರಷ್ಠಾಚಾರ ರಹಿತ ಆಡಳಿತ ನೀಡಿ ಸಂಪುಟದ ಸದಸ್ಯರು ಮುಕ್ತವಾಗಿ ಕೆಲಸ ಮಾಡಲು ಸದಾವಕಾಶ ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಎಸ್.ಎಂ. ಕೃಷ್ಣ ಅವರು ಪ್ರಮುಖ ಕಾರಣರಾಗಿದ್ದು, ಇಷ್ಟೆ ಅಲ್ಲದೆ ತಮ್ಮ ರಾಜಕೀಯ ಜೀವನದ ಅವಧಿಯಲ್ಲಿ ಸಾವಿರಾರು ಮಂದಿ ಜನ ನಾಯಕರನ್ನು ಬೆಳೆಸಿದ ಅವರು ತಮ್ಮ ಸುದೀರ್ಘ ಜೀವನದ ಅವಧಿಯಲ್ಲಿ ಯಾರ ವಿರುದ್ದವೂ ಲಘುವಾಗಿ ಮಾತನಾಡದೆ ಅಜಾತ ಶತ್ರುವಾಗಿದ್ದರೆಂದು ಹೆಮ್ಮೆಯಿಂದ ನುಡಿದರು.

ಮಾಜಿ ಸಚಿವ ಸಾ.ರಾ. ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ. ಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ಮುಖಂಡ ಎಸ್.ಪಿ. ಆನಂದ್, ಸಾಹಿತಿ ಹೆಗ್ಗಂದೂರು ಪ್ರಭಾಕರ್ ಮಾತನಾಡಿ, ನುಡಿ ನಮನ ಸಲ್ಲಿಸಿದರು.

ಜಿಪಂ ಸದಸ್ಯ ಅಮಿತ್ ವಿ. ದೇವರಹಟ್ಟಿ, ಪುರಸಭೆ ಸದಸ್ಯರಾದ ಉಮೇಶ್, ಮಾಜಿ ಸದಸ್ಯರಾದ ರಾ.ಜ. ಶ್ರೀಕಾಂತ್, ಎನ್. ಶಿವಕುಮಾರ್, ಎಚ್.ಸಿ. ರಾಜು, ಕೆ.ಬಿ. ಸುಬ್ರಹ್ಮಣ್ಯ, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಸಂಜಯ್ ರಾಮೇಗೌಡ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾಪಂ ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಣೇಶ್, ಎಂ.ಎಸ್. ಹರಿಚಿದಂಬರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಯು. ಕೃಷ್ಣಭಟ್, ಎಂಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಹಿರಿಯ ವೈದ್ಯ ಡಾ.ಎನ್.ಡಿ. ಜಗನ್ನಾಥ್, ಪ್ರಕಾಶಕ ಸೃಷ್ಟಿನಾಗೇಶ್, ಗ್ರಾಪಂ ಸದಸ್ಯ ಬಾಲಾಜಿ ಗಣೇಶ್, ಮಾಜಿ ಸದಸ್ಯ ಪುಟ್ಟರಾಜು, ಮುಖಂಡರಾದ ಎಚ್.ಪಿ. ಗೋಪಾಲ್, ಎಚ್.ಪಿ. ಶಿವಣ್ಣ, ವೀರಭದ್ರಾಚಾರ್, ಬಿ. ರಮೇಶ್, ರಾಂಪ್ರಸಾದ್, ಡಿ.ವಿ. ಗುಡಿಯೋಗೇಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ