ಚಿಕ್ಕಮಗಳೂರು, ವಿದ್ಯಾರ್ಥಿಗಳ ಜೀವನದ ಮೇಲೆ ಎಸ್‌ಐಎಚ್ ಸಕಾರಾತ್ಮಕ ಪರಿ ಣಾಮ ಬೀರುವ ಜೊತೆಗೆ ಕಲ್ಪನೆಗಳು ಮತ್ತು ಪ್ರತಿಭೆ ಪ್ರದರ್ಶಿಸಲು ಒಂದು ವೇದಿಕೆಯಾಗಿ ಸೃಷ್ಟಿ ಗೊಂಡಿದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಹೇಳಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ವಿದ್ಯಾರ್ಥಿಗಳ ಜೀವನದ ಮೇಲೆ ಎಸ್‌ಐಎಚ್ ಸಕಾರಾತ್ಮಕ ಪರಿ ಣಾಮ ಬೀರುವ ಜೊತೆಗೆ ಕಲ್ಪನೆಗಳು ಮತ್ತು ಪ್ರತಿಭೆ ಪ್ರದರ್ಶಿಸಲು ಒಂದು ವೇದಿಕೆಯಾಗಿ ಸೃಷ್ಟಿ ಗೊಂಡಿದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಹೇಳಿದರು.ನಗರದ ಎಐಟಿ ಕಾಲೇಜು ಬಿಜಿಎಸ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಸ್ಮಾರ್ಟ್ ಇಂಡಿಯಾ ಆಂತರಿಕ ಹ್ಯಾಕಥಾನ್-2025ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಹಂತವಾಗಿ ನಡೆಯುವ ಸ್ಪರ್ಧೆಯಾಗಿದೆ. ವಿದ್ಯಾರ್ಥಿಗಳು ನಿಜ ಜೀವನದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಹಿಡಿಯಲು ಜೊತೆಗೆ ವಿದ್ಯಾರ್ಥಿ ಗಳಿಗೆ ನವೀನ ಪರಿಹಾರ ಒದಗಿಸಲು ಹ್ಯಾಕಥಾನ್ ಬಹು ಉಪಕಾರಿ ಎಂದು ತಿಳಿಸಿದರು.ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆ ಉತ್ತೇಜಿಸುವುದು, ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕ ಸಮಸ್ಯೆಗಳಿಗೆ ಅನ್ವಯಿಸಲು ಪ್ರೋತ್ಸಾಹಿಸುವುದು ಮತ್ತು ಭಾರತ ಎದುರಿಸುತ್ತಿರುವ ಸವಾಲುಗಳಿಗೆ ವಿದ್ಯಾರ್ಥಿಗಳಿಂದ ಪರಿಹಾರ ಪಡೆಯುವುದೇ ಮೂಲ ಉದ್ದೇಶ ಎಂದು ಹೇಳಿದರು.ಹ್ಯಾಕಥಾನ್‌ನ ಆವೃತ್ತಿ ಡಿಜಿಟಲ್ ಉತ್ಪನ್ನ ಅಭಿವೃದ್ಧಿ ಸ್ಪರ್ಧೆಯಾಗಿರುವುದರಿಂದ ತಂಡದ ಹೆಚ್ಚಿನ ಸದಸ್ಯರು ಪ್ರೋಗ್ರಾಮಿಂಗ್ ಕೌಶಲ್ಯಗಳನ್ನು ಚೆನ್ನಾಗಿ ತಿಳಿದಿರಬೇಕು. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ದೈನಂದಿನ ಜೀವನದಲ್ಲಿ ಎದುರಾಗುವ ನಿರ್ಣಾಯಕ ಸವಾಲುಗಳನ್ನು ಪರಿಹರಿಸುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಉಪಕ್ರಮವಾಗಿದೆ ಎಂದರು.ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಡಾ.ಸಂಪತ್ ಪ್ರಾಸ್ತಾವಿಕವಾಗಿ ಮಾತನಾಡಿ ಆಂತರಿಕ ಹ್ಯಾಕಥಾನ್ ಗಾಗಿ ತಂಡಗಳನ್ನು ಆಯ್ಕೆ ಮಾಡಲು ಮತ್ತು ಸಿದ್ಧಪಡಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಭಾಗವಹಿಸುವವರು ಸಹಯೋಗದ ತಾಂತ್ರಿಕ ಸೃಜನಶೀಲತೆ ಮೂಲಕ ನೈಜ ಸಮಸ್ಯೆಗಳಿಗೆ ನ ವೀನ ಪರಿಹಾರ ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.ವಿದ್ಯಾರ್ಥಿಗಳ ನಡುವಿನ ಸಂಬಂಧ ಬಲಪಡಿಸಲು, ಪ್ರಾಯೋಗಿಕ ವಾತಾವರಣದಲ್ಲಿ ಹೊಸ ತಂತ್ರಜ್ಞಾನ ಮತ್ತು ವಿಧಾನ ಗಳನ್ನು ಕಲಿಯಲು ಇದೊಂದು ಸುವರ್ಣವಕಾಶವಾಗಿದೆ. ಆ ನಿಟ್ಟಿನಲ್ಲಿ ವಿ ದ್ಯಾರ್ಥಿಗಳು ಆರು ಜನರ ತಂಡಗಳನ್ನು ರಚಿಸಿ ಕೊಂಡು ಹೊಸ ಹೊಸ ತಂತ್ರಜ್ಞಾನಗಳ ನಿಯಮ ಪರಿಚಯಿಸಲು ಪ್ರಯತ್ನಿಸಬೇಕು ಎಂದರು.ಈ ಸಂದರ್ಭದಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ಸತ್ಯನಾರಾಯಣ್, ಎಲೆಕ್ಟ್ರೀಕಲ್ ವಿಭಾಗದ ಮುಖ್ಯಸ್ಥ ಡಾ. ಜಿ.ಆರ್.ವೀರೇಂದ್ರ, ಎಐಎಂಸಿ ವಿಭಾಗದ ಮುಖ್ಯಸ್ಥರಾದ ಡಾ.ಸುನೀತಾ, ಡಾ.ಕಿರಣ್, ಡಾ. ಶ್ರೀಕಾಂತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.