ಸ್ನೇಹಕೂಟ ಮಣೂರು ದಶಮಾನೋತ್ಸವ ಲಾಂಛನ ಬಿಡುಗಡೆ

KannadaprabhaNewsNetwork |  
Published : May 07, 2025, 12:50 AM IST
6ಸ್ನೇಹ | Kannada Prabha

ಸಾರಾಂಶ

ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಲಾಂಛನ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮಣೂರಿನ ಸ್ನೇಹಕೂಟದ ಸಾಮಾಜಿಕ ಕಾರ್ಯಗಳು ಜನಮನ್ನಣೆ ಗಳಿಸಿವೆ. ಸಂಸ್ಥೆಯು ಪ್ರಸ್ತುತ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸಕರ. ಇವರ ಸಾಮಾಜಿಕ ಕಾರ್ಯಗಳು ದಶ ದಿಕ್ಕಿನಲ್ಲೂ ಪಸರಿಸಲಿ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್. ಕುಂದರ್ ಹೇಳಿದರು.

ಅವರು ಸೋಮವಾರ ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.

ನಿವೃತ್ತ ಮುಖ್ಯಶಿಕ್ಷಕ ಎಂ.ಎನ್. ಮಧ್ಯಸ್ಥ ಮಾತನಾಡಿ, ಸ್ನೇಹಕೂಟ ವಿಭಿನ್ನವಾಗಿ ಈ ಸಮಾಜದಲ್ಲಿ ಗುರುತಿಸಿಕೊಂಡಿದೆ. ಇದೀಗ ದಶಮ ಸಂಭ್ರದಲ್ಲಿದೆ. ಈ ಹತ್ತು ವರ್ಷಗಳಲ್ಲಿ ಅವರು ಕೈಗೊಂಡ ಕಾರ್ಯಗಳು ಅರ್ಥಪೂರ್ಣವಾಗಿದೆ. ಇನ್ನಷ್ಟು ವಿಶಿಷ್ಟ ರೀತಿಯ ಕಾರ್ಯಕ್ರಮಗಳೊಂದಿಗೆ ಸಮಾಜದ ಜನಮಾನಸದಲ್ಲಿ ಈ ಸಂಸ್ಥೆ ನೆಲೆಯಾಗಲಿ ಎಂದು ಶುಭ ಹಾರೈಸಿದರು.

ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆಯನ್ನು ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ. ಮಯ್ಯ ವಹಿಸಿ ದಶಮಾನೋತ್ಸವ ಲಾಂಛನದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ, ಸ್ನೇಹಕೂಟದ ಪೋಷಕರಾದ ವಿಷ್ಣುಮೂರ್ತಿ ಮಯ್ಯ, ಮಹಾಲಕ್ಷ್ಮೀ ಉರಾಳ, ಕಾರ್ಯದರ್ಶಿ ರಾಜೇಂದ್ರ ಉರಾಳ ಉಪಸ್ಥಿತರಿದ್ದರು. ಸ್ನೇಹಕೂಟದ ವನಿತಾ ಉಪಾಧ್ಯ ಸ್ವಾಗತಿಸಿದರು. ಸದಸ್ಯೆ ಸುಜಾತ ಎಂ. ಬಾಯರಿ ನಿರೂಪಿಸಿದರು. ಸ್ಮಿತರಾಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!