ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯ ಅತಿಥಿಯಾಗಿ ಭಾಗವಹಿದ್ದ ಜಿಲ್ಲಾ ಆಸ್ಪತ್ರೆಯ ನೋಡಲ್ ಆಫೀಸರ್ ದಂತ ವೈದ್ಯೆ ಡಾ.ರೂಪಶ್ರೀ ಮಾತನಾಡಿ, ಪ್ರತಿ ವರ್ಷ ತಂಬಾಕು ಸೇವನೆಯಿಂದ ಲಕ್ಷಾನುಗಟ್ಟಲೆ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು, ವಿಶೇಷವಾಗಿ ಯುವಜನತೆ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಧೂಮಪಾನ ಫ್ಯಾಷನ್, ಮಹಿಳಾ ಸಬಲೀಕರಣದ ಸಂಕೇತ ಎಂಬಂತಾಗಿರುವದು ದುರ್ದೈವಕರ ಸಂಗತಿ ಎಂದರು.
ಆರ್.ಕೆ.ಎಮ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ್ ಡಾ.ನಂದಕುಮಾರ ರುದ್ರಗೌಡರ ಮಾತನಾಡಿ, ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ, ಸದೃಢ ಮನಸ್ಸು, ಸದೃಢ ದೇಹ ಹೊಂದುವುದು ಅತ್ಯವಶ್ಯಕ. ಯುವಕರು ಯಾವುದೇ ದುಶ್ಚಟಗಳಿಗೊಳಗಾಗದೆ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯ ವೈದ್ದಾಧಿಕಾರಿ ಡಾ.ರಾಜೇಶ್ವರಿ ಬಿರಾದಾರ, ಕಚೇರಿ ಅಧೀಕ್ಷಕ ದೀಪಕ ಅಥಣಿ, ಡಾ.ಇಮ್ತಿಯಾಜ್ ಕೊತ್ವಾಲ ಮತ್ತಿತರರು ಉಪಸ್ಥಿತರಿದ್ದರು.