ಧೂಮಪಾನ ಮಾಡುವುದು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸೆಕೆಂಡ್‌ಹ್ಯಾಂಡ್ ಹೊಗೆ ಎಂದು ಕರೆಯಲ್ಪಡುವ ಪರಿಸರ ತಂಬಾಕು ಹೊಗೆಯು ಎಲ್ಲಾ ವಯಸ್ಸಿನ ಜನರಲ್ಲಿ ಹಾನಿಕಾರಕ ಆರೋಗ್ಯ ಪರಿಣಾಮಗಳನ್ನು ಬೀರುತ್ತದೆ. ತಂಬಾಕು ಸೇವನೆಯಿಂದ ಮುಕ್ತರಾಗಲು ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮಾಡಿ ಚಿಕಿತ್ಸೆ ಪಡೆಯಿರಿ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ತಂಬಾಕು ಸೇವನೆಯು ಸಾಮಾನ್ಯವಾಗಿ ಹೃದಯ, ಯಕೃತ್ತು ಮತ್ತು ಶಾಸ್ವಕೋಶದ ಮೇಲೆ ಪರಿಣಾಮ ಬೀರುವ ರೋಗಗಳಿಗೆ ಕಾರಣವಾಗುವುದರ ಜೊತೆಗೆ ನ್ಯಮೋನಿಯಾ, ಹೃದಯಾಘಾತ, ಪಾರ್ಶ್ವವಾಯು, ಎಂಫಿಸೆಮಾ, ಕಾನ್ಸರ್ ಇತ್ಯಾದಿ ಮಾರಕ ರೋಗಗಳಿಗೆ ತಂಬಾಕು ಸೇವನೆ ಕಾರಣ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಕುಸುಮ ಮಂಗಳ ತಿಳಿಸಿದರು. ನಗರದ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಧೂಮಪಾನ ಮಾಡುವುದು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸೆಕೆಂಡ್‌ಹ್ಯಾಂಡ್ ಹೊಗೆ ಎಂದು ಕರೆಯಲ್ಪಡುವ ಪರಿಸರ ತಂಬಾಕು ಹೊಗೆಯು ಎಲ್ಲಾ ವಯಸ್ಸಿನ ಜನರಲ್ಲಿ ಹಾನಿಕಾರಕ ಆರೋಗ್ಯ ಪರಿಣಾಮಗಳನ್ನು ವ್ಯಕ್ತಪಡಿಸಿದರು. ಕೆಟ್ಟ ಹವ್ಯಾಸ ಕಲಿಯದಿರಿ
ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಿಜಿಯಕುಮಾರ್ ಮಾತನಾಡಿ, ಕಾಲೇಜಿನ ಇಂದಿನ ವಿದ್ಯಾರ್ಥಿಗಳು ಮುಂದಿನ ಉತ್ತಮ ಸಮಾಜದ ಪ್ರಜೆಗಳಾಗಿ ಯಾವುದೇ ಕೆಟ್ಟ ಅಭ್ಯಾಸಗಳನ್ನು ರೂಡಿಸಿಕೊಳ್ಳದೆ ತಂದೆ ತಾಯಿಗಳಿಗೆ ಕೀರ್ತಿ ತರುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ನಗರ ಆರೋಗ್ಯ ಕೇಂದ್ರದ ಡಾ. ಬಸವ ಮಂಜೇಶ್ ಮಾತನಾಡಿ, ತಂಬಾಕು ಸೇವನೆಯಿಂದ ಮುಕ್ತರಾಗಲು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮಾಡಿ ಚಿಕಿತ್ಸೆಯನ್ನು ನೀಡುವುದರ ಬಗ್ಗೆ ವಿವರಿಸಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ಘಟಕ ಮಂಜುನಾಥ್ಸ, ಹಾಯಕ ಪ್ರಾಧ್ಯಾಪಕ ಶಿವಶಂಕರ್, ಟಿಹೆಚ್ ಒ ಡಾ. ರಾಮಚಂದ್ರರೆಡ್ಡಿ ಕಾಲೇಜಿನ ಎನ್ಎಸ್ಎಸ್ ಘಟಕದ ಮುಖ್ಯಸ್ಥರು ಹಾಗೂ ಇತರೆ ಉಪನ್ಯಾಸಕರು ವಿದ್ಯಾರ್ಥಿಗಳು ತಾಲ್ಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.